ನವದೆಹಲಿ: IPL 2021 -  ಐಪಿಎಲ್ 2021 ರ ಎರಡನೇ ಹಂತದ ಮುನ್ನ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad)  ಮತ್ತು ಪಂಜಾಬ್ ಕಿಂಗ್ಸ್ (Punjab Kings) ಭಾರೀ ಹಿನ್ನಡೆ ಅನುಭವಿಸಿವೆ. ಇಂಗ್ಲೆಂಡ್‌ನ ಇಬ್ಬರು ದಿಗ್ಗಜ ಆಟಗಾರರು ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ.


COMMERCIAL BREAK
SCROLL TO CONTINUE READING

ಟೂರ್ನಿಯಿಂದ ಹೊರಗುಳಿಯುವ ನಿರ್ಧಾರ ಕೈಗೊಂಡ ಬೆಯರ್ಸ್ಟೋ-ಮಲಾನ್ 
ಸನ್ ರೈಸರ್ಸ್ ಹೈದರಾಬಾದ್  (Sunrisers Hyderabad) ಓಪನರ್ ಜಾನಿ ಬೈರ್ ಸ್ಟೋ (Jonny Bairstow)  ಮತ್ತು ಪಂಜಾಬ್ ಕಿಂಗ್ಸ್ ಬ್ಯಾಟ್ಸ್ ಮನ್ (Dawid Malan) ವೈಯಕ್ತಿಕ ಕಾರಣಗಳಿಂದ ಐಪಿಎಲ್ 2021 ರಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಈ ಇಬ್ಬರೂ ಆಟಗಾರರು ಪ್ರಸ್ತುತ ಇಂಗ್ಲೆಂಡ್ ಕ್ರಿಕೆಟ್ ತಂಡದ ಭಾಗವಾಗಿದ್ದಾರೆ.


ಟೆನ್ಶನ್ ಆಗಿ ಪರಿಣಮಿಸಿದ ಕೊರೊನಾ
ಇಂಗ್ಲೆಂಡ್ ಮತ್ತು ಭಾರತದ ಆಟಗಾರರು ತಮ್ಮ ಐಪಿಎಲ್ ತಂಡಗಳಿಗೆ ಸೇರಲು ಚಾರ್ಟರ್ ವಿಮಾನಗಳಿಂದ 'ಬಬಲ್ ಟು ಬಬಲ್ ಟ್ರಾನ್ಸ್‌ಫರ್' ಆಗಬೇಕಿತ್ತು. ಭಾರತೀಯ ಶಿಬಿರದಲ್ಲಿ ಕರೋನವೈರಸ್ ಸೋಂಕಿನಿಂದಾಗಿ ಎರಡೂ ದೇಶಗಳ ನಡುವೆ ನಡೆಯಬೇಕಿದ್ದ 5 ನೇ ಟೆಸ್ಟ್ ಪಂದ್ಯವನ್ನು ಮುಂದೂಡಲಾದ ಹಿನ್ನೆಲೆ, ಫ್ರ್ಯಾಂಚೈಸ್ ತಂಡಗಳು ಆಟಗಾರರ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು.


ಭಾರತೀಯ ಕ್ಯಾಂಪ್ ನಲ್ಲಿ ಕೊರೊನಾ ಅಪಾಯ
ಭಾರತ ತಂಡದ ಸಹಾಯಕ ಫಿಸಿಯೋ ಯೋಗೀಜ್ ಪರ್ಮಾರ್ ಕರೋನಾ ವೈರಸ್ ಸೋಂಕಿಗೆ ಒಳಗಾದ ನಂತರ 5 ನೇ ಟೆಸ್ಟ್ ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಈ ಹಿಂದೆ, ಓವಲ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಸೇರಿದಂತೆ ಭಾರತದ ಇತರ ಸಹಾಯಕ ಸಿಬ್ಬಂದಿಗಳು ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ನಂತರ ಅವರನ್ನು ಈಗಾಗಲೇ ನಿರ್ಬಂಧಿಸಲಾಗಿದೆ.


IPL ನಿಂದ ಹೊರಗುಳಿಯಲು ಕ್ವಾರಂಟೀನ್ ಕಾರಣ
ದುಬೈಗೆ ಆಗಮಿಸಬೇಕಿರುವ ಎಲ್ಲಾ ಆಟಗಾರರನ್ನು ಇದೀಗ 6 ದಿನಗಳ ಕಾಲ ಕ್ವಾರಂಟೀನ್ ಮಾಡಲಾಗುವುದು ಎನ್ನಲಾಗಿದೆ. ಬೈರ್‌ಸ್ಟೊ ಮತ್ತು ಮಲನ್ ಲೀಗ್‌ನಿಂದ ಹೊರಗುಳಿಯಲು ಇದು ಒಂದು ಕಾರಣ ಎನ್ನಲಾಗುತ್ತಿದೆ. ಸೆಪ್ಟೆಂಬರ್ 19 ರಿಂದ ಮತ್ತೆ ಆರಂಭಗೊಳ್ಳಲಿರುವ ಐಪಿಎಲ್‌ನಲ್ಲಿ (IPL 2021) ಇಬ್ಬರೂ ಆಟಗಾರರು ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.


