IPL 2021: ಬಯೋ-ಬಬಲ್‌ನಲ್ಲಿ ಕರೋನಾ ಪ್ರವೇಶಿಸಿದ್ದು ಹೇಗೆ? ಇಲ್ಲಿಗೆ ಮಹತ್ವದ ಮಾಹಿತಿ
IPL 2021: ಕೋಲ್ಕತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಆದರೆ, ಈ ಇಬ್ಬರು ಆಟಗಾರರು ಕರೋನಾದ ಹಿಡಿತಕ್ಕೆ ಹೇಗೆ ಬಂದರು ಎಂಬುದು ಈಗ ಸ್ಪಷ್ಟವಾಗಿದೆ.
ನವದೆಹಲಿ: ಈಗ ಐಪಿಎಲ್ 2021 (IPL 2021)ಕ್ಕೂ ಕರೋನಾ ಕರಿನೆರಳು ಕಾಡುತ್ತಿದೆ. ಈ ಸಾಂಕ್ರಾಮಿಕ ರೋಗವು ಕೋಲ್ಕತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸದಸ್ಯರನ್ನು ಆವರಿಸಿದೆ. ಕೆಕೆಆರ್ ಆಟಗಾರರು ಸೋಂಕಿಗೆ ಒಳಗಾದ ನಂತರ, ಆರ್‌ಸಿಬಿ ವಿರುದ್ಧದ ಪಂದ್ಯವನ್ನು ಮುಂದೂಡಲಾಗಿದೆ. ಅಂತಹ ಕಟ್ಟುನಿಟ್ಟಿನ ನಿಯಮಗಳ ನಂತರವೂ ಬಯೋ-ಬಬಲ್‌ನಲ್ಲಿ ಕರೋನಾ ಹೇಗೆ ಬಂದಿತು ಎಂಬ ಪ್ರಶ್ನೆಗಳು ಈಗ ಎದ್ದಿವೆ.
ಚಕ್ರವರ್ತಿ ಮತ್ತು ವಾರಿಯರ್ ಸೋಂಕಿತ:
ಕರೋನಾವೈರಸ್ ಟೆಸ್ಟ್‌ನಲ್ಲಿ ಇಬ್ಬರು ಕೋಲ್ಕತಾ ನೈಟ್ ರೈಡರ್ಸ್ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಗೆ ಕರೋನಾ ಪಾಸಿಟಿವ್ ಇರುವುದು ಕಂಡು ಬಂದಿದೆ. ಈ ಬಳಿಕ ಕೆಕೆಆರ್ ಮತ್ತು ಆರ್‌ಸಿಬಿ (KKR vs RCB) ನಡುವಿನ ಪಂದ್ಯವನ್ನು ಮುಂದೂಡಲಾಯಿತು.
ಇದನ್ನೂ ಓದಿ - KKR vs RCB: ಇಬ್ಬರಿಗೆ ಕರೋನಾ ದೃಢ, ಕೆಕೆಆರ್, ಆರ್ಸಿಬಿ ನಡುವಿನ ಪಂದ್ಯ ಮರುನಿಗದಿ
ಬಯೋ-ಬಬಲ್‌ನಲ್ಲಿದ್ದರೂ ಸೋಂಕು ತಗುಲಿದ್ದು ಹೇಗೆ?
ಆದರೆ, ಈ ಇಬ್ಬರು ಆಟಗಾರರು ಕರೋನಾದ (Coronavirus) ಹಿಡಿತಕ್ಕೆ ಹೇಗೆ ಬಂದರು ಎಂಬುದು ಈಗ ಸ್ಪಷ್ಟವಾಗಿದೆ. ಇಎಸ್ಪಿಎನ್ ಕ್ರಿಕಿನ್‌ಫೊ ಪ್ರಕಾರ, ವರುಣ್ ಚಕ್ರವರ್ತಿ ಅವರ ಭುಜದ ಸ್ಕ್ಯಾನ್ಗಾಗಿ ಆಸ್ಪತ್ರೆಗೆ ತೆರಳಿದ್ದರು. ಬಿಸಿಸಿಐ ನಿಯಮಗಳ ಪ್ರಕಾರ ಆಟಗಾರರಿಗೆ ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ಹೋಗಲು ಅವಕಾಶವಿದೆ. ವರುಣ್ ಎಲ್ಲಾ ನಿಯಮಗಳನ್ನು ಪಾಲಿಸಿದ್ದರು ಅದಾಗ್ಯೂ ಈ ಸ್ಪಿನ್ ಬೌಲರ್ ಕರೋನಾವೈರಸ್ ಸೋಂಕಿಗೆ ತುತ್ತಾಗಿದ್ದಾರೆ.
ಇದನ್ನೂ ಓದಿ - Thisara Perera : ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶ್ರೀಲಂಕಾ ಕ್ರಿಕೆಟರ್ ತಿಸರಾ ಪೆರೆರಾ..!
ಸಿಎಸ್‌ಕೆ ತಂಡದ ಸದಸ್ಯನಿಗೂ ಕರೋನಾ ಪಾಸಿಟಿವ್:
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಸಿಇಒ ಕಾಶಿ ವಿಶ್ವನಾಥನ್, ಬೌಲಿಂಗ್ ಕೋಚ್ ಲಕ್ಷ್ಮಿಪತಿ ಬಾಲಾಜಿ ಮತ್ತು ಬಸ್ ಕ್ಲೀನರ್ ಗೆ ಕೋವಿಡ್ -19 ಪಾಸಿಟಿವ್ ಕಂಡು ಬಂದಿದೆ. ಇದಲ್ಲದೆ, ಪ್ರಸ್ತುತ ದೆಹಲಿಯಲ್ಲಿರುವ ಫ್ರಾಂಚೈಸಿಗಳು ನಕಾರಾತ್ಮಕವಾಗಿವೆ. 3 ಕರೋನಾ ಸಕಾರಾತ್ಮಕ ಸದಸ್ಯರನ್ನು ಸೋಮವಾರ ಬೆಳಿಗ್ಗೆ ಮತ್ತೆ ಪರೀಕ್ಷಿಸಲಾಯಿತು, ಆದರೆ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.