T20 ಸ್ವರೂಪದಲ್ಲಿ ಹಿಂದೆಂದೂ ಕಂಡಿರದ ಬದಲಾವಣೆಗೆ ಮುಂದಾದ BCCI! ಮಹತ್ವದ ಹೆಜ್ಜೆಗೆ ಕಾರಣ…

BCCI Apex Council Meeting: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಒಂದು ಓವರ್‌ ನಲ್ಲಿ ಎರಡು ಬೌನ್ಸರ್‌ ಗಳಿಗೆ ಅವಕಾಶ ನೀಡಿದೆ. ಬಿಸಿಸಿಐ ಶನಿವಾರ ಈ ಘೋಷಣೆ ಮಾಡಿದೆ.

Written by - Bhavishya Shetty | Last Updated : Jul 8, 2023, 01:42 PM IST
    • ಬಿಸಿಸಿಐ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ
    • ಜುಲೈ 7 ರಂದು ಮುಂಬೈನಲ್ಲಿ ನಡೆದ ಅಪೆಕ್ಸ್ ಕೌನ್ಸಿಲ್ ಸಭೆ
    • ಒಂದು ಓವರ್‌ ನಲ್ಲಿ ಎರಡು ಬೌನ್ಸರ್‌ ಗಳಿಗೆ ಅವಕಾಶ ನೀಡಿದೆ
T20 ಸ್ವರೂಪದಲ್ಲಿ ಹಿಂದೆಂದೂ ಕಂಡಿರದ ಬದಲಾವಣೆಗೆ ಮುಂದಾದ BCCI! ಮಹತ್ವದ ಹೆಜ್ಜೆಗೆ ಕಾರಣ…  title=
BCCI

BCCI Apex Council Meeting: ಜುಲೈ 7 ರಂದು ಮುಂಬೈನಲ್ಲಿ ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಭಾರತೀಯ ಕ್ರಿಕೆಟ್ ಮಂಡಳಿ (BCCI) ಟಿ20 ಮಾದರಿಯಲ್ಲಿ ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳಲು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಒಂದು ಓವರ್‌ ನಲ್ಲಿ ಎರಡು ಬೌನ್ಸರ್‌ ಗಳಿಗೆ ಅವಕಾಶ ನೀಡಿದೆ. ಬಿಸಿಸಿಐ ಶನಿವಾರ ಈ ಘೋಷಣೆ ಮಾಡಿದೆ.

ಇದನ್ನೂ ಓದಿ: IND vs WI ಟೆಸ್ಟ್ ಸರಣಿಗೆ ತಂಡ ಪ್ರಕಟ: ಕೊನೆಗೂ ಈ ಕಿಲಾಡಿ ಚಾಂಪಿಯನ್’ಗೆ ಮಣೆ ಹಾಕಿದ ಸಮಿತಿ!

ಬಿಸಿಸಿಐ ಟಿ20 ಮಾದರಿಯಲ್ಲಿ ಮಹತ್ವದ ಘೋಷಣೆ:

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ, ಬೌಲರ್‌ ಗಳು ಈಗ ಒಂದು ಓವರ್‌ ನಲ್ಲಿ 2 ಬೌನ್ಸರ್‌ ಗಳನ್ನು ಎಸೆಯಲು ಸಾಧ್ಯವಾಗುತ್ತದೆ. ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳುವ ಸಲುವಾಗಿ, ಮುಂಬರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪ್ರತಿ ಓವರ್‌ ಗೆ ಎರಡು ಬೌನ್ಸರ್‌ ಗಳನ್ನು ಅನುಮತಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ಇಲ್ಲಿಯವರೆಗೆ ಯಾವುದೇ ಬೌಲರ್ ಪ್ರತಿ ಓವರ್‌ ಗೆ ಒಂದು ಬೌನ್ಸರ್ ಅನ್ನು ಮಾತ್ರ ಮಾಡಬಹುದಾಗಿತ್ತು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದ್ದು, ಇದರ ಇಂಪ್ಯಾಕ್ಸ್ ಪ್ಲೇಯರ್ ನಿಯಮವು ಇಂಡಿಯನ್ ಪ್ರೀಮಿಯರ್ ಲೀಗ್‌ ನಂತೆ ಅನ್ವಯಿಸುತ್ತದೆ.

ಇದರೊಂದಿಗೆ, ಸಾಮಾನ್ಯ ಸೌಲಭ್ಯಗಳ ಕೊರತೆಯಿಂದಾಗಿ ದೇಶಾದ್ಯಂತ ಕ್ರೀಡಾಂಗಣಗಳನ್ನು ಅಪ್ಡೇಟ್ ಮಾಡಲು ಮಂಡಳಿಯು ನಿರ್ಧರಿಸಿದೆ. ಹೇಳಿಕೆಯ ಪ್ರಕಾರ, ಮೊದಲು 10 ಕ್ರೀಡಾಂಗಣಗಳನ್ನು ನವೀಕರಿಸಲಾಗುವುದು. ಇದರಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ಉಳಿದ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸಲಾಗುವುದು. "ಮೊದಲ ಹಂತದಲ್ಲಿ, ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಪಂದ್ಯಗಳನ್ನು ಆಡುವ ಪಂದ್ಯದ ಸ್ಥಳಗಳನ್ನು ನವೀಕರಿಸಲಾಗುತ್ತದೆ" ಎಂದು ಬಿಸಿಸಿಐ ಹೇಳಿದೆ. ವಿಶ್ವಕಪ್ ಆರಂಭಕ್ಕೂ ಮುನ್ನ ಈ ಕೆಲಸ ಪೂರ್ಣಗೊಳ್ಳಲಿದೆ. ಎರಡನೇ ಹಂತದಲ್ಲಿ ಇತರೆ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ.

ಇದನ್ನೂ ಓದಿ: ಏಷ್ಯಾಕಪ್’ಗೂ ಮುನ್ನ ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ: ಈ ಟೂರ್ನಿಯಲ್ಲಿ ಮತ್ತೆ ಮುಖಾಮುಖಿ.. ಕ್ಷಣಗಣನೆ ಶುರು!

ODI ವಿಶ್ವಕಪ್ 2023 ಭಾರತದಲ್ಲಿ ಈ ವರ್ಷ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆಯಲಿದೆ. ಈ ಟೂರ್ನಿಯ ಪಂದ್ಯಗಳು ದೆಹಲಿ, ಧರ್ಮಶಾಲಾ, ಹೈದರಾಬಾದ್, ಚೆನ್ನೈ, ಮುಂಬೈ, ಪುಣೆ, ಕೋಲ್ಕತ್ತಾ, ಹೈದರಾಬಾದ್, ಲಕ್ನೋ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿವೆ. ಗುವಾಹಟಿ ಮತ್ತು ತಿರುವನಂತಪುರಂನಲ್ಲಿ ಅಭ್ಯಾಸ ಪಂದ್ಯಗಳು ನಡೆಯಲಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News