ಚೆಸ್ಸಬಲ್ ಮಾಸ್ಟರ್ಸ್ ಫೈನಲ್‌ನಲ್ಲಿ ಭಾರತದ ರಮೇಶ್‌ಬಾಬು ಪ್ರಗ್ನಾನಂದಗೆ ಸೋಲು
ಚೆಸ್ಸಬಲ್ ಮಾಸ್ಟರ್ಸ್ ಆನ್‌ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಯಶಸ್ವಿ ಅಭಿಯಾನದ ನಂತರ, ಭಾರತೀಯ ಗ್ರ್ಯಾಂಡ್‌ಮಾಸ್ಟರ್ ರಮೇಶ್‌ಬಾಬು ಪ್ರಗ್ನಾನಂದ ಶುಕ್ರವಾರದಂದು ನಡೆದ ಫೈನಲ್ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ.
ನವದೆಹಲಿ: ಚೆಸ್ಸಬಲ್ ಮಾಸ್ಟರ್ಸ್ ಆನ್‌ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಯಶಸ್ವಿ ಅಭಿಯಾನದ ನಂತರ, ಭಾರತೀಯ ಗ್ರ್ಯಾಂಡ್‌ಮಾಸ್ಟರ್ ರಮೇಶ್‌ಬಾಬು ಪ್ರಗ್ನಾನಂದ ಶುಕ್ರವಾರದಂದು ನಡೆದ ಫೈನಲ್ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ.
ಅಂತಿಮ ಪಂದ್ಯದ ಕೊನೆಯ ಮುಖಾಮುಖಿಯಲ್ಲಿ ಚೀನಾದ ಡಿಂಗ್ 49-ನಡೆಯಲ್ಲಿ ನಿರ್ಣಾಯಕ ಗೆಲುವನ್ನು ಸಾಧಿಸಿದರು.ಡಿಂಗ್ ಲಿರೆನ್ ಅವರು ಅಂತಿಮ ಪಂದ್ಯದ ಟೈಬ್ರೇಕ್‌ಗಳಲ್ಲಿ ಪ್ರಗ್ನಾನಂದ ಅವರನ್ನು ಸೋಲಿಸಿದರು.
ಇದನ್ನೂ ಓದಿ: RSS ಮೆಚ್ಚಿಸಲು ಬಿಜೆಪಿ ಸರ್ಕಾರ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ: ಕಾಂಗ್ರೆಸ್
ಚೀನಾದ ಆಟಗಾರ ಡಿಂಗ್ ಲಿರೆನ್ ಮೊದಲ ಸೆಟ್ ನಲ್ಲಿ ಗೆಲುವು ಸಾಧಿಸಿದ್ದರಿಂದಾಗಿ ಎರಡನೇ ಸೆಟ್ ನಲ್ಲಿ ಪ್ರಜ್ಞಾನಂದ ಅವರು ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಯಿತು. ಆದರೆ ಪಂದ್ಯದಲ್ಲಿ ಸೋತರೂ ಪ್ರಗ್ನಾನಂದ ಅವರದ್ದು ಗಮನಾರ್ಹ ಪ್ರದರ್ಶನ ಎಂದು ಹೇಳಬಹುದು.ಈ ಹಿಂದೆ ಭಾರತದ 16 ವರ್ಷದ ಪ್ರಗ್ನಾನಂದ ಚೆಸ್ಬಲ್ ಮಾಸ್ಟರ್ಸ್ ಆನ್‌ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ವೀ ಯಿ ಅವರನ್ನು ಸೋಲಿಸಿದ್ದರು.
ಇದನ್ನೂ ಓದಿ: DK Sivakumar : 'ಒಂದು ಬಿಜೆಪಿಯವರಿಗೆ ಶರಣಾಗಬೇಕು, ಇಲ್ಲ ಅವರ ಜೊತೆ ಸೇರಿಕೊಳ್ಳಬೇಕು'
ಅಚ್ಚರಿ ಎಂದರೆ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಚೆಸ್ಸಬಲ್ ಮಾಸ್ಟರ್ಸ್ ಆನ್‌ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯ ಐದನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಸೋಲಿಸಿದ್ದರು. ಇದು ಕೇವಲ ಮೂರು ತಿಂಗಳ ಅವಧಿಯಲ್ಲಿ ಕಾರ್ಲ್‌ಸನ್ ವಿರುದ್ಧ ಪ್ರಗ್ನಾನಂದ ಅವರ ಎರಡನೇ ಗೆಲುವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.