ನವದೆಹಲಿ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಚೆನ್ನೈ ಮತ್ತು ರಾಜಸ್ತಾನ್ ರಾಯಲ್ಸ್ ಐಪಿಎಲ್ ಪಂದ್ಯದಲ್ಲಿ ರಾಜಸ್ತಾನ ತಂಡವು 16 ರನ್ ಗಳ ರೋಚಕ ಗೆಲುವು ಸಾಧಿಸಿದೆ.


COMMERCIAL BREAK
SCROLL TO CONTINUE READING

ಚೆನ್ನೈ ತಂಡವು  ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.ರಾಜಸ್ತಾನ್ ತಂಡದ ಪರವಾಗಿ ಸ್ಟೀವನ್ ಸ್ಮಿತ್ 69 ಹಾಗೂ ಸ್ಯಾಮ್ಸನ್ ಅವರ 74 ರನ್ ನೆರವಿನಿಂದ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 216 ರನ್ಗಳನ್ನು ಗಳಿಸಿತು.



ಈ ಗೆಲುವಿನ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡವು ಉತ್ತಮ ಆರಂಭಿಕ ಜೊತೆಯಾಟವನ್ನು ಹೊಂದಿದರು ಕೂಡ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಚೆನ್ನೈ ತಂಡದ ಪರವಾಗಿ ಫ್ಯಾಫ್ ದುಪ್ಲೆಸಿಸ್ 72 ರನ್ ಗಳನ್ನು ಗಳಿಸುವುದರ ಮೂಲಕ ತಂಡವನ್ನು ಗೆಲುವಿನ ತಡಕ್ಕೆ ಮುಟ್ಟಿಸುವ ಭರವಸೆ ಮೂಡಿಸಿದ್ದರು.ಆದರೆ ಕೊನೆಗೆ ಚೆನ್ನೈ ತಂಡವು ಆರು ವಿಕೆಟ್ ಗಳನ್ನು ಕಳೆದುಕೊಂಡು 200 ರನ್ಗಳನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಯಿತು.