IPL 2020: ದೆಹಲಿ ಕ್ಯಾಪಿಟಲ್ಸ್ ಎದುರು ಸನ್ ರೈಸರ್ಸ್ ಹೈದರಾಬಾದ್ ಗೆ ಗೆಲುವು
ಅಬುದಾಬಿಯಲ್ಲಿ ನಡೆಯುತ್ತಿರುವ 11ನೇ ಐಪಿಎಲ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಎದುರು ಸನ್ ರೈಸರ್ಸ್ ಹೈದರಾಬಾದ್ ತಂಡವು 15 ರನ್ಗಳ ಗೆಲುವು ಸಾಧಿಸಿದೆ.
ನವದೆಹಲಿ: ಅಬುದಾಬಿಯಲ್ಲಿ ನಡೆಯುತ್ತಿರುವ 11ನೇ ಐಪಿಎಲ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಎದುರು ಸನ್ ರೈಸರ್ಸ್ ಹೈದರಾಬಾದ್ ತಂಡವು 15 ರನ್ಗಳ ಗೆಲುವು ಸಾಧಿಸಿದೆ.
IPL 2020: ಸೂಪರ್ ಓವರ್ ಗೆದ್ದ ನಂತರವೂ ತಂಡದ ಬಗ್ಗೆ ವಿರಾಟ್ ದೂರು
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ದೆಹಲಿ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ ಹೈದರಾಬಾದ್ ನ್ನು 162 ರನ್ ಗಳಿಗೆ ನಿಯಂತ್ರಿಸಿತು. ಹೈದರಾಬಾದ್ ಪರವಾಗಿ ಡೇವಿಡ್ ವಾರ್ನರ್ 45, ಬೈರ್ ಸ್ಟೌ 53 ವಿಲಿಯಮ್ಸ್ 41 ರನ್ ಗಳಿಸುವ ಮೂಲಕ ತಂಡದ ಸುಸ್ಥಿತಿಗೆ ನೆರವಾದರು.
ತದನಂತರ ಗೆಲುವಿನ ಗುರಿಯನ್ನು ಬೆನ್ನತ್ತಿದ ದೆಹಲಿ ಕ್ಯಾಪಿಟಲ್ಸ್ ಆರಂಭದಲ್ಲೆಯೇ ತಂಡದ ಮೊತ್ತ ಎರಡು ರನ್ ಗಳಾಗಿದ್ದಾಗ ಪೃಥ್ವಿ ಶಾ ಅವರ ವಿಕೆಟ್ ನ್ನು ಕಳೆದುಕೊಂಡು ಆಘಾತ ಎದುರಿಸಿತು.ಶಿಖರ್ ಧವನ್ 34 ರನ್ ಗಳಿಸಿದ್ದು ಬಿಟ್ಟರೆ ದೆಹಲಿ ಪರವಾಗಿ ಯಾರೂ ಕೂಡ ಮೂವತ್ತರ ಗಡಿ ದಾಟಲಿಲ್ಲ. ದೆಹಲಿ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 147 ರನ್ ಗಳನ್ನು ಮಾತ್ರ ಗಳಿಸಿತು.