ನವದೆಹಲಿ: 15ನೇ ಸಾಲಿನ ಐಪಿಎಲ್ ಟೂರ್ನಿ(Indian Premier League 2022)ಯಲ್ಲಿ ಸಿಎಸ್‌ಕೆ ತಂಡದ ಆರಂಭ ತುಂಬಾ ಕೆಟ್ಟದಾಗಿದೆ. ಸಿಎಸ್‌ಕೆ ಸತತ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಬೇಕಾಯಿತು. ಸಿಎಸ್‌ಕೆ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಲ್ಲಿ ಯಾರೂ ಅಮೋಘ ಆಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಸೋಲಿಗೆ ಮೂರು ಪ್ರಮುಖ ಕಾರಣಗಳೇನು ಗೊತ್ತಾ..?


COMMERCIAL BREAK
SCROLL TO CONTINUE READING

ತಂಡದಲ್ಲಿ ಅನುಭವಿ ನಾಯಕರಿಲ್ಲ


ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್.ಧೋನಿ(MS Dhoni) ಐಪಿಎಲ್ 2022 ಪ್ರಾರಂಭವಾಗುವ ಮೊದಲೇ ಸಿಎಸ್‌ಕೆ ನಾಯಕತ್ವವನ್ನು ತೊರೆದಿದ್ದರು. ಅವರ ನಂತರ ರವೀಂದ್ರ ಜಡೇಜಾ(Ravindra Jadeja) ಅವರನ್ನು ನಾಯಕರನ್ನಾಗಿ ಮಾಡಲಾಯಿತು. ಜಡೇಜಾಗೆ ಈ ಮೊದಲು ನಾಯಕತ್ವದ ಅನುಭವ ಇರಲಿಲ್ಲ. ನಾಯಕತ್ವದ ಒತ್ತಡ ಜಡೇಜಾ ಮೇಲೆ ಹೆಚ್ಚಿದ್ದು, ಇದರಿಂದಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಜಡೇಜಾ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಲು ಹಾಗೂ ರನ್ ಗಳಿಸಲು ಸಾಧ್ಯವಾಗುತ್ತಿಲ್ಲ, ಬೌಲಿಂಗ್‍ನಲ್ಲಿಯೂ ಅದ್ಭುತ ಪ್ರದರ್ಶನ ನೀಡಲು ಚೆನ್ನೈ ವಿಫಲವಾಗಿದೆ.  


ಇದನ್ನೂ ಓದಿ: ಸತತ 3 ಸೋಲಿನಿಂದ ಐಪಿಎಲ್ ನಲ್ಲಿ ಇತಿಹಾಸ ನಿರ್ಮಿಸಿದ CSK ತಂಡ! 


ಸ್ಟಾರ್ ಆರಂಭಿಕ ಆಟಗಾರರ ಕೊರತೆ


CSK ತಂಡವು 2021ನೇ ಸಾಲಿನ ಐಪಿಎಲ್(14ನೇ ಆವೃತ್ತಿ)ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದಕ್ಕೆ ಪ್ರಮುಖ ಕಾರಣ ಆರಂಭಿಕ ಜೋಡಿಯ ಆಟ. ಆದರೆ ಈ ಬಾರಿ CSK ಖಾಯಂ ಆರಂಭಿಕ ಜೋಡಿಯನ್ನು ಹೊಂದಿಲ್ಲ. ಇದು ತಂಡಕ್ಕೆ ದೊಡ್ಡ ಹೊಡೆತ ನೀಡಿದಂತಾಗಿದೆ. ಕೆಕೆಆರ್ ವಿರುದ್ಧದ ಮೊದಲ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್(Ruturaj Gaikwad) ಮತ್ತು ಡೆವೊನ್ ಕಾನ್ವೇ ಆರಂಭಿಕರಾಗಿ ಕಣಕ್ಕಿಳಿದರೂ ಪ್ರಯೋಜನವಾಗಲಿಲ್ಲ. ಈ ಜೋಡಿ ಉತ್ತಮ ಆರಂಭ ನೀಡದ ಕಾರಣ ಚೆನ್ನೈ ಮೊದಲ ಪಂದ್ಯದಲ್ಲಿಯೇ ಸೋಲು ಕಾಣಬೇಕಾಯಿತು. ಇದಾದ ಬಳಿಕ 2ನೇ ಪಂದ್ಯದಲ್ಲಿ ಲಕ್ನೋ ತಂಡದ ವಿರುದ್ಧ ಋತುರಾಜ್ ಮತ್ತು ರಾಬಿನ್ ಉತ್ತಪ್ಪ ಓಪನಿಂಗ್ ಮಾಡಿದರು. ಸಿಎಸ್‌ಕೆ ಸೋಲಿಗೆ ಅವರ ಆರಂಭಿಕ ಜೋಡಿಯ ವೈಫಲ್ಯವೇ ದೊಡ್ಡ ಕಾರಣ. ಸಿಎಸ್‌ಕೆ ಈಗ ಆರ್‌ಸಿಬಿ ತಂಡದ ನಾಯಕರಾಗಿರುವ ಸ್ಟಾರ್ ಓಪನರ್ ಫಾಫ್ ಡು ಪ್ಲೆಸಿಸ್(Faf du Plessis) ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ.


