ಕ್ರೈಸ್ಟ್‌ಚರ್ಚ್: ಇಲ್ಲಿನ ಹ್ಯಾಗ್ಲೆ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಸಿಸಿ ಮಹಿಳಾ ವಿಶ್ವಕಪ್(ICC Womens World Cup 2022) ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮಣಿಸುವ ಮೂಲಕ ಆಸ್ಟ್ರೇಲಿಯಾ ವನಿತೆಯರ ತಂಡ 7ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಆಸ್ಟ್ರೇಲಿಯಾ ತಂಡ(AUSW vs ENGW) 71 ರನ್‍ಗಳ ಭರ್ಜರಿ ಜಯ ಸಾಧಿಸಿತು. ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯ ನಿಗದಿತ 50 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 356 ರನ್‍ಗಳ ಬೃಹತ್ ಮೊತ್ತವನ್ನು ಪೇರಿಸಿತು. ಆಸೀಸ್(Australia) ಪರ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಅಲಿಸ್ಸಾ ಹೀಲಿ (170) ಭರ್ಜರಿ ಶತಕ ಭಾರಿಸಿದರು. ರಾಚೆಲ್ ಹೇನ್ಸ್(68) ಮತ್ತು ಬೆತ್ ಮೂನಿ(62) ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ತಂಡದ ಗೆಲುವಿಗೆ ಉತ್ತಮ ಕೊಡುಗೆ ನೀಡಿದರು.
World champions! 🏆 Congratulations to our Australian Women's Cricket Team on a seventh ODI World Cup title.
A huge shoutout to all teams for an outstanding tournament played in great spirit 👏 https://t.co/EUANFwh5FU
— Cricket Australia (@CricketAus) April 3, 2022
ಇದನ್ನೂ ಓದಿ: IPL 2022, CSK vs PBKS: ಕಿಂಗ್ಸ್‌ಗಳ ಕದನದಲ್ಲಿ ಯಾರಿಗೆ ಸಿಗುತ್ತೆ ಗೆಲುವು..?
357 ರನ್‍ಗಳ ಗೆಲುವಿನ ಗುರಿ ಬೆನ್ನತ್ತಿದ ಇಂಗ್ಲೆಂಡ್(England) 43.4 ಓವರ್‍ಗಳಲ್ಲಿ ತೆನ್ನೆಲ್ಲಾ ವಿಕೆಟ್ ಕಳೆದುಕೊಂಡು 285 ರನ್ ಗಳಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್ ಪರ ನಟಾಲಿಯಾ ಸ್ಕಿವರ್ (ಅಜೇಯ 148) ಏಕಾಂಗಿ ಹೊರಾಟ ನಡೆಸಿದರು. ಇವರೊಬ್ಬರನ್ನು ಬಿಟ್ಟರೆ ಆಂಗ್ಲ ತಂಡದ ಪರ ಯಾವೊಬ್ಬ ಆಟಗಾರ್ತಿಯೂ ಹೆಚ್ಚುಹೊತ್ತು ನಿಂತು ಆಡಲಿಲ್ಲ. ಹೀಗಾಗಿ ಇಂಗ್ಲೆಂಡ್ 71 ರನ್‍ಗಳ ಅಂತರದಲ್ಲಿ ಸೋಲು ಕಂಡಿತು. ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ ತಂಡ 7ನೇ ಬಾರಿಗೆ ಐಸಿಸಿ ಚಾಂಪಿಯನ್ ಪಟ್ಟ(Womens World Cup)ವನ್ನು ತನ್ನದಾಗಿಸಿಕೊಂಡಿತು.
Ok. We've updated the list!
But it's hard to keep up with these record-breaking Aussies! #CWC22 https://t.co/RF5aSEqdpG pic.twitter.com/6kjiJxMDyA
— cricket.com.au (@cricketcomau) April 3, 2022
ಇದನ್ನೂ ಓದಿ: IPL 2022: ಸತತ 2 ಸೋಲುಗಳಿಂದ ತಾಳ್ಮೆ ಕಳೆದುಕೊಂಡ ರೋಹಿತ್ ಶರ್ಮಾ ಮಾಡಿದ್ದೇನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.