ನವದೆಹಲಿ : ಟೀಂ ಇಂಡಿಯಾದ (Team India) ಲೆಜೆಂಡರಿ ಓಪನರ್ ರೋಹಿತ್ ಶರ್ಮಾ (Rohith Sharma) ಪ್ರಸ್ತುತ ವಿಶ್ವದ ಅತ್ಯುತ್ತಮ ಆರಂಭಿಕ ಬ್ಯಾಟ್ಸ್‌ಮನ್. ರೋಹಿತ್ ಒಬ್ಬರೇ ಇಡೀ ಪಂದ್ಯದ ದಿಕ್ಕು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.  ಆದರೆ ಈಗ ನಿಧಾನವಾಗಿ ರೋಹಿತ್ ವಯಸ್ಸು ಹೆಚ್ಚುತ್ತಿದೆ. ಮುಂಬರುವ ಕೆಲವು ವರ್ಷಗಳಲ್ಲಿ ಅವರು ಕ್ರಿಕೆಟ್ ಗೆ ವಿದಾಯ ಹೇಳಬಹುದು. ಇಂತಹ ಸನ್ನಿವೇಶದಲ್ಲಿ, ರೋಹಿತ್ ಸ್ಥಾನವನ್ನು ಯಾರು ತುಂಬುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡದೇ ಇರದು. 


COMMERCIAL BREAK
SCROLL TO CONTINUE READING

ಓಪನಿಂಗ್ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ ಈ ಬ್ಯಾಟ್ಸ್‌ಮನ್ :
ಈಗ ರೋಹಿತ್ ಶರ್ಮಾಗೆ (Rohith Sharma) 34 ವರ್ಷ ವಯಸ್ಸಾಗಿದೆ. ಇನ್ನು ಹೆಚ್ಚಿನ ಆಟಗಾರರು ಕೆಲವು ವರ್ಷಗಳಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ರೋಹಿತ್ ಬದಲಿಗೆ ಟೀಂ ಇಂಡಿಯಾಕ್ಕೆ (Team India) ಹೊಸ ಆರಂಭಿಕ ಬ್ಯಾಟ್ಸ್‌ಮನ್ ನ  ಅಗತ್ಯವಿದೆ. ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ (Prithvi Shaw) ಈ ಜವಾಬ್ದಾರಿಯನ್ನು ನಿಭಾಯಿಸಬಲ್ಲರು.  21 ವರ್ಷದ ಬ್ಯಾಟ್ಸ್‌ಮನ್ ಟೀಮ್ ಇಂಡಿಯಾದ ಭವಿಷ್ಯ. ಇತ್ತೀಚೆಗೆ ಅವರ ಬ್ಯಾಟಿಂಗ್ ಎಲ್ಲರ ಹೃದಯ ಗೆದ್ದಿದೆ. 


ಇದನ್ನೂ ಓದಿ : ಭಾರತೀಯ ಕ್ರಿಕೆಟ್ ತಂಡದ ಕೋಚ್ ಹುದ್ದೆ ಮೇಲೆ ಕಣ್ಣಿಟ್ಟಿರುವ ಟಾಮ್ ಮೂಡಿ


ಐಪಿಎಲ್‌ನಲ್ಲಿ ಭರ್ಜರಿ ಆಟ
ಈ ಐಪಿಎಲ್ (IPL) ಋತುವಿನಲ್ಲಿ ಪೃಥ್ವಿ ಶಾ ಭರ್ಜರಿ ಆಟ ಪ್ರದರ್ಶಿಸಿದ್ದಾರೆ. ಶಾ ಈ ಸೀಸನ್ ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಶಿಖರ್ ಧವನ್ ಜೊತೆಗೂಡಿ ಅವರು ಎದುರಾಳಿ ತಂಡಗಳ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದರು. ಶಾ ಈ ವರ್ಷ ಕೇವಲ 14 ಪಂದ್ಯಗಳಲ್ಲಿ 461 ರನ್ ಗಳಿಸಿದ್ದಾರೆ. ಸಿಎಸ್ ಕೆ (CSK) ವಿರುದ್ಧ ನಿನ್ನೆ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಶಾ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಆದರೂ, ಈ ಪಂದ್ಯದಲ್ಲಿ ಡೆಲ್ಲಿ ಸೋಲನ್ನು ಎದುರಿಸಬೇಕಾಯಿತು. 


ರೋಹಿತ್ ಅನುಪಸ್ಥಿತಿಯಲ್ಲಿ ಒಪನಿಂಗ್ : 
ಪೃಥ್ವಿ ಶಾ ಆಗಾಗ್ಗೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಪರ ಓಪನಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಈ ವರ್ಷದ ಆರಂಭದಲ್ಲಿ, ಕಳಪೆ ಪ್ರದರ್ಶನದ ಕಾರಣ ಶಾ ಅವರನ್ನು ಟೀಂ ಇಂಡಿಯಾದಿಂದ ಕೈಬಿಡಲಾಯಿತು. ಆದರೆ ಅವರ ಅತ್ಯುತ್ತಮ ಆಟದ ಆಧಾರದ ಮೇಲೆ ಅವರು ಮತ್ತೊಮ್ಮೆ ಭಾರತದ ಟೆಸ್ಟ್ ಮತ್ತು ಸೀಮಿತ ಓವರ್‌ಗಳ ತಂಡಕ್ಕೆ ಮರಳಿದ್ದಾರೆ. 


ಇದನ್ನೂ ಓದಿ : T20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಆಡುವ ಏಳು ಆಟಗಾರಗಾರರು ಇವರು, ಈ ಆಟಗಾರ ಒಂದು ಕಾಲದಲ್ಲಿ ಊಟವಿಲ್ಲದೇ ಮಲಗುತ್ತಿದ್ದರಂತೆ


 ವಿಶ್ವಕಪ್ ಗೆದ್ದ  ಅಂಡರ್ -19 ತಂಡ :
ಪೃಥ್ವಿ ಶಾ ನಾಯಕತ್ವದಲ್ಲಿ ಭಾರತವು ಅಂಡರ್ -19 ಪ್ರಶಸ್ತಿಯನ್ನು ಒಮ್ಮೆ ಗೆದ್ದಿದೆ. 2019 ರ ಅಂಡರ್ -19 ವಿಶ್ವಕಪ್ (Under 19 world cup) ಫೈನಲ್‌ನಲ್ಲಿ ಭಾರತದ ಯುವ ತಂಡ, ಆಸ್ಟ್ರೇಲಿಯಾವನ್ನು ಸೋಲಿಸಿದಾಗ, ಶಾ ಆ ತಂಡದ ನಾಯಕರಾಗಿದ್ದರು. ಆ ಸಮಯದಲ್ಲಿ ಶುಭಮನ್ ಗಿಲ್ ಮತ್ತು ಶಿವಂ ಮಾವಿ ಕೂಡಾ ಅದೇ ತಂಡದ ಭಾಗವಾಗಿದ್ದರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