ಚೆನ್ನೈ ತಂಡದ ಬೌಲಿಂಗ್ ದುರ್ಬಲವಾಗಿದೆ!


ಸಿಎಸ್‌ಕೆ ತಂಡದ ಹಲವು ಸ್ಟಾರ್ ಆಟಗಾರರು ಗಾಯದ ಸಮಸ್ಯೆಯಿಂದ ಹೊರಗುಳಿಯುತ್ತಿದ್ದಾರೆ. ಇವರಲ್ಲಿ ದೀಪಕ್ ಚಹಾರ್, ಕ್ರಿಸ್ ಜೋರ್ಡಾನ್ ಮತ್ತು ಆಡಮ್ ಮಿಲ್ನೆ ಅವರನ್ನು 14 ಕೋಟಿ ರೂ. ಖರೀದಿಸಲಾಗಿದೆ. ತಂಡದಲ್ಲಿ ಈ ಆಟಗಾರರ ಅನುಪಸ್ಥಿತಿಯಿಂದಾಗಿ ತಂಡದ ಬೌಲಿಂಗ್ ತುಂಬಾ ದುರ್ಬಲವಾಗಿ ಕಾಣುತ್ತಿದೆ. ಸಿಎಸ್‌ಕೆ(Chennai Super Kings) ಬೌಲರ್ ಗಳು ಎದುರಾಳಿ ತಂಡಗಳ ವಿರುದ್ಧ ಹೆಚ್ಚು ರನ್ ಬಿಟ್ಟುಕೊಡುತ್ತಿದ್ದಾರೆ. ವಿಕೆಟ್ ಪಡೆಯುವಲ್ಲಿಯೂ ಅವರು ಯಶಸ್ವಿಯಾಗುತ್ತಿಲ್ಲ. ಇದು ತಂಡದ ಸತತ ಸೋಲಿಗೆ ಕಾರಣವಾಗಿದೆ.


ಇದನ್ನೂ ಓದಿ: ICC Womens World Cup 2022: ಇಂಗ್ಲೆಂಡ್ ಮಣಿಸಿ 7ನೇ ಬಾರಿ ವಿಶ್ವ ಚಾಂಪಿಯನ್ ಆದ ಆಸ್ಟ್ರೇಲಿಯಾ


4 ಬಾರಿ ಚಾಂಪಿಯನ್ ಆಗಿರುವ ಚೆನ್ನೈ


ಎಂ.ಎಸ್.ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ತಂಡ 4 ಬಾರಿ ಐಪಿಎಲ್(IPL Champions) ಪ್ರಶಸ್ತಿಯನ್ನು ಗೆದ್ದಿದೆ. ಆದರೆ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ತಂಡವು ಉತ್ತಮ ಲಯದ ಕೊರತೆಯನ್ನು ಎದುರಿಸುತ್ತಿದೆ. ಕೆಕೆಆರ್ ಮತ್ತು ಲಕ್ನೋ ತಂಡಗಳ ವಿರುದ್ಧ ಸಿಎಸ್‌ಕೆ 6 ವಿಕೆಟ್‌ಗಳಿಂದ ಹೀನಾಯ ಸೋಲನುಭವಿಸಿತ್ತು. ಅದೇ ರೀತಿ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ 3ನೇ ಪಂದ್ಯದಲ್ಲಿ 54 ರನ್‌ಗಳಿಂದ ಸೋಲು ಕಂಡಿತ್ತು.   


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.