ಇಂಡಿಯನ್ ರೇಸಿಂಗ್ ಲೀಗ್-ಎಕ್ಸಾನ್ ಮೊಬಿಲ್ ರೇಸಿಂಗ್ ಪ್ರಮೋಷನ್ಸ್ ಪಾಲುದಾರಿಕೆ: ಹೊಸ ಹಾದಿ ನಿರ್ಮಾಣ
ಎಕ್ಸ್ ಫಾರ್ಮುಲಾ ಒನ್ ಮತ್ತು ಲೆ ಮ್ಯಾನ್ಸ್ ಡ್ರೈವರ್ಸ್ ಸೇರಿದಂತೆ, ಇದರಲ್ಲಿ ಮಹಿಳೆಯರು ಮತ್ತು ಪುರುಷರು ಅಂತರ್ಗತ ಸಮಾನ ವೇದಿಕೆಯಲ್ಲಿ ರೇಸಿಂಗ್ ಮಾಡುತ್ತಾರೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳ ಕೊನೆಯ ವಾರಾಂತ್ಯಗಳಲ್ಲಿ ಮದ್ರಾಸ್ ಮೋಟಾರ್ ಇಂಟರ್ ನ್ಯಾಷನಲ್ ಸರ್ಕೀಟ್(ಎಮ್‍ಎಮ್‍ಆರ್ ಟಿ)ನಲ್ಲಿ ಕ್ರಮವಾಗಿ 2 ಮತ್ತು 3 ನೇ ಸುತ್ತುಗಳು ನಡೆಯುತ್ತವೆ. ಡಿಸೆಂಬರ್ 10-11 ರಂದು ಹೈದರಾಬಾದಿನಲ್ಲಿ ಅಂತಿಮ ಸುತ್ತು ನಡೆಯುತ್ತದೆ.
ಬೆಂಗಳೂರು: ದೇಶದಲ್ಲಿ ಮೋಟಾರ್ ಸ್ಪೋರ್ಟ್‍ಗಳನ್ನು ಕ್ರಾಂತಿಗೊಳಿಸಲು ಎಕ್ಸಾನ್ ಮೊಬಿಲ್ ಲೂಬ್ರಿಕೆಂಟ್ಸ್ ಪ್ರೈ. ಲಿ. ತನ್ನ ಅಧಿಕೃತ ಪಾಲುದಾರರಾಗಿ ಭಾರತೀಯ ರೇಸಿಂಗ್ ಲೀಗ್ ನೊಂದಿಗೆ ಸಹಯೋಗ ಮಾಡಿಕೊಳ್ಳುತ್ತಿದೆ. ನವೆಂಬರ್ 19 ರಂದು ಹೈದರಾಬಾದ್‍ನಲ್ಲಿ ಆರಂಭವಾಗುತ್ತಿರುವ, ವುಲ್ಫ್ ರೇಸಿಂಗ್‍ನಿಂದ ನಡೆಸಲ್ಪಡುವ ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್ (RPPL) ಇಂಡಿಯನ್ ರೇಸಿಂಗ್ ಲೀಗ್‍ನ ಮೊದಲ ಆವೃತ್ತಿಯು ಕೇವಲ 4-ಚಕ್ರದ ವಾಹನಗಳ ರೇಸಿಂಗ್ ಲೀಗ್ ಆಗಿದ್ದು ಆರು ನಗರ ಮೂಲದ ಫ್ರಾಂಚೈಸಿ ತಂಡಗಳನ್ನು ಒಳಗೊಂಡಿದೆ.
ಎಕ್ಸ್ ಫಾರ್ಮುಲಾ ಒನ್ ಮತ್ತು ಲೆ ಮ್ಯಾನ್ಸ್ ಡ್ರೈವರ್ಸ್ ಸೇರಿದಂತೆ, ಇದರಲ್ಲಿ ಮಹಿಳೆಯರು ಮತ್ತು ಪುರುಷರು ಅಂತರ್ಗತ ಸಮಾನ ವೇದಿಕೆಯಲ್ಲಿ ರೇಸಿಂಗ್ ಮಾಡುತ್ತಾರೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳ ಕೊನೆಯ ವಾರಾಂತ್ಯಗಳಲ್ಲಿ ಮದ್ರಾಸ್ ಮೋಟಾರ್ ಇಂಟರ್ ನ್ಯಾಷನಲ್ ಸರ್ಕೀಟ್(ಎಮ್‍ಎಮ್‍ಆರ್ ಟಿ)ನಲ್ಲಿ ಕ್ರಮವಾಗಿ 2 ಮತ್ತು 3 ನೇ ಸುತ್ತುಗಳು ನಡೆಯುತ್ತವೆ. ಡಿಸೆಂಬರ್ 10-11 ರಂದು ಹೈದರಾಬಾದಿನಲ್ಲಿ ಅಂತಿಮ ಸುತ್ತು ನಡೆಯುತ್ತದೆ.
ಇದನ್ನೂ ಓದಿ: Job Alert: ಫೆಸಿಲಿಟೆಟರ್ ಹುದ್ದೆಗೆ ಅರ್ಜಿ ಆಹ್ವಾನ
ಹೊಸ ಯುಗವನ್ನು ಬರಮಾಡಿಕೊಳ್ಳಲು ಮತ್ತು ಭಾರತದಲ್ಲಿ ಮೋಟಾರ್ ಸ್ಪೋಟ್ರ್ಸ್ ಪರಿಸರ ವ್ಯವಸ್ಥೆಯನ್ನು ರೂಪಿಸಲು ಜಾಗತಿಕ ರೇಸಿಂಗ್ ವೇದಿಕೆಗಳಲ್ಲಿ ಈ ಕ್ರೀಡೆ ಗುರುತಿಸಲ್ಪಡುವಂತೆ ಮಾಡುವುದು ಐಆರ್ ಎಲ್‍ನ ಗುರಿಯಾಗಿದೆ. F1 ಗೆ ಮೊದಲ ಐದು ಅಭಿಮಾನಿ ಮಾರುಕಟ್ಟೆಗಳಲ್ಲಿ ಈಗಾಗಲೇ ಸ್ಥಾನ ಪಡೆದಿರುವ ಎಕ್ಸಾನ್ ಮೊಬಿಲ್ ಜೊತೆಗಿನ ಪಾಲುದಾರಿಕೆಯು ಭಾರತದಲ್ಲಿ ಈ ಕ್ಷೇತ್ರಕ್ಕೆ ಮತ್ತಷ್ಟು ಮೌಲ್ಯ ಹೆಚ್ಚಿಸುವುದರ ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಮೋಟಾರ್ ಕ್ರೀಡೆಗಳಿಗೆ ಜನಪ್ರಿಯತೆ ವಿಷಯದಲ್ಲಿ ಅಮೋಘವಾದ ಬೆಳವಣಿಗೆ ಕಂಡಿದೆ.
ಪ್ರಖ್ಯಾತ ಎಪ್ರಿಲಿಯಾ 1100 cc 220 HP ಎಂಜಿನ್‍ಗಳನ್ನು ಬಳಸಿಕೊಂಡು ಅಗ್ರ ಸ್ಥಾನವನ್ನು ಪಡೆದುಕೊಳ್ಳಲು ಭಾರತದಲ್ಲಿ ಮೋಟಾರ್ ಸ್ಪೋರ್ಟ್‍ಗಳಿಗೆ ಹೊಸ ಯುಗವನ್ನು ಪ್ರಾರಂಭಿಸಲು, IRL 4 ಸುತ್ತಿನ ರೋಮಾಂಚಕಾರಿ ಆಕ್ಷನ್ ನ ಮೂಲಕ 12 ರೇಸ್‍ಗಳಲ್ಲಿ ಭಾಗವಹಿಸುವ 24 ಚಾಲಕರನ್ನು ಹೊಂದಿರುತ್ತದೆ. ಇದು ಹೈದರಾಬಾದ್‍ನಲ್ಲಿ ಭಾರತದ ಮೊದಲ FIA ಗ್ರೇಡ್‍ನ ಸ್ಟ್ರೀಟ್ ಸಕ್ರ್ಯೂಟ್‍ಗೆ ಸಾಕ್ಷಿಯಾಗಲಿದ್ದು, ಭಾರತೀಯ ಮೋಟಾರ್‍ಸ್ಪೋರ್ಟ್‍ನ ಭೂದೃಶ್ಯವನ್ನು ಬದಲಾಯಿಸುವ ಅಂತಿಮ ಗುರಿಯೊಂದಿಗೆ ಅತ್ಯಾಕರ್ಷಕ ರೇಸ್‍ಗೆ ವೇದಿಕೆಯನ್ನು ಒದಗಿಸುತ್ತದೆ. ನಗರದ ಮಧ್ಯಭಾಗಕ್ಕೆ ಸಮೀಪವಿರುವ ಈ ಟ್ರ್ಯಾಕ್, ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಲೀಗ್‍ಗೆ ಸೆಳೆಯುತ್ತದೆ.
