Sourav Ganguly Biopic: ತೆರೆಗೆ ಬರಲಿದೆ ಸೌರವ್ ಗಂಗೂಲಿ ಕುರಿತ ಬಯೋಪಿಕ್..!

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಜೀವನ ಚರಿತ್ರೆ ಕುರಿತಾದ ಬಯೋಪಿಕ್ ತೆರೆಗೆ ಬರಲಿದೆ.

Written by - Zee Kannada News Desk | Last Updated : Sep 9, 2021, 03:58 PM IST
  • ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಜೀವನ ಚರಿತ್ರೆ ಕುರಿತಾದ ಬಯೋಪಿಕ್ ತೆರೆಗೆ ಬರಲಿದೆ.
  • ಈ ವಿಚಾರನ್ನು ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
  • ಕ್ರಿಕೆಟ್ ನನ್ನ ಜೀವನ, ಇದು ಆತ್ಮವಿಶ್ವಾಸ ಮತ್ತು ನನ್ನ ತಲೆಯನ್ನು ಮೇಲಕ್ಕೆತ್ತಿ ಮುಂದೆ ಸಾಗುವ ಸಾಮರ್ಥ್ಯವನ್ನು ನೀಡಿತು ಎಂದು ಗಂಗೂಲಿ ಟ್ವೀಟ್ ಮಾಡಿದ್ದಾರೆ.
Sourav Ganguly Biopic: ತೆರೆಗೆ ಬರಲಿದೆ ಸೌರವ್ ಗಂಗೂಲಿ ಕುರಿತ ಬಯೋಪಿಕ್..! title=
file photo

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಜೀವನ ಚರಿತ್ರೆ ಕುರಿತಾದ ಬಯೋಪಿಕ್ ತೆರೆಗೆ ಬರಲಿದೆ.

ಈ ವಿಚಾರನ್ನು ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.ಕ್ರಿಕೆಟ್ ನನ್ನ ಜೀವನ, ಇದು ಆತ್ಮವಿಶ್ವಾಸ ಮತ್ತು ನನ್ನ ತಲೆಯನ್ನು ಮೇಲಕ್ಕೆತ್ತಿ ಮುಂದೆ ಸಾಗುವ ಸಾಮರ್ಥ್ಯವನ್ನು ನೀಡಿತು ಎಂದು ಗಂಗೂಲಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: IPL 2021 ಪ್ರಿಯರಿಗೆ ಬಿಗ್ ನ್ಯೂಸ್ : 2ನೇ ಹಂತದ IPL ಬಗ್ಗೆ ಮಹತ್ವದ ನಿರ್ಧಾರಕ್ಕೆ ಮುಂದಾದ BCCI

"ಲುವ್ ಫಿಲ್ಮ್ಸ್ ನನ್ನ ಪಯಣದಲ್ಲಿ ಜೀವನಚರಿತ್ರೆಯನ್ನು ನಿರ್ಮಿಸುತ್ತದೆ ಮತ್ತು ಅದನ್ನು ದೊಡ್ಡ ಪರದೆಯಲ್ಲಿ ಜೀವಂತಗೊಳಿಸುತ್ತದೆ ಎಂದು ರೋಮಾಂಚನಗೊಂಡರು" ಎಂದು ಅವರು ಹೇಳಿದರು. "ಲುವ್ ಫಿಲ್ಮ್ಸ್ದಾದಾ ಸೌರವ್ ಗಂಗೂಲಿ(Sourav Ganguly) ಯವರ ಜೀವನಚರಿತ್ರೆಯನ್ನು ನಿರ್ಮಿಸಲಿದೆ ಎಂದು ಘೋಷಿಸಲು ನಾವು ರೋಮಾಂಚನಗೊಂಡಿದ್ದೇವೆ. ಈ ಜವಾಬ್ದಾರಿಯನ್ನು ವಹಿಸಿಕೊಡಲು ನಮಗೆ ಗೌರವವಿದೆ ಮತ್ತು ಉತ್ತಮ ಇನ್ನಿಂಗ್ಸ್‌ಗಾಗಿ ಎದುರು ನೋಡುತ್ತಿದ್ದೇವೆ" ಎಂದು ನಿರ್ಮಾಣ ಸಂಸ್ಥೆ ಟ್ವೀಟ್ ಮಾಡಿದೆ.

ಇದನ್ನೂ ಓದಿ:Sourav Ganguly: ತೆರೆಗೆ ಬರಲಿದೆ ‘ದಾದಾ’ ಜೀವನಚರಿತ್ರೆ, ನಟ ಯಾರು ಗೊತ್ತಾ..?

ಸೌರವ್ ಗಂಗೂಲಿ ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು ಮತ್ತು ಭಾರತೀಯ ಕ್ರಿಕೆಟ್ ಚಿತ್ರಣವನ್ನು ಬದಲಿಸಿದ ಖ್ಯಾತಿ ಅವರದ್ದು ಎಂದು ಹೇಳಬಹುದು.,'ದಾದಾ' 1996 ರಲ್ಲಿ ತಮ್ಮ ಮೊದಲ ಟೆಸ್ಟ್ ಆಡಿದರು, ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ಚೊಚ್ಚಲ ಶತಕ ಗಳಿಸಿದರು. ತದಂತರ ಅವರು ಭಾರತೀಯ ಬ್ಯಾಟಿಂಗ್ ಸ್ಥರದಲ್ಲಿ ಪ್ರಮುಖ ಆಧಾರ ಸ್ಥಂಬವಾದರು.2000 ರಲ್ಲಾದ  ಮ್ಯಾಚ್ ಫಿಕ್ಸಿಂಗ್ ನಂತರ ಭಾರತೀಯ ತಂಡವು ವೈಭವದ ದಿನಗಳನ್ನು ಕಳೆದುಕೊಂಡಿತು. ಇದಾದ ನಂತರ ಗಂಗೂಲಿ ಅವರಿಗೆ ನಾಯಕತ್ವವನ್ನು ವಹಿಸಲಾಯಿತು.

ಇದನ್ನೂ ಓದಿ: T-20 ವಿಶ್ವಕಪ್ ಕುರಿತು ಕ್ಯಾಪ್ಟನ್ ಕೊಹ್ಲಿ-BCCI ಅಧಿಕಾರಿಗಳ ನಡುವೆ ಅನೌಪಚಾರಿಕ ಸಭೆ

ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್ ಮತ್ತು ಹರ್ಭಜನ್ ಸಿಂಗ್ ಮುಂತಾದವರು ಗಂಗೂಲಿ ನಾಯಕತ್ವದಲ್ಲಿ ಮಿಂಚಿದ ಹೊಸ ಪ್ರತಿಭೆಗಳಾಗಿದ್ದಾರೆ.ಅವರು ಭಾರತವನ್ನು 2003 ರ ವಿಶ್ವಕಪ್ ಫೈನಲ್‌ಗೆ ಕರೆದೊಯ್ದರು.2008 ರಲ್ಲಿ ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ತನ್ನ ಕೊನೆಯ ಟೆಸ್ಟ್ ಆಡಿದ ನಂತರ ಗಂಗೂಲಿ  ಕ್ರಿಕೆಟ್ ಗೆ ವಿದಾಯ ಹೇಳಿದರು.ಅವರ ಭಾರತದ ಪರವಾಗಿ 113 ಟೆಸ್ಟ್ ಮತ್ತು 311 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News