IPL ಡಬಲ್ ಧಮಾಕ: ಇಂದು ಡೆಲ್ಲಿ VS ರಾಜಸ್ಥಾನ್, ಹೈದರಾಬಾದ್ VS ಪಂಜಾಬ್ ಮುಖಾಮುಖಿ
14ನೇ ಆವೃತ್ತಿಯ ಐಪಿಎಲ್ ಟೂರ್ನಿ(IPL 2021)ಯಲ್ಲಿಂದು ಡಬಲ್ ಧಮಾಕ. ಶನಿವಾರ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ನೀಡಲು 2 ಪಂದ್ಯಗಳು ನಡೆಯಲಿವೆ. ಮಧ್ಯಾಹ್ನ 3.30ಕ್ಕೆ ಮೊದಲ ಪಂದ್ಯ ನಡೆಯಲಿದ್ದು, ದೆಹಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿವೆ. ಸಂಜೆ 7.30ಕ್ಕೆ 2ನೇ ಪಂದ್ಯ ನಡೆಯಲಿದ್ದು, ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಗೆಲುವಿಗಾಗಿ ಸೆಣಸಾಟ ನಡೆಯಲಿವೆ.
ನವದೆಹಲಿ: 14ನೇ ಆವೃತ್ತಿಯ ಐಪಿಎಲ್ ಟೂರ್ನಿ(IPL 2021)ಯಲ್ಲಿಂದು ಡಬಲ್ ಧಮಾಕ. ಶನಿವಾರ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ನೀಡಲು 2 ಪಂದ್ಯಗಳು ನಡೆಯಲಿವೆ. ಮಧ್ಯಾಹ್ನ 3.30ಕ್ಕೆ ಮೊದಲ ಪಂದ್ಯ ನಡೆಯಲಿದ್ದು, ದೆಹಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿವೆ. ಸಂಜೆ 7.30ಕ್ಕೆ 2ನೇ ಪಂದ್ಯ ನಡೆಯಲಿದ್ದು, ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಗೆಲುವಿಗಾಗಿ ಸೆಣಸಾಟ ನಡೆಯಲಿವೆ.
ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯ 36ನೇ ಪಂದ್ಯದಲ್ಲಿ ಬಲಿಷ್ಠ ದೆಹಲಿ ಕ್ಯಾಪಿಟಲ್ಸ್(Delhi Capitals)ಗೆ ರಾಜಸ್ಥಾನ್ ರಾಯಲ್ಸ್ ಸವಾಲು ಒಡ್ಡಲಿದೆ. ಈಗಾಗಲೇ ಬಹುತೇಕ ಪ್ಲೇ ಆಫ್ ಹಂತ ಪ್ರವೇಶಿಸಿರುವ ದೆಹಲಿ ಕ್ಯಾಪಿಟಲ್ಸ್ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ತಾನಾಡಿರುವ 9 ಪಂದ್ಯಗಳ ಪೈಕಿ 7 ಗೆಲುವು ಸಾಧಿಸಿರುವ ರಿಷಭ್ ಪಂತ್ ನೇತೃತ್ವದ ದೆಹಲಿ ತಂಡ 2 ರಲ್ಲಿ ಮಾತ್ರ ಸೋಲು ಕಂಡಿದೆ. 14 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ದೆಹಲಿ ರಾಜಸ್ಥಾನ್(Rajasthan Royals)ಗೆ ಸೋಲಿನ ರುಚಿ ತೋರಿಸಿ ಮತ್ತೆ ಅಗ್ರಸ್ಥಾನಕ್ಕೆ ಏರಲು ಹವಣಿಸುತ್ತಿದೆ.
ಇದನ್ನೂ ಓದಿ: ಶಾಂತ ಮನಸ್ಥಿತಿಗೆ ನೀರಜ್ ಚೋಪ್ರಾ ಕೊಟ್ಟ ಉಪಾಯವೇನು ಗೊತ್ತೇ ?
ಬಲಿಷ್ಠ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ತಂಡಕ್ಕೆ ಗೆಲುವು ಅನಿರ್ವಾಯವಾಗಿದೆ. ಏಕೆಂದರೆ ತಾನಾಡಿರುವ 8 ಪಂದ್ಯಗಳಲ್ಲಿ ಸಂಜು ಸ್ಯಾಮನ್ಸ್(Sanju Samson) ಪಡೆ ತಲಾ 4 ಗೆಲುವು-ಸೋಲು ಕಂಡಿದೆ. 8 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ರಾಜಸ್ಥಾನ್ ಪ್ಲೇ ಆಫ್ ಗೆ ಎಂಟ್ರಿ ಕೊಡಲು ಗೆಲುವು ಅನಿರ್ವಾಯವಾಗಿದೆ. ಹೀಗಾಗಿ ದೆಹಲಿ ಮೇಲೆ ಸವಾರಿ ಮಾಡಲು ರಾಜಸ್ಥಾನ್ ಪಡೆ ಸಜ್ಜಾಗಿದೆ.