ಎಕ್ಸಾನ್ ಮೊಬಿಲ್ ಲೂಬ್ರಿಕೆಂಟ್ಸ್ ಪ್ರೈ. ಲಿ.ನ CEO ವಿಪಿನ್ ರಾಣಾ ಮಾತನಾಡಿ, ‘ಇಂಡಿಯನ್ ರೇಸಿಂಗ್ ಲೀಗ್- ವುಲ್ಫ್ ರೇಸಿಂಗ್ ಗೆ ಬಲವನ್ನು ನೀಡುವ RPPL ನೊಂದಿಗಿನ ನಮ್ಮ ಪಾಲುದಾರಿಕೆಯು ಭಾರತದಲ್ಲಿ ಮೋಟಾರ್ ಸ್ಪೋರ್ಟ್‍ಗಳನ್ನು ಬೆಂಬಲಿಸುವ ನಮ್ಮ ಗಮನದಿಂದ ನಿರ್ಮಾಣಗೊಳ್ಳುತ್ತಿದೆ. ಅಲ್ಲಿ ರೇಸಿಂಗ್ ಉತ್ಸಾಹಿಗಳ ಸಮುದಾಯವು ಪ್ರಬಲವಾದ ಹೊಸ ಸಕ್ರ್ಯೂಟ್ ಅನ್ನು ನಿರ್ಮಿಸುತ್ತಿದೆ. ದೇಶದಲ್ಲಿ ಈ ಉದಯೋನ್ಮುಖ ಕ್ರೀಡೆಯನ್ನು ಬೆಂಬಲಿಸುವುದು ಮತ್ತು ವಿಶ್ವದರ್ಜೆಯ ಖ್ಯಾತಿ ಮತ್ತು ತಲುಪುವಿಕೆಯ ಬಲವಾದ ವೇದಿಕೆಯನ್ನು ರಚಿಸುವುದು ನಮ್ಮ ಬದ್ಧತೆ ಎಂದು ನಾವು ನಂಬುತ್ತೇವೆ. ಮೋಟಾರು ಕ್ರೀಡೆಗಳು ದೇಶಾದ್ಯಂತ ಅಗಾಧವಾದ ಸೆಳೆತವನ್ನು ಪಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಮತ್ತು ನಾವು ತಂಡಗಳಿಗೆ ನಮ್ಮ ಬೆಂಬಲವನ್ನು ನೀಡಲು ಬಯಸುತ್ತೇವೆ. ಮೋಟಾರ್ ಸ್ಪೋಟ್ರ್ಸ್ ನಲ್ಲಿ ನಿಜವಾದ ಮುಂದಿನ ದೊಡ್ಡದೊಂದು ಕಾರ್ಯಕ್ರಮವನ್ನು ನಿರ್ಮಿಸಲು ಕೊಡುಗೆ ನೀಡಲು ಬಯಸುತ್ತೇವೆ" ಎಂದರು.
MEIL ನ ನಿರ್ದೇಶಕ ಮತ್ತು RPPL ನ ಅಧ್ಯಕ್ಷ ಅಖಿಲೇಶ್ ರೆಡ್ಡಿ ಮಾತನಾಡಿ, "ನಾವು ಇಂಡಿಯನ್ ರೇಸಿಂಗ್ ಲೀಗ್ (IRL) ಅನ್ನು ಪ್ರಾರಂಭಿಸಲು ಉತ್ಸುಕರಾಗಿದ್ದೇವೆ. ಭಾರತದಲ್ಲಿನ ವಿಶಿಷ್ಟ ಲೀಗ್‍ನಲ್ಲಿ ಎಕ್ಸಾನ್‍ಮೊಬಿಲ್ ಅನ್ನು ನಮ್ಮ ಪಾಲುದಾರರನ್ನಾಗಿ ಹೊಂದಲು ನಾವು ಸಂತೋಷಪಡುತ್ತೇವೆ. IRL ನೊಂದಿಗೆ ನಾವು ಮೋಟಾರ್ ಸ್ಪೋರ್ಟ್‍ನಲ್ಲಿ ಕ್ರಾಂತಿಯನ್ನುಂಟು ಮಾಡುವ ಗುರಿಯನ್ನು ಹೊಂದಿದ್ದೇವೆ. ಮೋಟಾರ್ ಸ್ಪೋರ್ಟ್‍ಗಳ ನಕ್ಷೆಯಲ್ಲಿ ಭಾರತವನ್ನು ಮರಳಿ ತರುವುದು ಮತ್ತು ಉದಯೋನ್ಮುಖ ಭಾರತೀಯ ರೇಸಿಂಗ್ ಚಾಲಕರಿಗೆ ಅವಕಾಶಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಮುಂದಿನ 5-7 ವರ್ಷಗಳಲ್ಲಿ ಅಖಿಲ ಭಾರತೀಯ ತಂಡವನ್ನು F1 ಗೆ ಮತ್ತು ಮುಂದಿನ 10-12 ವರ್ಷಗಳಲ್ಲಿ ಅಖಿಲ ಭಾರತೀಯ ಮಹಿಳಾ ತಂಡವನ್ನು F2 ಗೆ ಕೊಂಡೊಯ್ಯುವುದು ನಮ್ಮ ಧ್ಯೇಯವಾಗಿದೆ. ಮುನ್ನಲೆಗೆ ಬಂದಿದ್ದಕ್ಕಾಗಿ ಮತ್ತು ಭಾರತದಲ್ಲಿ ಮೋಟಾರ್ ಸ್ಪೋರ್ಟ್‍ನಲ್ಲಿ ಮುಂದಿನ ಪ್ರಮುಖ ವಿಷಯವನ್ನು ನಿರ್ಮಿಸಲು ಈ ಪ್ರಯಾಣದ ಭಾಗವಾಗಿದ್ದಕ್ಕಾಗಿ ಎಕ್ಸಾನ್‍ಮೊಬಿಲ್‍ಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ" ಎಂದರು.
