Asian TT Championships: ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ವಿರುದ್ಧ ಮಹಿಳಾ ತಂಡಕ್ಕೆ ಸೋಲು

ದೋಹಾದಲ್ಲಿ ನಡೆಯುತ್ತಿರುವ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತೀಯ ಮಹಿಳಾ ತಂಡವು 1-3 ಅಂತರದಲ್ಲಿ ಜಪಾನ್ ತಂಡದ ವಿರುದ್ಧ ಸೋಲನ್ನು ಅನುಭವಿಸಿದೆ.ಜಪಾನ್‌ನ ವಿಶ್ವದ ನಂ.19 ಹಿಟೊಮಿ ಸಾಟೊ ಮೊದಲ ಪಂದ್ಯದಲ್ಲಿ ಶ್ರೀಜಾ ಅಕುಲವನ್ನು 11-5, 11-3, 11-3 ಸೋಲಿಸಿದರು.

Written by - Zee Kannada News Desk | Last Updated : Sep 30, 2021, 11:30 PM IST
  • ದೋಹಾದಲ್ಲಿ ನಡೆಯುತ್ತಿರುವ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತೀಯ ಮಹಿಳಾ ತಂಡವು 1-3 ಅಂತರದಲ್ಲಿ ಜಪಾನ್ ತಂಡದ ವಿರುದ್ಧ ಸೋಲನ್ನು ಅನುಭವಿಸಿದೆ.
  • ಜಪಾನ್‌ನ ವಿಶ್ವದ ನಂ.19 ಹಿಟೊಮಿ ಸಾಟೊ ಮೊದಲ ಪಂದ್ಯದಲ್ಲಿ ಶ್ರೀಜಾ ಅಕುಲ ಅವರನ್ನು 11-5, 11-3, 11-3 ಅಂತರದಲ್ಲಿ ಸೋಲಿಸಿದರು.
Asian TT Championships: ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ವಿರುದ್ಧ ಮಹಿಳಾ ತಂಡಕ್ಕೆ ಸೋಲು  title=
Photo Courtesy: Twitter

ನವದೆಹಲಿ: ದೋಹಾದಲ್ಲಿ ನಡೆಯುತ್ತಿರುವ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತೀಯ ಮಹಿಳಾ ತಂಡವು 1-3 ಅಂತರದಲ್ಲಿ ಜಪಾನ್ ತಂಡದ ವಿರುದ್ಧ ಸೋಲನ್ನು ಅನುಭವಿಸಿದೆ.ಜಪಾನ್‌ನ ವಿಶ್ವದ ನಂ.19 ಹಿಟೊಮಿ ಸಾಟೊ ಮೊದಲ ಪಂದ್ಯದಲ್ಲಿ ಶ್ರೀಜಾ ಅಕುಲ ಅವರನ್ನು 11-5, 11-3, 11-3 ಅಂತರದಲ್ಲಿ ಸೋಲಿಸಿದರು.

ಇನ್ನೊಂದೆಡೆಗೆ ಅರ್ಚನಾ ಕಾಮತ್ ಅವರು 12-1, 7-11, 4-11, 12-10, 9-11 ರ ಅಂತರದಲ್ಲಿ ಸಾಕಿ ಶಿಬಾಟಾ ವಿರುದ್ಧ ಸೋಲನ್ನು ಅನುಭವಿಸಿದರು.ಅರ್ಚನಾ ಅವರು 42 ನೇ ಸ್ಥಾನದಲ್ಲಿರುವ ಸಾಕಿ ವಿರುದ್ಧ ಎರಡು ಆಟದಲ್ಲಿ ಮುನ್ನಡೆ ಸಾಧಿಸಿದರೂ ಕೂಡ ಜಪಾನಿನ ಸಾಕಿ ಅವರು 2-0 ರಲ್ಲಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: ಈ ಆಟಗಾರನ IPL ವೃತ್ತಿಜೀವನವೆ ಮುಗಿದಿತ್ತು? ಕೊಹ್ಲಿಯ ಒಂದು ಫೋನ್ ಕರೆಯಿಂದ ಜೀವನವೆ ಬದಲಾಯಿತು!

ಏತನ್ಮಧ್ಯೆ, ಸುತೀರ್ಥ ಮುಖರ್ಜಿ ಅವರು ಮಿಯು ನಾಗಾಸಾಕಿ ವಿರುದ್ಧ 3-2 (11-7, 11-8, 5-11, 7-11, 11-8) ಗೆಲುವು ಸಾಧಿಸಿ, ಜಪಾನಿಯರಿಗೆ ಭಯವನ್ನುಂಟು ಮಾಡಿದರು.ಆದರೆ ಕೊನೆಯಲ್ಲಿ, ಸಾಕಿ ತನ್ನ ರಿವರ್ಸ್ ಸಿಂಗಲ್ಸ್‌ನಲ್ಲಿ ಶ್ರೀಜಾ ವಿರುದ್ಧ 8-11, 10-12, 11-2, 11-9, 11-8 ರಲ್ಲಿ ಜಯಗಳಿಸಿದರು.

ಪುರುಷರ ತಂಡವು ಬುಧವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಇರಾನ್ ತಂಡವನ್ನು 3-1 ಗೋಲುಗಳಿಂದ ಸೋಲಿಸಿ ಟೂರ್ನಿಯಲ್ಲಿ ಚೊಚ್ಚಲ ಪದಕವನ್ನು ಜೀವಂತವಾಗಿರಿಸಿಕೊಂಡಿದೆ.ಅವರು ಶುಕ್ರವಾರ ನಡೆಯುವ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾವನ್ನು ಎದುರಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News