IPL 2020: ಐಪಿಎಲ್ ನಲ್ಲಿ ನೂತನ ದಾಖಲೆ ನಿರ್ಮಿಸಿದ ಎಂ.ಎಸ್ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡದ ನಾಯಕ ಎಂ.ಎಸ್.ಧೋನಿ ವಿಶ್ವ ಕ್ರಿಕೆಟ್‌ನಲ್ಲಿ ಯಾವುದೇ ಟಿ 20 ಲೀಗ್‌ನಲ್ಲಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಎನ್ನುವ ದಾಖಲೆಗೆ ಪಾತ್ರರಾಗಿದ್ದಾರೆ.
ನವದೆಹಲಿ: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡದ ನಾಯಕ ಎಂ.ಎಸ್.ಧೋನಿ ವಿಶ್ವ ಕ್ರಿಕೆಟ್‌ನಲ್ಲಿ ಯಾವುದೇ ಟಿ 20 ಲೀಗ್‌ನಲ್ಲಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಎನ್ನುವ ದಾಖಲೆಗೆ ಪಾತ್ರರಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಕೂಡ ಪಂದ್ಯಾವಳಿಯ ಇತಿಹಾಸದಲ್ಲಿ ಹೆಚ್ಚು ಐಪಿಎಲ್ ಪಂದ್ಯಗಳಲ್ಲಿ ಕಾಣಿಸಿಕೊಂಡ ಆಟಗಾರ ಎನ್ನುವ ದಾಖಲೆಗೂ ಅವರು ಪಾತ್ರರಾಗಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಐಪಿಎಲ್ 2020 ಯಿಂದ ಹಿಂದೆ ಸರಿದಿದ್ದ ಸುರೇಶ್ ರೈನಾ ಅವರನ್ನು ಹಿಂದಿಕ್ಕಿದ್ದಾರೆ.
ಎಂ.ಎಸ್ ಧೋನಿ ಐಪಿಎಲ್ನಲ್ಲಿ ರೈನಾ ಅವರೊಂದಿಗೆ 193 ಪಂದ್ಯಗಳಲ್ಲಿ ಸಮಬಲ ಸಾಧಿಸಿದರು ಮತ್ತು ದುಬೈ ಇಂಟರ್ನ್ಯಾಷನಲ್ನಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಎಸ್ಆರ್ಹೆಚ್ ವಿರುದ್ಧ ಟಾಸ್ ಮಾಡಿದ ನಂತರ ಈ ದಾಖಲೆಗೆ ಅವರು ಪಾತ್ರರಾದರು.ರೋಹಿತ್ ಶರ್ಮಾ ಅವರು ಐಪಿಎಲ್‌ನಲ್ಲಿ 192 ಬಾರಿ ಆಡಿದ್ದರೆ,ಕೋಲ್ಕತಾ ನೈಟ್ ರೈಡರ್ಸ್ ನಾಯಕ ದಿನೇಶ್ ಕಾರ್ತಿಕ್ 185 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಐಪಿಎಲ್‌ನ ಅಗ್ರ 3 ವಿಕೆಟ್‌ಕೀಪರ್‌ಗಳಿವರು, ದಿನೇಶ್ ಕಾರ್ತಿಕ್ ಎಷ್ಟನೇ ಸ್ಥಾನದಲ್ಲಿದ್ದಾರೆ?
ಟಿ 20 ಯಲ್ಲಿ 300 ಅಥವಾ ಹೆಚ್ಚಿನ ಸಿಕ್ಸರ್‌ಗಳನ್ನು ಹೊಂದಿರುವ ಭಾರತೀಯರ ಪಟ್ಟಿಯಲ್ಲಿ ಧೋನಿ ರೋಹಿತ್ ಶರ್ಮಾ (368), ಸುರೇಶ್ ರೈನಾ (311) ಸೇರಲು ಕೇವಲ ಎರಡು ಸಿಕ್ಸರ್‌ಗಳಷ್ಟು ದೂರದಲ್ಲಿದ್ದಾರೆ. ಪ್ರಸ್ತುತ ಟಿ 20 ಗಳಲ್ಲಿ 298 ಸಿಕ್ಸರ್‌ಗಳನ್ನು ಹೊಂದಿದ್ದಾರೆ.
ಧೋನಿ ತನ್ನ ಹಳೆಯ ಫಾರ್ಮ್ ಅನ್ನು ಕಂಡುಕೊಂಡರೆ ಮತ್ತು ಎಸ್‌ಆರ್‌ಹೆಚ್ ವಿರುದ್ಧ 8 ಸಿಕ್ಸರ್‌ಗಳನ್ನು ಹೊಡೆದರೆ ಐಪಿಎಲ್‌ನಲ್ಲಿ ಹೆಚ್ಚು ಸಿಕ್ಸರ್‌ಗಳನ್ನು ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಎಬಿ ಡಿವಿಲಿಯರ್ಸ್ ಅವರನ್ನು ಮೀರಿಸುತ್ತಾನೆ. ಐಪಿಎಲ್‌ನಲ್ಲಿ 4500 ರನ್ ಪೂರ್ಣಗೊಳಿಸಲು ಧೋನಿಗೆ ಇನ್ನೂ 24 ರನ್ ಅಗತ್ಯವಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮತ್ತು ಸುರೇಶ್ ರೈನಾ ಅವರ ನಂತರ ಅವರು ನಾಲ್ಕನೇ ಭಾರತೀಯರಾಗಲಿದ್ದಾರೆ.
ವಿಕೆಟ್ ಕೀಪರ್ ಆಗಿ 100 ಐಪಿಎಲ್ ಕ್ಯಾಚ್ಗಳನ್ನು ಪೂರ್ಣಗೊಳಿಸಲು ಅವರು 2 ಕ್ಯಾಚ್ಗಳಷ್ಟು ದೂರದಲ್ಲಿದ್ದಾರೆ. ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ನಂತರ ಅವರು ಎರಡನೇ ವಿಕೆಟ್ ಕೀಪರ್ ಆಗಲಿದ್ದಾರೆ.