ಇನ್ನು ಸಂಜೆ ಶಾರ್ಜಾದ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್(KL Rahul) ನೇತೃತ್ವದ ಪಂಜಾಬ್ ಕಿಂಗ್ಸ್(Punjab Kings) ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಪೈಪೋಟಿ ನಡೆಯಲಿದೆ. ಉಭಯ ತಂಡಗಳಿಗೆ ಈ ಪಂದ್ಯವು ಅಳಿವು ಉಳಿವಿನ ಪ್ರಶ್ನೆಯಾಗಿದೆ. ಕೇನ್ ವಿಲಿಯಮ್ಸನ್ ನೇತೃತ್ವದ ಹೈದರಾಬಾದ್ ಈಗಾಗಲೇ ಬಹುತೇಕ ಟೂರ್ನಿಯಿಂದ ಹೊರಬಿದ್ದಂತಾಗಿದೆ. ತಾನಾಡಿರುವ 8 ಪಂದ್ಯಗಳಲ್ಲಿ ಕೇವಲ 1 ಗೆಲುವು ಸಾಧಿಸಿರುವ ಸನ್ ರೈಸರ್ಸ್ 7 ಸೋಲು ಕಂಡಿದೆ. ಕೇವಲ 2 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಹೈದರಾಬಾದ್ ಇನ್ನುಳಿದ 8 ಪಂದ್ಯಗಳನ್ನು ಗೆಲ್ಲುವುದು ಮ್ಯಾಜಿಕ್ ಆಗುತ್ತದೆ.
ಇದನ್ನೂ ಓದಿ: IPL 2021: RCB ತಂಡದ ನಾಯಕರಾಗುವ ಆಟಗಾರರು ಯಾರು ಗೊತ್ತೇ?
ಇನ್ನು ಕಳೆದ ಪಂದ್ಯದಲ್ಲಿ ವಿರೋಚಿತ ಸೋಲು ಕಂಡ ಕೆ.ಎಲ್.ರಾಹುಲ್ ಪಡೆಗೆ ಇದು ಅಳಿವು ಉಳಿವಿನ ಪ್ರಶ್ನೆ. ಒಂದು ವೇಳೆ ಹೈದರಾಬಾದ್(Sunrisers Hyderabad) ವಿರುದ್ಧ ಗೆದ್ದು ಮುಂದಿನ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದರೆ ಮಾತ್ರ ಪಂಜಾಬ್ ತಂಡದ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ. ಇಲ್ಲದಿದ್ದರೆ ಟೂರ್ನಿಯಿಂದ ಹೊರಬೀಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಪಂಜಾಬ್ ಇದುವರೆಗೂ ಆಡಿರುವ 9 ಪಂದ್ಯಗಳಲ್ಲಿ ಕೇವಲ 3 ಗೆಲುವು ಸಾಧಿಸಿದ್ದು, 6ರಲ್ಲಿ ಸೋಲು ಕಂಡಿದೆ. 6 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಕೆ.ಎಲ್.ರಾಹುಲ್ ಪಡೆ ಗೆಲುವಿನ ಉತ್ಸಾಹದಲ್ಲಿದೆ.
ಐಪಿಎಲ್ ಪಂದ್ಯ: 36
ದೆಹಲಿ ಕ್ಯಾಪಿಟಲ್ಸ್ vs ರಾಜಸ್ಥಾನ್ ರಾಯಲ್ಸ್
ದಿನಾಂಕ: ಸೆಪ್ಟೆಂಬರ್ 25, ಶನಿವಾರ
ಸ್ಥಳ: ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣ
ಸಮಯ: ಮಧ್ಯಾಹ್ನ 3.30ಕ್ಕೆ
--------------------------------------
ಐಪಿಎಲ್ ಪಂದ್ಯ: 37
ಪಂಜಾಬ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್
ದಿನಾಂಕ: ಸೆಪ್ಟೆಂಬರ್ 25, ಶನಿವಾರ
ಸ್ಥಳ: ಶಾರ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
ಸಮಯ: ಸಂಜೆ 7.30
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.