ಐಪಿಎಲ್ 2018: ವಿಫಲವಾದ ರಸೆಲ್ ಆಟ, ಬಿಲ್ಲಿಂಗ್ಸ್ ಹೊಡೆತಕ್ಕೆ ಕೊಲ್ಕತ್ತಾ ಕಂಗಾಲು
ಚೆನ್ನೈ : ಕಾವೇರಿದ ಪ್ರತಿಭಟನೆಯ ನಡುವೆ ಇಲ್ಲಿನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ಪ್ರಾರಂಭವಾದ ಪಂದ್ಯದಲ್ಲಿ ಚೆನ್ನೈ ತಂಡವು ಟಾಸ್ ಗೆದ್ದು ಮೊದಲು ಫಿಲ್ಡಿಂಗ್ ಆಯ್ದುಕೊಂಡಿತು.
ಮೊದಲು ಬ್ಯಾಟಿಂಗ್ ಆರಂಭಿಸಿದ ಕೊಲ್ಕತ್ತಾ ನೈಟ್ ರೈಡೆರ್ಸ್ ತಂಡವು ಆಂಡ್ರೆ ರಸೆಲ್ ರ ಭರ್ಜರಿ ಬ್ಯಾಟಿಂಗ್ ನಿಂದಾಗಿ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿತು.ರಸೆಲ್ ಕೆವೆಲ್ 36 ಎಸೆತಗಳಲ್ಲಿ 11 ಭರ್ಜರಿ ಸಿಕ್ಸರ್ ಹಾಗೂ ಒಂದು ಬೌಂಡರಿ ಒಳಗೊಂಡು 88 ರನ್ ಕಲೆ ಹಾಕಿದರು. ಆ ಮೂಲಕ ಕೊಲ್ಕತ್ತಾ ತಂಡವು ಉತ್ತಮ ಮೊತ್ತ ಗಳಿಸಿತು.
ಈ ಮೊತ್ತವನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಸ್ಯಾಮ್ ಬಿಲ್ಲಿಂಗ್ಸ್ ಕೇವಲ 23 ಎಸೆತಗಳಲ್ಲಿ 56 ರನ್ ಸಿಡಿಸುವ ಮೂಲಕ ಕೊಲ್ಕತ್ತಾ ಗೆಲುವಿನ ಕನಸನ್ನು ನುಚ್ಚು ನೂರು ಮಾಡಿದರು. ಚೆನ್ನೈ ಪರ ಶೇನ್ ವಾಟ್ಸನ್ (42) ಅಂಬಟಿ ರಾಯಡು(39) ಕೂಡ ತಂಡದ ಗೆಲುವಿಗೆ ನೆರವಾದರು. ಚೆನ್ನೈ ತಂಡವು 19.5 ಓವರ್ ಗಳಲ್ಲಿ ಐದು ವಿಕೆಟ್ 205 ರನ್ ಗಳಿಸಿತು.