Olympics 2024 Day 2 Updates: ಶೂಟರ್ ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಕಂಚು ಗೆದ್ದಿದ್ದು, ಈ ಮೂಲಕ ಭಾರತಕ್ಕೆ ಮೊದಲ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಮಹಿಳೆಯರ 10 ಮೀ ಏರ್ ಪಿಸ್ತೂಲ್ ಫೈನಲ್‌ʼನಲ್ಲಿ ಗೆಲುವು ಸಾಧಿಸಿದ ಮನು ಭಾಕರ್ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಂದು ಚಾಕ್ಲೇಟ್‌ ರ್ಯಾಪರ್ ಕಟ್ಟಿ ಹಣ ಸಂಪಾದಿಸ್ತಿದ್ದವರು ಇಂದು ಕನ್ನಡದ ಸ್ಟಾರ್‌ ನಟಿ... ನಂಬರ್ 1 ನಿರೂಪಕಿ​! ಯಾರು ಗೊತ್ತಾಯ್ತಾ?


ಈ ಗೆಲುವಿನ ಮೂಲಕ ಒಲಂಪಿಕ್ ಗೇಮ್ಸ್‌ ಶೂಟಿಂಗ್‌ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಭಾಕರ್ ಪಾತ್ರರಾಗಿದ್ದಾರೆ. ಇನ್ನೊಂದೆಡೆ, ಅರ್ಜುನ್ ಬಾಬುತಾ ಮತ್ತು ರಮಿತಾ ಜಿಂದಾಲ್ ಅವರು ಪುರುಷರ ಮತ್ತು ಮಹಿಳೆಯರ 10 ಮೀಟರ್ ಏರ್ ರೈಫಲ್ ಫೈನಲ್‌ʼಗೆ ಅರ್ಹತೆ ಪಡೆಯುವ ಮೂಲಕ ಭಾರತದ ಪದಕದ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.


ಇದನ್ನೂ ಓದಿ: ಕೊನೆಗೂ ರಿವೀಲ್‌ ಆಯ್ತು ನಟಿ ಅನುಷ್ಕಾ ಶರ್ಮಾ ಬ್ಯೂಟಿ ಸೀಕ್ರೆಟ್!‌ 36ರ ಹರೆಯದಲ್ಲೂ ತ್ವಚೆ ಫಳಫಳ ಅಂತಾ ಹೊಳೆಯಲು ಕಾರಣ ಈ ಎಣ್ಣೆ ಮಸಾಜ್‌


ಇನ್ನು ಈ ಗೆಲುವಿನ ಬಳಿಕ ಮಾತನಾಡಿದ ಮನು, "ಇದು ಭಾರತಕ್ಕೆ ದೀರ್ಘ ಕಾಲದ ಪದಕವಾಗಿತ್ತು. ಭಾರತವು ಇನ್ನೂ ಹೆಚ್ಚಿನ ಪದಕಗಳಿಗೆ ಅರ್ಹವಾಗಿದೆ. ನಾವು ಈ ಬಾರಿ ಸಾಧ್ಯವಾದಷ್ಟು ಪದಕಗಳನ್ನು ಗೆಲ್ಲಲು ಎದುರು ನೋಡುತ್ತಿದ್ದೇವೆ. ವೈಯಕ್ತಿಕವಾಗಿ ನನಗೆ ಈ ಸಾಧನೆ ಖುಷಿ ತಂದಿದೆ. ನಾನು ಕೊನೆಯ ಹಂತದವರೆಗೂ ಸಾಕಷ್ಟು ಪ್ರಯತ್ನ ಮಾಡಿದ್ದೇನೆ" ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews