IPL 2020: ರಾಜಸ್ಥಾನದ ಸ್ಟೋಕ್ ಸ್ಪೋಟಕ ಶತಕಕ್ಕೆ ಬೆಚ್ಚಿದ ಮುಂಬೈ ಇಂಡಿಯನ್ಸ್
ಅಬುಧಾಬಿ ಶೇ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ 45 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಮುಂಬೈ ವಿರುದ್ಧ 8 ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.
ನವದೆಹಲಿ: ಅಬುಧಾಬಿ ಶೇ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ 45 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಮುಂಬೈ ವಿರುದ್ಧ 8 ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ತಂಡವು 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್ ಗಳನ್ನು ಗಳಿಸಿತು. ಮುಂಬೈ ಪರವಾಗಿ ಹಾರ್ದಿಕ್ ಪಾಂಡ್ಯ ಕೇವಲ 21 ಎಸೆತಗಳಲ್ಲಿ 60 ರನ್ ಗಳಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸಲು ನೆರವಾದರು, ಇವರನ್ನು ಹೊರತು ಪಡಿಸಿದರೆ, ಮುಂಬೈ ಪರವಾಗಿ ಸುರ್ಯಕುಮಾರ್ ಯಾದವ್ 40 ಹಾಗೂ ಇಶಾನ್ ಕಿಶನ್ 37 ರನ್ ಗಳನ್ನು ಗಳಿಸಿದರು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯದಲ್ಲಿ ಸಿಲುಕಿತ್ತು ಆರಂಭದಲ್ಲಿ ಬೇಗನೆ ರಾಬಿನ್ ಉತ್ತಪ್ಪ ಹಾಗೂ ಸ್ಟೀವನ್ ಸ್ಮಿತ್ ಅವರನ್ನು ಕಳೆದುಕೊಂಡು ಆಘಾತ ಎದುರಿಸದರೂ ಸಹಿತ ಬೆನ್ ಸ್ಟ್ರೋಕ್ ಅವರ ಭರ್ಜರಿ ಶತಕ (107) ಹಾಗೂ ಸಂಜು ಸ್ಯಾಮ್ಸನ್ ಅವರ ಅರ್ಧ ಶತಕ (54)ದಿಂದಾಗಿ ಕೇವಲ 18.2 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗೆಲುವಿನ ದಡವನ್ನು ಸೇರಿತು.