World Boxing Championship: ಭಾರತದ ಸ್ಟಾರ್ ಬಾಕ್ಸರ್ ನಿಖತ್ ಜರೀನ್ ಭಾನುವಾರ ಅಬ್ಬರದ ಆಟ ಪ್ರದರ್ಶಿಸಿದ್ದಾರೆ. 50 ಕೆಜಿ ವಿಭಾಗದಲ್ಲಿ ವಿಯೆಟ್ನಾಂನ ನ್ಗುಯೆನ್ ಥಿ ಟಾಮ್ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ಅವರು ವಿಶ್ವ ಚಾಂಪಿಯನ್ ಗೌರವಕ್ಕೆ ಪಾತ್ರರಾಗಿದ್ದಾರೆ. ಇದು ಅವರ ಎರಡನೇ ವಿಶ್ವ ಪ್ರಶಸ್ತಿಯಾಗಿದೆ. ಇದರೊಂದಿಗೆ ನಿಖತ್ ಭಾರತದ ಮತ್ತೊರ್ವ ಸರ್ವಶ್ರೇಷ್ಠ ಮಹಿಳಾ ಬಾಕ್ಸರ್ ಮೇರಿ ಕೋಮ್ ಬಳಿಕ ಈ ಪ್ರಶಸ್ತಿಯನ್ನು ಎರಡನೇ ಬಾರಿಗೆ ಪಡೆದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 


COMMERCIAL BREAK
SCROLL TO CONTINUE READING

ನಿಖತ್ ಎರಡನೇ ವಿಶ್ವ ಪ್ರಶಸ್ತಿ ಇದು
ಭಾನುವಾರ ನಡೆದ 50 ಕೆಜಿ ವಿಭಾಗದ ಫೈನಲ್‌ನಲ್ಲಿ ಭಾರತದ ಸ್ಟಾರ್  ಬಾಕ್ಸರ್ ನಿಖತ್ ಝರೀನ್ ವಿಯೆಟ್ನಾಂನ ನ್ಗುಯೆನ್ ಥಿ ಟಾಮ್ ಅವರನ್ನು 5-0 ಭಾರಿ ಅಂತರದಲ್ಲಿ ಸೋಲಿಸಿದ್ದಾರೆ. ಇದು ನಿಖತ್ ವೃತ್ತಿ ಜೀವನದಲ್ಲಿ ಎರಡನೇ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯಾಗಿದೆ. ಈ ಮೂಲಕ ನಿಖತ್ ಪ್ರತಿಷ್ಠಿತ ಬಾಕ್ಸರ್ ಎಂಸಿ ಮೇರಿ ಕೋಮ್ (ಆರು ಬಾರಿ ವಿಶ್ವ ಚಾಂಪಿಯನ್) ನಂತರ ಎರಡು ಬಾರಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಸ್ಟಾರ್ ಮಹಿಳಾ ಬಾಕ್ಸರ್ ಎಂದೆನಿಸಿಕೊಂಡಿದ್ದಾರೆ.


ಭಾರತಕ್ಕೆ ಮೂರನೇ ಚಿನ್ನ
ಇದು ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕವಾಗಿದೆ. ಇದಕ್ಕೂ ಮುನ್ನ ಶನಿವಾರ ನೀತು ಘಂಘಾಸ್ (48 ಕೆಜಿ) ಮತ್ತು ಸ್ವೀಟಿ ಬೂರಾ (81 ಕೆಜಿ) ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಆತಿಥೇಯ ಭಾರತ ಚಿನ್ನದ ಪದಕಗಳ ವಿಷಯದಲ್ಲಿ ತನ್ನ ಅತ್ಯುತ್ತಮ ಪ್ರದರ್ಶನವನ್ನು ಸರಿಗಟ್ಟುವತ್ತ ಸಾಗುತ್ತಿದೆ. ಭಾರತವು 2006 ರಲ್ಲಿ ತನ್ನ ಅತಿಥೇಯದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಿತ್ತು, ಅದರಲ್ಲಿ ದೇಶದ ಹೆಸರಿಗೆ  8 ಪದಕಗಳು ಬಂದಿದ್ದವು.


ಇದನ್ನೂ ಓದಿ-ವಿಶೇಷ ವ್ಯಕ್ತಿ ಜೊತೆ ಮಾವಿನಹಣ್ಣು ತಿಂದ Sachin Tendulkar! ಯಾರು ಗೊತ್ತಾ ಆ ಸ್ಪೆಷಲ್ ಪರ್ಸನ್!


ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೂ ಚಿನ್ನ ಗೆದ್ದಿದ್ದಾರೆ
ನಿಜಾಮಾಬಾದ್ ಮೂಲದ ನಿಖತ್ ಝರೀನ್ ಈ ಹಿಂದೆ ಅಂಟಲ್ಯದಲ್ಲಿ ನಡೆದ 2011 ಎಐಬಿಎ ಮಹಿಳಾ ಯುವ ಮತ್ತು ಜೂನಿಯರ್ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಕಳೆದ ವರ್ಷ ಇಸ್ತಾಂಬುಲ್‌ನಲ್ಲಿ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಬರ್ಮಿಂಗ್‌ಹ್ಯಾಮ್ 2022-ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕೂಡ ನಿಖತ್ ಚಿನ್ನದ ಪದಕವನ್ನು ಪಡೆದಿದ್ದಾರೆ.

ಇದನ್ನೂ ಓದಿ-ಈ ಬಾರಿಯ IPLನಲ್ಲಿ Virat Kohli ಮಾಡಲಿದ್ದಾರೆ ಹಲವು ದಾಖಲೆಗಳು! ಈ ಅಂಕಿಅಂಶ ನೋಡಿ ಗೊತ್ತಾಗುತ್ತೆ


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.