ನವದೆಹಲಿ: 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 52ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಈಗಾಗಲೇ ಸತತ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್ ಹಂತಕ್ಕೆ ಎಂಟ್ರಿ ಕೊಟ್ಟಿರುವ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಮತ್ತೊಂದು ಗೆಲುವಿನ ಉತ್ಸಾಹದಲ್ಲಿದೆ. ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣ(Abu Dhabi Sheikh Zayed Stadium)ದಲ್ಲಿ ಸಂಜೆ 7.30ಕ್ಕೆ ಪಂದ್ಯವು ನಡೆಯಲಿದೆ.


COMMERCIAL BREAK
SCROLL TO CONTINUE READING

ಈಗಾಗಲೇ ಟೂರ್ನಿಯಿಂದಲೇ ನಿರ್ಗಮಿಸಿರುವ ಕೇನ್ ವಿಲಿಯಮ್ಸನ್(Kane Williamson) ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಈ ಪಂದ್ಯ ಅಷ್ಟೇನೂ ಮಹತ್ವದ್ದಾಗಿಲ್ಲ. ತಾನಾಡಿರುವ 12 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಲ್ಲಿ ಮಾತ್ರ ಗೆಲುವು ಸಾಧಿಸಿರುವ ಹೈದರಾಬಾದ್ 10 ಪಂದ್ಯಗಳಲ್ಲಿ ಸೋಲು ಕಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ 4 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿರುವ ಹೈದರಾಬಾದ್ ಈ ಹಿಂದೆ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿತ್ತು.


ಇದನ್ನೂ ಓದಿ: T20 World Cup: ಟಿ 20 ವಿಶ್ವಕಪ್‌ಗೂ ಮೊದಲು ಟೀಂ ಇಂಡಿಯಾಕ್ಕೆ ಆಘಾತ  


ಪ್ರಸಕ್ತ ಟೂರ್ನಿಯಲ್ಲಿ ಕಳಪೆ ಬ್ಯಾಟಿಂಗ್ ಮತ್ತು ಬೌಲಿಂಗ್ ಸಮಸ್ಯೆಯಿಂದಾಗಿ ವಿಲಿಯಮ್ಸನ್ ಪಡೆ(Sunrisers Hyderabad) ನಿರೀಕ್ಷಿತ ಪ್ರದರ್ಶನ ನೀಡದೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇನ್ನು ತಾನಾಡಿರುವ 12 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿ, 4ರಲ್ಲಿ ಸೋಲು ಕಂಡಿರುವ ಆರ್‌ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ 16 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಬಾಕಿ ಇರುವ 2 ಪಂದ್ಯಗಳಲ್ಲಿಯೂ ಭರ್ಜರಿ ಗೆಲುವು ಸಾಧಿಸಿದರೆ ಕೊಹ್ಲಿ ಪಡೆ ಅಂಕಪಟ್ಟಿಯಲ್ಲಿ ಚೆನ್ನೈ ಮತ್ತು ದೆಹಲಿ ಜೊತೆಗೆ ಮೊದಲೆರಡು ಸ್ಥಾನಕ್ಕಾಗಿ ಸ್ಪರ್ಧೆ ನಡೆಸಲಿದೆ. ಇದರಿಂದ ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಆಸೆಯು ಮತ್ತಷ್ಟು ಸುಲಭವಾಗಲಿದೆ.


RCB) ಹೈದರಾಬಾದ್ ಮೇಲೆ ಸವಾರಿ ಮಾಡಲು ಸಜ್ಜಾಗಿದೆ. ಗ್ಲೆನ್ ಮ್ಯಾಕ್ಸ್‌ ವೆಲ್ ಅದ್ಭುತ ಫಾರ್ಮ್ ನಲ್ಲಿರುವುದು ಆರ್‌ಸಿಬಿಗೆ ವರದಾನವಾಗಿದೆ. ಹೀಗಾಗಿ ಸತತ ಗೆಲುವು ಕಾಣುವ ಮೂಲಕ ಕೊಹ್ಲಿ ಪಡೆ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಿದೆ. ಉಭಯ ತಂಡಗಳಿಗೂ ಅಷ್ಟೇನೂ ಮಹತ್ವದಲ್ಲದ ಈ ಪಂದ್ಯದಲ್ಲಿ ಗೆದ್ದರೆ ಹೈದರಾಬಾದ್ ಗಿಂತ ಆರ್‌ಸಿಬಿಗೆ ಹೆಚ್ಚು ಲಾಭವಾಗಲಿದೆ. ಹೀಗಾಗಿ ಯಾರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆಂಬುದು ಕುತೂಹಲ ಮೂಡಿಸಿದೆ.


ಇದನ್ನೂ ಓದಿ: T20 ವಿಶ್ವ ಕಪ್ ಟೀಂನಲ್ಲಿ ಅಕ್ಟೋಬರ್ 10 ರೊಳಗೆ ಆಗಲಿದೆ ಭಾರೀ ಬದಲಾವಣೆ , ಈ ಮೂವರು ಆಟಗಾರರ ಮೇಲೆ ತೂಗುಗತ್ತಿ        


ಎರಡೂ ತಂಡಗಳ ಸ್ಕ್ವಾಡ್ ಈ ರೀತಿ ಇದೆ:


ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ನವದೀಪ್ ಸೈನಿ, ಗ್ಲೆನ್ ಮ್ಯಾಕ್ಸ್ ವೆಲ್, ಡಾನ್ ಕ್ರಿಶ್ಚಿಯನ್, ರಜತ್ ಪಾಟಿದಾರ್, ದುಷ್ಮಂತ ಚಮೀರಾ, ಪವನ್ ದೇಶಪಾಂಡೆ, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಮೊಹಮ್ಮದ್ ಅಜರುದ್ದೀನ್, ಸಚಿನ್ ಬೇಬಿ, ವಾನಿಂದು ಹಸರಂಗ, ಜಾರ್ಜ್ ಗಾರ್ಟನ್, ಯುಜ್ವೇಂದ್ರ ಚಹಾಲ್, ಶಹಬಾಜ್ ಅಹಮದ್, ದೇವದತ್ ಪಡಿಕ್ಕಲ್, ಕೈಲ್ ಜೇಮೀಸನ್, ಸುಯಾಶ್ ಪ್ರಭುದೇಸಾಯಿ, ಕೆ.ಎಸ್.ಭರತ್, ಟಿಮ್ ಡೇವಿಡ್, ಆಕಾಶ್ ದೀಪ್, ಎಬಿ ಡಿ ವಿಲಿಯರ್ಸ್.


ಸನ್ ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಡೇವಿಡ್ ವಾರ್ನರ್, ಮನೀಶ್ ಪಾಂಡೆ, ಶೆರ್ಫೇನ್ ರುದರ್ಫೋರ್ಡ್, ವೃದ್ಧಿಮಾನ್ ಸಹಾ, ಶ್ರೀವಾತ್ ಗೋಸ್ವಾಮಿ, ರಶೀದ್ ಖಾನ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ಅಭಿಷೇಕ್ ಶರ್ಮಾ, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಖಲೀಲ್ ಅಹ್ಮದ್, ಉರ್ಮಾನ್ ಮಲಿಕ್, ಬೆಸಿಲ್ ಥಾಂಪಿ, ಸಂದೀಪ್ ಶರ್ಮಾ, ಶಹಬಾಜ್ ನದೀಮ್, ಅಬ್ದುಲ್ ಸಮದ್, ಜೆ.ಸುಚಿತ್, ಜೇಸನ್ ಹೋಲ್ಡರ್, ವಿರಾಟ್ ಸಿಂಗ್, ಪ್ರಿಯಂ ಗರ್ಗ್, ಕೇದಾರ್ ಜಾಧವ್, ಮುಜೀಬ್-ಉರ್-ರಹಮಾನ್, ಜೇಸನ್ ರಾಯ್.


ಐಪಿಎಲ್‌ ಪಂದ್ಯ: 52


ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್ 


ದಿನಾಂಕ: ಅಕ್ಟೋಬರ್ 06, ಬುಧವಾರ


ಸ್ಥಳ: ಅಬುಧಾಬಿಯ ಶೇಕ್ ಜಾಯೆದ್ ಕ್ರೀಡಾಂಗಣ


ಸಮಯ: ಸಂಜೆ 7.30ಕ್ಕೆ      


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.