ನವದೆಹಲಿ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ 38ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.


COMMERCIAL BREAK
SCROLL TO CONTINUE READING

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಪತನಕ್ಕೆ 164 ರನ್ ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಸತತ ದಾಖಲೆಯ ಎರಡನೇ ಶತಕವನ್ನು ಗಳಿಸಿದ ಶಿಖರ್ ಧವನ್ ತಂಡಕ್ಕೆ ಆಸರೆಯಾದರು. ಕೇವಲ 61 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್ ಗಳ ನೆರವಿನಿಂದಾಗಿ 106 ರನ್ ಗಳಿಸಿ ಕೊನೆಯವರೆಗೂ ಅಜೇಯರಾಗಿ ಉಳಿದರು.


ಶೇನ್ ವಾಟ್ಸನ್ ಹೆಸರಿಸಿದ ಸಾರ್ವಕಾಲಿಕ ಟಾಪ್ 5 ಟಿ-20 ಬೌಲರ್‌ಗಳಲ್ಲಿ ಸ್ಥಾನ ಪಡೆದ ಭಾರತೀಯ ಬೌಲರ್ !



ಪಂಜಾಬ್ ತಂಡದ ಪರವಾಗಿ ಬಿಗುವಿನ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಶಮಿ (4-0-28-2) ಹಾಗೂ ಮ್ಯಾಕ್ಸ್ ವೆಲ್ (4-0-31-1)ಹಾಗೂ ಎಂ ಅಶ್ವಿನ್ ((4-0-33-1) ದೆಹಲಿ ಕ್ಯಾಪಿಟಲ್ಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು.



ಡೆಲ್ಲಿ ನೀಡಿದ 165 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡಕ್ಕೆ  ಆರಂಭದಲ್ಲಿಯೇ ತಂಡದ ಮೊತ್ತ 17-1 ಆದಾಗ ನಾಯಕ ಕೆ.ಎಲ್ ರಾಹುಲ್ ಅವರ ವಿಕೆಟ್ ನ್ನು ಕಳೆದುಕೊಂಡು ಆಘಾತ ಎದುರಿಸಿತು. ಇನ್ನೊಂದೆಡೆ ಕ್ರಿಸ್ ಗೇಲ್ ಅವರು ಕೇವಲ 13 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು, ಇದಾದ ಬೆನ್ನಲ್ಲೇ ಮಾಯಂಕ್ ಅಗರವಾಲ್ ಅವರು ರನ್ ಔಟ್ ಆಗಿ ಹೊರ ನಡೆದಾಗ ಪಂದ್ಯ ಕಿಂಗ್ಸ್ ಇಲೆವನ್ ಪಂಜಾಬ್ ಮತ್ತೆ ಅಪಾಯಕ್ಕೆ ಸಿಲುಕಿತು.ಆದರೆ ನಿಕೊಲಸ್ ಪೂರಣ್ ಗಳಿಸಿದ ಸ್ಪೋಟಕ ಅರ್ಧಶತಕದಿಂದಾಗಿ ಪಂಜಾಬ್ ತಂಡವನ್ನು ಗೆಲುವಿನ ಗುರಿಗೆ ತಲುಪುವಂತೆ ಮಾಡಿದರು. ಇವರಿಗೆ ಮ್ಯಾಕ್ಸ್ ವೆಲ್ ಕೂಡ 32 ರನ್ ಗಳಿಸುವ ಮೂಲಕ ಇಂದು ಆಲ್ ರೌಂಡ್ ಪ್ರದರ್ಶನ ನೀಡಿದರು.


ಕೊನೆಯಲ್ಲಿ ದೀಪಕ್ ಹೂಡಾ 15 ಹಾಗೂ ಜೇಮ್ಸ್ ನಿಶಾಂ ಅವರು 10 ರನ್ ಗಳಿಸುವ ಮೂಲಕ ಇನ್ನು 6 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು