IPL 2021 ರ ಮಧ್ಯದಲ್ಲಿ ಪಂಜಾಬ್ ಕಿಂಗ್ಸ್ ತೊರೆದ ಕ್ರಿಸ್ ಗೇಲ್! ಕಾರಣ ಇಲ್ಲಿದೆ
ಗೇಲ್ ತಾನು ಬಹಳ ಸಮಯದಿಂದ ಬಯೋಬಬಲ್‌ನಲ್ಲಿದ್ದೇನೆ ಮತ್ತು ಟಿ 20 ವಿಶ್ವಕಪ್‌ಗೆ ಮುಂಚಿತವಾಗಿ ತನಗೆ ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ, ಅಲ್ಲದೆ, ಟಿ 20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ರಿಫ್ರೆಶ್ ಆಗಬೇಕಿದೆ ಎಂದು ಹೇಳಿದ್ದಾರೆ. ಪಂಜಾಬ್ ಕಿಂಗ್ಸ್ ಐಪಿಎಲ್ 2021 ಅಂಕ ಪಟ್ಟಿಯಲ್ಲಿ 8 ಅಂಕಗಳೊಂದಿಗೆ 6 ನೇ ಸ್ಥಾನದಲ್ಲಿದೆ. ಪ್ಲೇಆಫ್ ತಲುಪುವ ಭರವಸೆ ಇನ್ನೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ, ಗೇಲ್ ಈ ರೀತಿ ಕೈ ಕೊಟ್ಟಿರುವುದು ಅವರಿಗೆ ದೊಡ್ಡ ಹೊಡೆತವಾಗಿದೆ.
ನವದೆಹಲಿ : ಕ್ರಿಸ್ ಗೇಲ್ ಐಪಿಎಲ್ ಮಧ್ಯದಲ್ಲಿ ಪಂಜಾಬ್ ಕಿಂಗ್ಸ್ ಟೀಂಗೆ ಕೈ ಕೊಟ್ಟಿದ್ದಾರೆ. ಅಲ್ಲದೆ ಅದಕ್ಕೆ ಅಸಲಿ ಕಾರಣವನ್ನು ಕೂಡ ನೀಡಿದ್ದಾರೆ.
ಪಂಜಾಬ್ ಕಿಂಗ್ಸ್ ನ ಬ್ಯಾಟ್ಸ್ ಮನ್ ಕ್ರಿಸ್ ಗೇಲ್(Chris Gayle) ಐಪಿಎಲ್ ನ ಮಧ್ಯದಲ್ಲಿ ತನ್ನ ಫ್ರಾಂಚೈಸಿ ತೊರೆಯುವುದಾಗಿ ಘೋಷಿಸಿದ್ದಾರೆ. ಗೇಲ್ ತಾನು ಬಹಳ ಸಮಯದಿಂದ ಬಯೋಬಬಲ್‌ನಲ್ಲಿದ್ದೇನೆ ಮತ್ತು ಟಿ 20 ವಿಶ್ವಕಪ್‌ಗೆ ಮುಂಚಿತವಾಗಿ ತನಗೆ ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ, ಅಲ್ಲದೆ, ಟಿ 20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ರಿಫ್ರೆಶ್ ಆಗಬೇಕಿದೆ ಎಂದು ಹೇಳಿದ್ದಾರೆ. ಪಂಜಾಬ್ ಕಿಂಗ್ಸ್ ಐಪಿಎಲ್ 2021 ಅಂಕ ಪಟ್ಟಿಯಲ್ಲಿ 8 ಅಂಕಗಳೊಂದಿಗೆ 6 ನೇ ಸ್ಥಾನದಲ್ಲಿದೆ. ಪ್ಲೇಆಫ್ ತಲುಪುವ ಭರವಸೆ ಇನ್ನೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ, ಗೇಲ್ ಈ ರೀತಿ ಕೈ ಕೊಟ್ಟಿರುವುದು ಅವರಿಗೆ ದೊಡ್ಡ ಹೊಡೆತವಾಗಿದೆ.
ಇದನ್ನೂ ಓದಿ : Hyderabad vs Chennai: ಚೆನ್ನೈ ಸೂಪರ್ ಕಿಂಗ್ಸ್ ಗೆ ಆರು ವಿಕೆಟ್ ಗಳ ಭರ್ಜರಿ ಜಯ
ಪಂಜಾಬ್ ಕಿಂಗ್ಸ್ ಗೇಲ್ ಐಪಿಎಲ್(IPL 2021) ತೊರೆಯುವ ಬಗ್ಗೆ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದು, ಪಂಜಾಬ್ ಕಿಂಗ್ಸ್ ಗೇಲ್ ಪ್ರಕಾರ "ಕಳೆದ ಕೆಲವು ತಿಂಗಳುಗಳಲ್ಲಿ, ನಾನು ಸಿಡಬ್ಲ್ಯುಐ ಬಬಲ್, ಸಿಪಿಎಲ್ ಬಬಲ್ ಮತ್ತು ನಂತರ ಐಪಿಎಲ್ ಬಬಲ್‌ನ ಭಾಗವಾಗಿದ್ದೇನೆ ಮತ್ತು ನಾನು ಮಾನಸಿಕವಾಗಿ ಸದೃಢವಾಗಬೇಕಾಗಿದೆ ಎಂದು ತಿಳಿಸಿದ್ದಾರೆ.
ಕ್ರಿಸ್ ಗೇಲ್(Chris Gayle) ಈ ಸೀಸನ್ ನಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳಲು ವಿಫಲರಾಗಿದ್ದಾರೆ. ಅವರು ಪಂಜಾಬ್ ಕಿಂಗ್ಸ್(Punjab Kings) ಪರ ಆಡಿದ 10 ಪಂದ್ಯಗಳಲ್ಲಿ, ಅವರು 21.44 ಸರಾಸರಿಯಲ್ಲಿ 193 ರನ್ ಗಳಿಸಲು ಸಾಧ್ಯವಾಯಿತು. ಆದರೆ ಪಂಜಾಬ್ ತಂಡದಲ್ಲಿ ನಾನು ಇರುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತಿತ್ತು. ಈಗ ಪಂಜಾಬ್‌ನ ಸಮಸ್ಯೆಯೆಂದರೆ ಗೇಲ್ ಬದಲಿಗೆ ಅವರು ಯಾವ ಆಟಗಾರನನ್ನು ಆಯ್ಕೆ ಮಾಡಿ ಕರೆ ತರುತ್ತಾರೆ ಎಂಬುದನ್ನ ಕಾಡು ನೋಡಬೇಕಾಗಿದೆ.
ಇದನ್ನೂ ಓದಿ : Asian TT Championships: ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ವಿರುದ್ಧ ಮಹಿಳಾ ತಂಡಕ್ಕೆ ಸೋಲು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.