ನವದೆಹಲಿ: ಭಾನುವಾರ ನಡೆದ ಐಪಿಎಲ್ 2021 (IPL 2021) ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಏಳು ವಿಕೆಟ್ಗಳಿಂದ ಸೋಲಿಸಿದ ದೆಹಲಿ ಕ್ಯಾಪಿಟಲ್ಸ್ ತಂಡ ಅಗ್ರಸ್ಥಾನದಲ್ಲಿದೆ. ಎಂಟು ಪಂದ್ಯಗಳಲ್ಲಿ ಇದು ಅವರ ಆರನೇ ಗೆಲುವು. ಇದೇ ವೇಳೆ ಪಂಜಾಬ್ ತಂಡ ಐದನೇ ಸೋಲನ್ನು ಅನುಭವಿಸಿತು.
ತಮ್ಮ ತಂಡ ಪಾಯಿಂಟ್ ಟೇಬಲ್‌ನಲ್ಲಿ ನಂಬರ್ -1 ಸ್ಥಾನ ತಲುಪಿರುವ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಕ್ಯಾಪಿಟಲ್ಸ್ (Delhi Capitals) ನಾಯಕ ರಿಷಭ್ ಪಂತ್, ನಾನು ನಮ್ಮ ತರಬೇತುದಾರ ರಿಕಿ ಪಾಟಿಂಗ್ ಮತ್ತು ಹಿರಿಯ ಆಟಗಾರರಿಂದ ಅವರು ಪ್ರತಿದಿನ ಕೆಲವು ಹೊಸ ಕಲಿಕೆಯನ್ನು ಪಡೆಯುತ್ತಿದ್ದೇನೆ. ತಂಡದ ನಾಯಕನಾಗಿ ನನ್ನ ಪಾತ್ರವನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ - Punjab vs Delhi: ವ್ಯರ್ಥವಾದ ಮಾಯಾಂಕ್ ಪ್ರಯತ್ನ, ದೆಹಲಿ ಕ್ಯಾಪಿಟಲ್ಸ್ ಗೆ 7 ವಿಕೆಟ್ ಗಳ ಗೆಲುವು
ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ ನಂತರ ನಾಯಕ ಮಾಯಾಂಕ್ ಅಗರ್ವಾಲ್ ಅವರ ಅಜೇಯ 99 ರನ್ಗಳ ಸಹಾಯದಿಂದ ಪಂಜಾಬ್ ಆರು ವಿಕೆಟ್ಗಳಿಗೆ 166 ರನ್ ಗಳಿಸಿತು. ಶಿಖರ್ ಧವನ್ ಅವರ ಅಜೇಯ 69 ಮತ್ತು ಪೃಥ್ವಿ ಶಾ ಅವರ 39 ರನ್ಗಳ ಸಹಾಯದಿಂದ ದೆಹಲಿ 17.4 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ನಿಗದಿತ ಗುರಿ ಸಾಧಿಸಿತು.
ಪಂದ್ಯದ ನಂತರ ಮಾತನಾಡಿದ ರಿಷಭ್ ಪಂತ್ (Rishabh Pant), 'ಶಿಖರ್ ಭಾಯ್ ಮತ್ತು ಪೃಥ್ವಿ ನಮಗೆ ಉತ್ತಮ ಆರಂಭವನ್ನು ನೀಡಿದರು, ಇದು ನಮ್ಮ ಇನ್ನಿಂಗ್ಸ್ ಉತ್ತಮವಾಗಿ ಕಾಣುವಂತೆ ಮಾಡುತ್ತದೆ. ಪ್ರತಿ ಪಂದ್ಯದಲ್ಲೂ ನೀವು ಉತ್ತಮ ಆರಂಭವನ್ನು ಪಡೆದಾಗ ಅದು ಉತ್ತಮವಾಗಿರುತ್ತದೆ. ಎಲ್ಲಾ ಆಟಗಾರರು ಕೊಡುಗೆ ನೀಡುತ್ತಿದ್ದಾರೆ. ಹೆಚ್ಚಿನ ವಿಷಯಗಳನ್ನು ವ್ಯವಸ್ಥೆ ಮಾಡಲಾಗಿದೆ, ಆದರೆ ಕೋಲ್ಕತಾ ಸುತ್ತಿನಲ್ಲಿ ನಾವು ಕೆಲವು ಹೊಸ ಆಯ್ಕೆಗಳನ್ನು ಪ್ರಯತ್ನಿಸಬೇಕಾಗಿದೆ' ಎಂದರು.
ಇದನ್ನೂ ಓದಿ - IPL 2021, SRH vs RR: ಡೇವಿಡ್ ವಾರ್ನರ್ ರನ್ನು ತಂಡದಿಂದ ಕೈ ಬಿಟ್ಟ SRH
'ತಂಡದಲ್ಲಿ ಸ್ಪರ್ಧೆ ತುಂಬಾ ಚೆನ್ನಾಗಿದೆ. ನಾನು ಪ್ರತಿದಿನ ಆನಂದಿಸುತ್ತಿದ್ದೇನೆ. ನನ್ನ ಅನುಭವ ಮತ್ತು ಹಿರಿಯರ ಸಲಹೆಯನ್ನು ನಾನು ಬಳಸುತ್ತಿದ್ದೇನೆ. ಪ್ರತಿಯೊಬ್ಬರೂ ಒಳ್ಳೆಯದನ್ನು ಅನುಭವಿಸುವ ವಾತಾವರಣವನ್ನು ಸೃಷ್ಟಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ರಿಷಬ್ ತಮ್ಮ ತಂಡದ ಬಗ್ಗೆ ಮುಕ್ತ ಮನಸ್ಸಿನಿಂದ ಮಾತನಾಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.