1978 ರ ಹಿಂದಿನ ಮೋಟಾರ್ ಸ್ಪೋರ್ಟ್‍ನಲ್ಲಿನ ಇತಿಹಾಸದೊಂದಿಗೆ, ಫಾರ್ಮುಲಾ ಒನ್ ಚಾಂಪಿಯನ್ಶಿಪ್ ಸೇರಿದಂತೆ ಜಾಗತಿಕವಾಗಿ ಮೋಟರ್ ಕ್ರೀಡೆಗಳನ್ನು ಬೆಂಬಲಿಸುವ ಶ್ರೀಮಂತ ಇತಿಹಾಸವನ್ನು ಹೊಂದಿದೆ ಎಕ್ಸಾನ್ ಮೊಬಿಲ್. ಪ್ರಸ್ತುತ ವಿಶ್ವ ಚಾಂಪಿಯಾನ್ ಒರಾಕಲ್ ರೆಡ್ ಬುಲ್ ರೇಸಿಂಗ್ ತಂಡಕ್ಕೆ Mobil 1™ ಇಂಜಿನ್ ಆಯಿಲ್ ಸರಬರಾಜು ಮಾಡುತ್ತಿರುವ ಎಕ್ಸಾನ್, ರೇಸಿಂಗ್ ಸೀಸನ್ ಉದ್ದಕ್ಕೂ ವಿಶ್ವದರ್ಜೆ ಮಟ್ಟದ ಇಂಜಿನಿಯರಿಂಗ್ ಬೆಂಬಲವನ್ನು ಒದಗಿಸುತ್ತದೆ.
ಇದನ್ನೂ ಓದಿ: ಹಿಂದೂ ಪದ ಕುರಿತ ಹೇಳಿಕೆ: ಸತೀಶ್ ಜಾರಕಿಹೊಳಿಗೆ ಚಕ್ರವರ್ತಿ ಸೂಲಿಬೆಲೆ ಬಹಿರಂಗ ಸವಾಲು!
ಇಂಡಿಯನ್ ರೇಸಿಂಗ್ ಲೀಗ್‍ನೊಂದಿಗೆ ಪ್ರಾರಂಭವಾಗಿ, ಫಾರ್ಮುಲಾ ರೀಜನಲ್ ಇಂಡಿಯನ್ ಚಾಂಪಿಯನ್‍ಶಿಪ್ ಮತ್ತು ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‍ಶಿಪ್ ಅನ್ನು ಸಹ RPPL ಆಯೋಜಿಸುತ್ತದೆ. ಫಾರ್ಮುಲಾ ರೀಜನಲ್ ಇಂಡಿಯನ್ ಚಾಂಪಿಯನ್‍ಶಿಪ್ ಮತ್ತು ಪ್ರಧಾನ ಆಡಳಿತಾತ್ಮಕ ನಿಯಂತ್ರಣ ಸಂಸ್ಥೆ ಎಫ್ ಐ ಎ (FIA)ನಿಂದ F4 ಇಂಡಿಯನ್ ಚಾಂಪಿಯನ್‍ಶಿಪ್ ಪ್ರಮಾಣೀಕರಿಸಲ್ಪಟ್ಟಿದೆ ಮತ್ತು ಚಾಂಪಿಯನ್‍ಶಿಪ್ ವಿಜೇತರಿಗೆ ಸೂಪರ್ ಲೈಸೆನ್ಸ್ ಪಾಯಿಂಟ್‍ಗಳನ್ನು ನೀಡಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.