ಕಾಂಗ್ರೆಸ್ ಟಿಕೆಟ್ ಬಿಸಿನೆಸ್: ಸಾಮಾನ್ಯ ಕಾರ್ಯಕರ್ತರ ಪಾಡೇನು? ಎಂದು ಪ್ರಶ್ನಿಸಿದ ಬಿಜೆಪಿ

ವಿಧಾನಸಭಾ ಚುನಾವಣೆ ಟಿಕೆಟ್‍ಗೆ ಅರ್ಜಿ ಸಲ್ಲಿಸಲು ದಿನಾಂಕ ನಿಗದಿಪಡಿಸಿರುವ ಕೆಪಿಸಿಸಿ ಅಧ್ಯಕ್ಷರು ಅರ್ಜಿ ಸಲ್ಲಿಸದವರಿಗೆ ಟಿಕೆಟ್ ಇಲ್ಲವೆಂದು ಈಗಲೇ ಘೋಷಣೆ ಮಾಡುವರೇ? ಅಂತಾ​ ಬಿಜೆಪಿ ಪ್ರಶ್ನಿಸಿದೆ.

Written by - Puttaraj K Alur | Last Updated : Nov 16, 2022, 04:02 PM IST
  • ಕಾಂಗ್ರೆಸ್ ಅಭ್ಯರ್ಥಿಯಾಗಲು ಅಧಿಕೃತ ಟಿಕೆಟ್ ಹರಾಜಿಗಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ
  • ಟಿಕೆಟ್‍ಗಾಗಿ ಲಕ್ಷಾಂತರ ಕಟ್ಟಿಸಿಕೊಳ್ಳುವ ಮೂಲಕ ಸ್ಥಿತಿವಂತರಿಗೆ ಮಾತ್ರ ಟಿಕೆಟ್ ಎನ್ನುವ ನಿಯಮ ಜಾರಿಗೆ ತಂದಂತಿದೆ
  • ಸಾಮಾನ್ಯ ಕಾರ್ಯಕರ್ತರು ಪೋಸ್ಟರ್ ಅಂಟಿಸಲು ಮಾತ್ರವೇ? ಎಂದು ಟೀಕಿಸಿದ ಬಿಜೆಪಿ
ಕಾಂಗ್ರೆಸ್ ಟಿಕೆಟ್ ಬಿಸಿನೆಸ್: ಸಾಮಾನ್ಯ ಕಾರ್ಯಕರ್ತರ ಪಾಡೇನು? ಎಂದು ಪ್ರಶ್ನಿಸಿದ ಬಿಜೆಪಿ  title=
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಟೀಕಿಸಿದ ಬಿಜೆಪಿ

ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಯಾಗಲು ಅಧಿಕೃತ ಟಿಕೆಟ್ ಹರಾಜಿಗಿಟ್ಟಿರುವ ಕೆಪಿಸಿಸಿ ಅಧ್ಯಕ್ಷರು, ಟಿಕೆಟ್‍ಗಾಗಿಯೇ ಲಕ್ಷಾಂತರ ಕಟ್ಟಿಸಿಕೊಳ್ಳುವ ಮೂಲಕ ಸ್ಥಿತಿವಂತರಿಗೆ ಮಾತ್ರ ಟಿಕೆಟ್ ಎನ್ನುವ ನಿಯಮ ಜಾರಿಗೆ ತಂದಂತಿದೆ. ಹೀಗಾದ್ರೆ ಸಾಮಾನ್ಯ ಕಾರ್ಯಕರ್ತರ ಪಾಡೇನು? ಎಂದು ಬಿಜೆಪಿ ಪ್ರಶ್ನಿಸಿದೆ.

#ಕಾಂಗ್ರೆಸ್‌ಟಿಕೆಟ್‌ಬಿಸಿನೆಸ್ ಹ್ಯಾಶ್ ಟ್ಯಾಗ್ ಬಳಸಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದೆ. ‘ಕಾಂಗ್ರೆಸ್ ಪಕ್ಷದ ಟಿಕೆಟ್‌ಗೆ ಅರ್ಜಿ ಸಲ್ಲಿಸಲು ಲಕ್ಷಾಂತರ ಕಟ್ಟಬೇಕೆಂಬ ಕಟ್ಟಪ್ಪಣೆ ಮಾಡುವ ಮೂಲಕ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಇಲ್ಲ ಎನ್ನುವ ಸಂದೇಶ ಸಾರಲಾಗಿದೆ. ಸಾಮಾನ್ಯ ಕಾರ್ಯಕರ್ತರು ಪೋಸ್ಟರ್ ಅಂಟಿಸಲು ಮಾತ್ರವೇ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಮಗು ಬಿಟ್ಟು ವಿವಾಹಿತನ ಜೊತೆ ಶಿಕ್ಷಕಿ ಎಸ್ಕೇಪ್! ಲವ್ ಜಿಹಾದ್ ಅನುಮಾನ

‘ಅರ್ಜಿ ಸಲ್ಲಿಸಲು ದಿನಾಂಕ ನಿಗದಿಪಡಿಸಿರುವ ಕೆಪಿಸಿಸಿ ಅಧ್ಯಕ್ಷರು ಅರ್ಜಿ ಸಲ್ಲಿಸದವರಿಗೆ ಟಿಕೆಟ್ ಇಲ್ಲ ಎಂದು ಈಗಲೇ ಘೋಷಣೆ ಮಾಡುವರೇ? ಅಥವಾ ಹೆಚ್ಚಿನ ದುಡ್ಡು ಕೊಡುವವರಿಗೆ ಬ್ಲಾಕ್‌ನಲ್ಲಿ ಮಾರಿಕೊಳ್ಳುವರೇ?’ ಎಂದು ಬಿಜೆಪಿ ಕುಟುಕಿದೆ.

ಖದ್ದು ಅರ್ಜಿ ಸಲ್ಲಿಸಿರುವ ಡಿಕೆಶಿ

ವಿಧಾನಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಿಗೆ ಮಂಗಳವಾರ ಸಿಹಿಸುದ್ದಿ  ನೀಡಿರುವ ಕಾಂಗ್ರೆಸ್, ಟಿಕೆಟ್‍ಗಾಗಿ ಅರ್ಜಿ ಸಲ್ಲಿಕೆ ಅವಧಿಯನ್ನು ನವೆಂಬರ್ 21ರವರೆಗೆ ವಿಸ್ತರಿಸಿದೆ.

ಇದನ್ನೂ ಓದಿ: ನವೆಂಬರ್‌ 19 ಹಾಗೂ 20 ರಂದು ಬೆಂಗಳೂರಿನಲ್ಲಿ ಡಾಗ್‌ ಷೋ- ಮುಧೋಳ ಶ್ವಾನವೂ ಭಾಗಿ

ಕಾಂಗ್ರೆಸ್ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಲು ಬುಧವಾರ(ನ.16) ಕೊನೆಯ ದಿನವಾಗಿತ್ತು. ಆದರೆ ಅವಧಿ ವಿಸ್ತರಿಸುವಂತೆ ಟಿಕೆಟ್ ಆಕಾಂಕ್ಷಿಗಳಿಂದ ಒತ್ತಡ ಹೆಚ್ಚಾದ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 6 ದಿನಗಳ ಕಾಲ ಅವಧಿ ವಿಸ್ತರಣೆ ಮಾಡಿದ್ದಾರೆ. ಕಾಂಗ್ರೆಸ್ ಟಿಕೆಟ್​ಗಾಗಿ ಖುದ್ದು ಡಿಕೆಶಿಯವರೇ ಅರ್ಜಿ ಸಲ್ಲಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News