ನವದೆಹಲಿ: Vivo IPL 2021 ರ ಡಿಜಿಟಲ್ ಪ್ರಸಾರ ಹಕ್ಕುಗಳನ್ನು  YuppTV ಖರೀದಿಸಿದೆ.  ಹೀಗಾಗಿ ಏಪ್ರಿಲ್ 9 ರಿಂದ 2021 ರ ಮೇ 30 ರವರೆಗೆ ವಿವೋ ಐಪಿಎಲ್ 2021 ಗೆ ಸಂಬಂಧಿಸಿದ ಎಲ್ಲ ಸಂಗತಿಗಳನ್ನು YuppTV ಪ್ರಸಾರ ಮಾಡಲಿದೆ ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.  ಈ ಇವೆಂಟ್ ಗಾಗಿ ಆಯ್ಕೆಯಾಗಿರುವ ಸ್ಥಳಗಳಲ್ಲಿ  ಚೆನ್ನೈ, ಮುಂಬೈ, ಅಹಮದಾಬಾದ್, ದೆಹಲಿ, ಬೆಂಗಳೂರು ಮತ್ತು ಕೋಲ್ಕತಾ ಶಾಮೀಲಾಗಿವೆ. ಪಂದ್ಯಾವಳಿಯ ಪ್ಲೇಆಫ್ ಪಂದ್ಯ ಮತ್ತು ಅಂತಿಮ ಪಂದ್ಯವು ಅಹಮದಾಬಾದ್‌ನಲ್ಲಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- BCCI ನಿಂದ IPL 2021ರ ಅಧಿಕೃತ ವೇಳಾಪಟ್ಟಿ ಘೋಷಣೆ, ಏಪ್ರಿಲ್ 9 ರಂದು ಆರಂಭ, ಮೇ 30ಕ್ಕೆ ಅಹ್ಮದಾಬಾದ್ ನಲ್ಲಿ ಫೈನಲ್


ಈ ಕುರಿತಾಗಿ ಬಿಡುಗಡೆ ಮಾಡಲಾಗಿರುವ ಹೇಳಿಕೆ ಪ್ರಕಾರ, YuppTV ವಿಶ್ವದ ಸುಮಾರು 100 ದೇಶಗಳಲ್ಲಿ IPL-2021 ಪ್ರಸಾರ ಮಾಡಲಿದೆ.


ಇದನ್ನೂ ಓದಿ-IPL ಮೇಲೆ ಕರೋನಾ ಕಾರ್ಮೋಡ, ಆರ್‌ಸಿಬಿಯ ಸ್ಟಾರ್ ಕ್ರಿಕೆಟಿಗನಿಗೆ ಕರೋನಾ ದೃಢ


ಸುಮಾರು ಎರಡು ವರ್ಷಗಳ ಬಳಿಕ ತವರು ನೆಲದಲ್ಲಿ IPL ಟೂರ್ನಿ ಮರಳಿದೆ. ಈ ಇವೆಂಟ್ ಅನ್ನು ಈ ಬಾರಿ ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ ಹಾಗೂ ಕೊಲ್ಕತಾಗಳಲ್ಲಿ ಆಯೋಜನೆಗೊಳ್ಳುತ್ತಿದೆ. ಈ ಬಾರಿಯ ಸೀಜನ್ ಏಪ್ರಿಲ್ 9 ರಿಂದ ಚೆನ್ನೈನಿಂದ ಆರಂಭಗೊಳ್ಳುತ್ತಿದೆ. ಕಳೆದ ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯಾವಳಿಯ ಮೊದಲ ಪಂದ್ಯ ನಡೆಯಲಿದೆ. ಈ ಕ್ರೀಡಾಂಗಣದಲ್ಲಿ ಭಾರತೀಯ ದಿಗ್ಗಜ ಆಟಗಾರರ ಜೊತೆಗೆ ವಿಶ್ವದ ಇತರ ದಿಗ್ಗಜರು ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಟೂರ್ನಿಯಲ್ಲಿ ಹೂಡಿಕೆ ಮಾಡಲಾಗುವ ಹಣ ಹಾಗೂ ಗ್ಲಾಮರ್ ಈ ಟೂರ್ನಿಯ ವೈಶಿಷ್ಟ್ಯಗಳಾಗಿವೆ. ಈ ಪಂದ್ಯಾವಳಿಯ ಕೇವಲ ಒಂದು ಮ್ಯಾಚ್ ಆಡಿ ಆಟಗಾರರು ಕೋಟ್ಯಾಧಿಪತಿಯಾಗಬಹುದು.


ಇದನ್ನೂ ಓದಿ-ಐಪಿಎಲ್ ತಂಡಗಳಿಗೆ ಅಭ್ಯಾಸ ಮಾಡಲು ಅನುಮತಿ ನೀಡಿದ ಮಹಾರಾಷ್ಟ್ರ ಸರ್ಕಾರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.