UAE ಗೆ ಹೋಗುತ್ತಿಲ್ಲ ಬೈರ್‌ಸ್ಟೊ ಮತ್ತು ಮಲನ್
ಈ ಕುರಿತು ಮಾಹಿತಿ ನೀಡಿರುವ BCCI ಅಧಿಕಾರಿ, ', 'ಅವರು ಯುಎಇ ವಿಮಾನ ಹತ್ತುವುದಿಲ್ಲ. ಹಿಂದೆ ಹೋಗಲು ಅಗತ್ಯವಲ್ಲದ 6 ದಿನಗಳ ಕ್ಯಾರೆಂಟೈನ್ ಅವಧಿ ಒಂದು ಕಾರಣವಾಗಿದೆ. 'ಬೈರ್‌ಸ್ಟೊ ಸನ್ ರೈಸರ್ಸ್ ತಂಡದ ನಿಯಮಿತ ಸದಸ್ಯರಾಗಿದ್ದು, ವಿಶ್ವದ ನಂಬರ್ ಒನ್ ಟಿ 20 ಬ್ಯಾಟ್ಸ್‌ಮನ್ ಮಲಾನ್ ಈ ಮೊದಲು ಕಿಂಗ್ಸ್ ಜೊತೆ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು.


ಇದನ್ನೂ ಓದಿ-ಟಿ 20 ವಿಶ್ವಕಪ್ ಟೂರ್ನಿಗೆ ಶಿಖರ್ ಧವನ್ ಅಲಭ್ಯ: ಕಾರಣವೇನು ಗೊತ್ತೆ..?


ಕ್ರಿಸ್ ವೋಕ್ಸ್ ಕುರಿತಾದ ಸಸ್ಪೆನ್ಸ್ ಕೂಡ ಮುಂದುವರೆದಿದೆ
ಐಪಿಎಲ್ 2021 ರ ಏಳು ಪಂದ್ಯಗಳಲ್ಲಿ 141 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ ಬೈರ್ ಸ್ಟೋ 248 ರನ್ ಗಳಿಸಿದ್ದಾರೆ. ಬೈರ್‌ಸ್ಟೊ ಮತ್ತು ಮಲನ್ ಇಬ್ಬರೂ ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ಭಾಗವಾಗಿದ್ದರು. ಐಪಿಎಲ್‌ನಲ್ಲಿ ಇಂಗ್ಲೆಂಡ್‌ನ ಆಲ್ ರೌಂಡರ್ ಕ್ರಿಸ್ ವೋಕ್ಸ್ ಉಪಸ್ಥಿತಿಯ ಕುರಿತಾದ ಸಸ್ಪೆನ್ಸ್ ಕೂಡ ಮುಂದುವರೆದಿದೆ. ಅವರು ದೆಹಲಿ ಕ್ಯಾಪಿಟಲ್ಸ್ ಪರ ಆಡುತ್ತಾರೆ.


ಇದನ್ನೂ ಓದಿ-ಟಿ 20 ವಿಶ್ವಕಪ್ ಟೂರ್ನಿಗೆ ಶಿಖರ್ ಧವನ್ ಅಲಭ್ಯ: ಕಾರಣವೇನು ಗೊತ್ತೆ..?


ತಲೆನೋವಾಗಿ ಪರಿಣಮಿಸಿದ ಬಯೋ ಬಬಲ್
ಬಯೋ-ಬಬಲ್‌ನಲ್ಲಿ ಉಳಿದುಕೊಳ್ಳುವು ಒಂದು ಸವಾಲಿನ ಕೆಲಸವಾಗಿದ್ದು, ಇದರಿಂದ ಆಟಗಾರರು ಪ್ರಭಾವಿತರಾಗುತ್ತಿದ್ದಾರೆ. ಐಪಿಎಲ್ 2021 ರ ನಂತರ ಟಿ 20 ವಿಶ್ವಕಪ್ ಕೂಡ ಯುಎಇಯಲ್ಲಿ ಆಯೋಜನೆಯಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ, ಐಪಿಎಲ್ ನಿಂದ ಹಿಂದೆ ಸರಿಯುವ ಆಟಗಾರರಿಗೆ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಅವಕಾಶ ಸಿಗಲಿದೆ.


ಇದನ್ನೂ ಓದಿ-Sourav Ganguly Biopic: ತೆರೆಗೆ ಬರಲಿದೆ ಸೌರವ್ ಗಂಗೂಲಿ ಕುರಿತ ಬಯೋಪಿಕ್..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