ವಿಶೇಷ ವ್ಯಕ್ತಿ ಜೊತೆ ಮಾವಿನಹಣ್ಣು ತಿಂದ Sachin Tendulkar! ಯಾರು ಗೊತ್ತಾ ಆ ಸ್ಪೆಷಲ್ ಪರ್ಸನ್!

Sachin Tendulkar Emotional Video: ಸಚಿನ್ ತಮ್ಮ ನಿವೃತ್ತಿಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರ ಪೋಸ್ಟ್‌’ಗಾಗಿ ಅಭಿಮಾನಿಗಳು ಕೂಡ ಕಾಯುತ್ತಿರುತ್ತಾರೆ. ಕೆಲವೊಮ್ಮೆ ಅವರು ತಮ್ಮ ಫೋಟೋಗಳನ್ನು, ವೀಡಿಯೊಗಳನ್ನು ಶೇರ್ ಮಾಡುತ್ತಾ, ಆ ಮೂಲಕ ವಿಶೇಷವಾದದ್ದನ್ನು ಅಭಿಮಾನಿಗಳ ಜೊತೆಗೆ ಹೇಳುತ್ತಿರುತ್ತಾರೆ.

Written by - Bhavishya Shetty | Last Updated : Mar 26, 2023, 06:13 PM IST
    • ಸಚಿನ್ ತಮ್ಮ ನಿವೃತ್ತಿಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.
    • ಅವರ ಪೋಸ್ಟ್‌’ಗಾಗಿ ಅಭಿಮಾನಿಗಳು ಕೂಡ ಕಾಯುತ್ತಿರುತ್ತಾರೆ.
    • ಫೋಟೋಗಳನ್ನು, ವೀಡಿಯೊಗಳನ್ನು ಶೇರ್ ಮಾಡುತ್ತಾ ಆ ಮೂಲಕ ವಿಶೇಷವಾದದ್ದನ್ನು ಅಭಿಮಾನಿಗಳ ಜೊತೆಗೆ ಹೇಳುತ್ತಿರುತ್ತಾರೆ.
ವಿಶೇಷ ವ್ಯಕ್ತಿ ಜೊತೆ ಮಾವಿನಹಣ್ಣು ತಿಂದ Sachin Tendulkar! ಯಾರು ಗೊತ್ತಾ ಆ ಸ್ಪೆಷಲ್ ಪರ್ಸನ್!
Sachin Tendulkar

Sachin Tendulkar Emotional Video: ವಿಶ್ವದ ಶ್ರೇಷ್ಠ ಬ್ಯಾಟ್ಸ್‌’ಮನ್‌’ಗಳಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್ ಪ್ರಸ್ತುತ ತಮ್ಮ ನಿವೃತ್ತಿ ಜೀವನವನ್ನು ಪೂರ್ಣವಾಗಿ ಆನಂದಿಸುತ್ತಿದ್ದಾರೆ. ಅವರು ಆಗಾಗ ತಮ್ಮ ಫೋಟೋ-ವೀಡಿಯೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಇಂದು ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಆ ಪೋಸ್ಟ್’ನಲ್ಲಿ ಅವರು ತಮ್ಮ ತಾಯಿಯೊಂದಿಗೆ ಇದ್ದಾರೆ. ಜನರು ಈ ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದಾರೆ.

ಇದನ್ನೂ ಓದಿ: Emotional Video: ಮರೆಯಾದ ಮಮತೆಗೆ ಹಂಬಲ! ಅಮ್ಮನ ಸಮಾಧಿ ಮುಂದೆ ಕಂದನ ಸ್ವಗತ; ಕಟುಕನ ಮನವೂ ಕರಗುವ ವಿಡಿಯೋ

ಸಚಿನ್ ತಮ್ಮ ನಿವೃತ್ತಿಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರ ಪೋಸ್ಟ್‌’ಗಾಗಿ ಅಭಿಮಾನಿಗಳು ಕೂಡ ಕಾಯುತ್ತಿರುತ್ತಾರೆ. ಕೆಲವೊಮ್ಮೆ ಅವರು ತಮ್ಮ ಫೋಟೋಗಳನ್ನು, ವೀಡಿಯೊಗಳನ್ನು ಶೇರ್ ಮಾಡುತ್ತಾ, ಆ ಮೂಲಕ ವಿಶೇಷವಾದದ್ದನ್ನು ಅಭಿಮಾನಿಗಳ ಜೊತೆಗೆ ಹೇಳುತ್ತಿರುತ್ತಾರೆ.

49 ವರ್ಷದ ಸಚಿನ್ ಶೇರ್ ಮಾಡಿರುವ ವಿಡಿಯೋದಲ್ಲಿ ಮಾವಿನ ಹಣ್ಣು ತಿನ್ನುತ್ತಾ ಸ್ಪೆಷಲ್ ವ್ಯಕ್ತಿಯೊಬ್ಬರ ಜೊತೆ ಸಮಯ ಕಳೆಯುತ್ತಿದ್ದಾರೆ. “ನಾನು ಋತುವಿನ ಮೊದಲ ಮಾವಿನಕಾಯಿಯನ್ನು ತಿನ್ನುತ್ತಿದ್ದೇನೆ. ತುಂಬಾ (15 ಬಾರಿ ಬರೆದುಕೊಂಡಿದ್ದಾರೆ) ವಿಶೇಷ ವ್ಯಕ್ತಿ ಜೊತೆ ಎಂದು ಹೇಳಿದ್ದಾರೆ.  

 

ಈ ಪೋಸ್ಟ್ ಬಗ್ಗೆ ಜನರು ಸಾಕಷ್ಟು ಪ್ರೀತಿಯನ್ನು ತೋರಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಸಾವಿರಾರು ಸೋಶಿಯಲ್ ಮೀಡಿಯಾ ಬಳಕೆದಾರರು ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಸುಮಾರು ಅರ್ಧ ಗಂಟೆಯಲ್ಲಿ 500ಕ್ಕೂ ಹೆಚ್ಚು ಬಳಕೆದಾರರು ಈ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಊಟಕ್ಕೆ ಮುಂಚೆ ಬಾದಾಮಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ?

ಸಚಿನ್ 2013 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ವಿದಾಯ ಹೇಳಿದ್ದರು. ಅವರ ಕೊನೆಯ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಅವರ ತಾಯಿ ಕೂಡ ಕ್ರೀಡಾಂಗಣದಲ್ಲಿ ಹಾಜರಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News