ನವದೆಹಲಿ : ಹಾರ್ದಿಕ್ ಪಾಂಡ್ಯ ಬಗ್ಗೆ ಬಿಗ್ ನ್ಯೂಸ್ ಒಂದು ಹೊರಬೀಳುತ್ತಿದೆ. ಈ ವರ್ಷ ಮುಂಬೈ ಇಂಡಿಯನ್ಸ್(Mumbai Indians) ಜೊತೆಗಿನ ಸಂಬಂಧವನ್ನು ಮುರಿದ ಹಾರ್ದಿಕ್ ಪಾಂಡ್ಯ ಈಗ ಮತ್ತೊಂದು ಐಪಿಎಲ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. ಮೆಗಾ ಹರಾಜಿಗೂ ