Indias playing 11: ಟಿ20 ವಿಶ್ವಕಪ್‌ 2024 ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್‌ ಪಟ್ಟ ಗಿಟ್ಟಿಸಿಕೊಂಡಿದೆ. ಭಾರಿ ಪೈಪೋಟಿ ನಡುವೆಯೂ ಟಿಂ ಇಂಡಿಯಾ ಆಟವನ್ನು ವಾಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೆ ಇದೀಗ ಭಾರತ ತಂಡ ಜಿಂವಾವೆ ಪ್ರವಾಸಕ್ಕೆ ಸಜ್ಜಾಗಿ ನಿಂತಿದೆ. ತಂಡದ ಆಟಗಾರರ ಪಟ್ಟಿ ರಿಲೀಸ್‌ ಆಗಿದ್ದು ಐಪಿಎಲ್‌ನಲ್ಲಿ ಸ್ಟಾರ್‌ ಆಗಿ ಮಿಂಚಿದ್ದ ಯುವ ಪ್ರತಿಭೆಗಳಿಗೆ ತಂಡದಲ್ಲಿ ಅವಕಾಶ ಕೊಡಲಾಗಿದೆ. 


COMMERCIAL BREAK
SCROLL TO CONTINUE READING

ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗಿರುವ ತಂಡದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿದೆ. ಎರಡು ದಿನಗಳ ಹಿಂದೆ ವಿಶ್ವಕಪ್ ಗೆದ್ದಿದ್ದ ಟೀಂ ಇಂಡಿಯಾ ಬೆರಿಲ್ ಚಂಡಮಾರುತದ ಪ್ರಭಾವದಿಂದ ಬಾರ್ಬಡೋಸ್ ನಲ್ಲಿ ಸಿಲುಕಿಕೊಂಡಿದೆ. ತಂಡದ ಭಾಗವಾಗಿದ್ದ ಸಂಜು ಸ್ಯಾಮ್ಸನ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಜಿಂಬಾಬ್ವೆ ಪ್ರವಾಸದ ಮೊದಲ ಎರಡು ಟಿ20 ಪಂದ್ಯಗಳಿಂದ ಬಿಸಿಸಿಐ ಕೈಬಿಟ್ಟಿದೆ.


 ಈ ಮೂವರು ಆಟಗಾರರ ಸ್ಥಾನಕ್ಕೆ ಐಪಿಎಲ್‌ನಲ್ಲಿ ಶಕ್ತಿ ಪ್ರದರ್ಶನ ನೀಡಿರುವ ಹರ್ಷಿತ್ ರಾಣಾ, ಸಾಯಿ ಸುದರ್ಶನ್ ಮತ್ತು ಜಿತೇಶ್ ಶರ್ಮಾ ಆಯ್ಕೆಯಾಗಿದ್ದಾರೆ.ವಿಶ್ವಕಪ್‌ನಲ್ಲಿ ಆಡಿದ ಎಲ್ಲಾ ಹಿರಿಯ ಆಟಗಾರರಿಗೆ ಈ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ. ಇನ್ನೂ ಜಿಂಬಾವೆ ಪ್ರವಾಸದಲ್ಲಿ ಶುಭಮನ್ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಐದು ಟಿ20 ಸರಣಿಗಳನ್ನು ಆಡಲಿದೆ.


ಎನ್‌ಸಿಎ(NCI) ನಿರ್ದೇಶಕ ವಿವಿಎಸ್ ಲಕ್ಷ್ಮಣ್(VVI Lakshman)  ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಜಿಂಬಾವೆ ಪ್ರವಾಸಕ್ಕಾಗಿ ಯುವ ಪಡೆ ಈಗಾಗಲೆ ಜಿಂಬಾಬ್ವೆಗೆ ಬಂದಿಳಿದಿದೆ. ಬುಧವಾರದಿಂದಲೇ ಪಂದ್ಯಕ್ಕೆ ತಯಾರಿ ಆರಂಭವಾಗಲಿದ್ದು,  ಈ ಐದು ಟಿ20 ಸರಣಿಯ ಮೊದಲ ಪಂದ್ಯ ಶನಿವಾರ, ಜುಲೈ 6 ರಂದು ಹರಾರೆಯಲ್ಲಿ ನಡೆಯಲಿದೆ. 


ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೇಲಾ ಅವರ ಅನುಪಸ್ಥಿತಿಯು ಐಪಿಎಲ್ ಆಟಗಾರರ ಚೊಚ್ಚಲ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿದೆ. ಯಶಸ್ವಿ ಜೈಸ್ವಾಲ್ ನಿರ್ಗಮನದ ಹಿನ್ನೆಲೆಯಲ್ಲಿ ರುತುರಾಜ್ ಗಾಯಕ್ ವಾಡ್‌ಗೆ  ಹಾದಿ ಸುಗಮವಾದಂತೆ ಕಾಣುತ್ತಿದೆ.


ಸಂಜು ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ಧ್ರುವ್ ಜುರೆಲ್ ವಿಕೆಟ್ ಕೀಪರ್ ಆಗಿ ಕಣಿಸಿಕೊಳ್ಳಲಿದ್ದಾರೆ. ಆ ಮೂಲಕ ಜಿತೇಶ್ ಶರ್ಮಾ ಬೆಂಚ್ ಗೆ ಸೀಮಿತವಾಗಲಿದ್ದಾರೆ. ಶಿವಂ ದುಬೆ ಪಂದ್ಯಕ್ಕೆ ಅಲಭ್ಯವಾಗಿರುವುದರಿಂದ ರಯಾನ್ ಪರಾಗ್ ಅಂತಿಮ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.  ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಪರಾಗ್‌ ಟೀಂ ನಲ್ಲಿ ಬ್ಯಾಟ್ ಮಾಡಬಹುದು ಎಂದು ಅಂದಾಜಿಸಲಾಗಿದೆ.


ಇನ್ನೂ, ವಿಶ್ವಕಪ್ ತಂಡದಲ್ಲಿರುವ ಮೀಸಲು ಆಟಗಾರ ರಿಂಕು ಸಿಂಗ್ ಫಿನಿಶರ್ ಆಗಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಸ್ಪಿನ್ ಆಲ್ ರೌಂಡರ್ ಆಗಿ ವಾಷಿಂಗ್ಟನ್ ಸುಂದರ್,  ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್ ಮತ್ತು ಮುಖೇಶ್ ಕುಮಾರ್ ವೇಗಿಗಳಾಗಿ ಕಣಕ್ಕಿಳಿಯಲಿದ್ದಾರೆ.


ಟೀಂ ಇಂಡಿಯಾ ಪ್ಲೇಯಿಂಗ್‌ XI:
ರುತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್ , ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ರಿಂಕು ಸಿಂಗ್, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್ ಅಥವಾ ಹರ್ಶಿತ್ ಅಹ್ಮದ್.