ಐಪಿಎಲ್ 2021 (IPL 2021) ಪ್ರಾರಂಭವಾಗುವ ಮೊದಲೇ ದೆಹಲಿ ಕ್ಯಾಪಿಟಲ್ಸ್ ನಿಯಮಿತ ನಾಯಕ ಶ್ರೇಯಸ್ ಅಯ್ಯರ್ ಭುಜದ ಗಾಯದಿಂದಾಗಿ ಇಡೀ ಋತುವಿನಿಂದ ಹೊರಗುಳಿದಿದ್ದಾರೆ. ರಿಷಭ್ ಪಂತ್ ಅವರನ್ನು ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕನನ್ನಾಗಿ ನೇಮಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶ್ರೇಯಸ್ ಅಯ್ಯರ್‌ಗೆ ಈ ವರ್ಷ ಐಪಿಎಲ್ ಸಂಬಳ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ ಹಿಂದಿನ ಋತುವಿನಲ್ಲಿ ಮೊದಲ ಬಾರಿಗೆ ದೆಹಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ಐಪಿಎಲ್ ಫೈನಲ್‌ವರೆಗೆ ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ ಅವರನ್ನು ದೆಹಲಿ ಕ್ಯಾಪಿಟಲ್ಸ್  ಏಳು ಕೋಟಿ ಖರ್ಚು ಮಾಡಿದ ನಂತರ ಫ್ರ್ಯಾಂಚೈಸ್ಗೆ ಜೋಡಿಸಿತ್ತು. ಶ್ರೇಯಸ್ ಅಯ್ಯರ್ ಅವರನ್ನು ಐಪಿಎಲ್‌ನ ಪ್ಲೇಯರ್ ಇನ್ಶುರೆನ್ಸ್ ಪಾಲಿಸಿಯ ವ್ಯಾಪ್ತಿಗೆ ಒಳಪಡಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಋತುವಿನಲ್ಲಿ ಶ್ರೇಯಸ್ ಅಯ್ಯರ್ ಒಂದೇ ಒಂದು ಪಂದ್ಯವನ್ನು ಆಡದಿದ್ದರೂ ಸಹ ಅವರ ಒಪ್ಪಂದದ ಪೂರ್ಣ ಮೊತ್ತವನ್ನು ನೀಡಲಾಗುತ್ತದೆ. 


ಇದನ್ನೂ ಓದಿ - IPL 2021: ಈ ಆಟಗಾರನ ಹೆಗಲಿಗೆ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ


ಆಟಗಾರರ ವಿಮಾ ಪಾಲಿಸಿ ಎಂದರೇನು?
ಬಿಸಿಸಿಐ ನಿಯಮಗಳ ಪ್ರಕಾರ ಐಪಿಎಲ್ ಪ್ಲೇಯರ್ ಇನ್ಶುರೆನ್ಸ್ ಪಾಲಿಸಿ (IPL Player Insurance Policy), ಭಾರತೀಯ ತಂಡದಲ್ಲಿ ಆಡುವ ಕಾರಣದಿಂದಾಗಿ ಕೇಂದ್ರ ಒಪ್ಪಂದದ ಅಡಿಯಲ್ಲಿ ಬರುವ ಆಟಗಾರನು ಆಟಗಾರರ ವಿಮಾ ಪಾಲಿಸಿಯ ಲಾಭವನ್ನು ಪಡೆಯಬಹುದು. ಈ ಯೋಜನೆಯನ್ನು 2011 ರಲ್ಲಿ ಜಾರಿಗೆ ತರಲಾಯಿತು. ಇದರ ಅಡಿಯಲ್ಲಿ, ಆಟದ ಸಮಯದಲ್ಲಿ ಗಾಯಗೊಂಡ ಭಾರತೀಯ ಆಟಗಾರರು ಪರಿಹಾರವನ್ನು ಪಡೆಯಬಹುದು.


ಏಕದಿನ ಸರಣಿಯಲ್ಲಿ ಅಯ್ಯರ್ ಗಾಯಗೊಂಡರು 
ಏಕದಿನ ಸರಣಿಯ ಸಂದರ್ಭದಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಶ್ರೇಯಸ್ ಅಯ್ಯರ್ (Shreyas Iyer) ಗಾಯಗೊಂಡರು. ಈ ಸಂದರ್ಭದಲ್ಲಿ ಅವರ ಭುಜಕ್ಕೆ ಬಲವಾದ ಪೆಟ್ಟಾಗಿರುವ ಕಾರಣ ವೈದ್ಯರು ಅವರಿಗೆ ಹಲವು ವಾರಗಳವರೆಗೆ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಅವರಿಗೆ ಏಪ್ರಿಲ್ ಮೊದಲ ವಾರದಲ್ಲಿ ಶಸ್ತ್ರಚಿಕಿತ್ಸೆ ನಡೆಸುವ ಸಾಧ್ಯತೆ ಇದ್ದು, ಈ ಕಾರಣದಿಂದಾಗಿ ಶ್ರೇಯಸ್ ಅಯ್ಯರ್ ಈ ಐಪಿಎಲ್ ಋತುವಿನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ.


ಇದನ್ನೂ ಓದಿ - IPL 2021: ಈ ಬಾರಿ ಲೆಗ್ ಸ್ಪಿನ್ ಜೊತೆಗೆ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ Amit Mishra


ಯಾವ ಆಧಾರದ ಮೇಲೆ ಪರಿಹಾರವನ್ನು ನೀಡಲಾಗುತ್ತದೆ?
ಆಟಗಾರರ ವಿಮಾ ಪಾಲಿಸಿ (ಐಪಿಎಲ್ ಪ್ಲೇಯರ್ ಇನ್ಶುರೆನ್ಸ್ ಪಾಲಿಸಿ) ಅಡಿಯಲ್ಲಿ, ಯಾವುದೇ ಭಾರತೀಯ ಆಟಗಾರನಿಗೆ ಗಾಯದಿಂದಾಗಿ ಹೆಚ್ಚು ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿದ್ದಾಗ ತಂಡದ ಒಟ್ಟು ಪಂದ್ಯಗಳ ಆಧಾರದ ಮೇಲೆ ಆ ಪಂದ್ಯಗಳಿಗೆ ಪೂರ್ಣ ಹಣವನ್ನು ನೀಡಲಾಗುತ್ತದೆ. ಶ್ರೇಯಸ್ ಅಯ್ಯರ್ ಬಗ್ಗೆ ಹೇಳುವುದಾದರೆ ಅವರು ಇಡೀ ಋತುವಿನಿಂದ ಹೊರಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ವಿಮೆಯಡಿಯಲ್ಲಿ ಸಂಪೂರ್ಣ ಏಳು ಕೋಟಿಗಳನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.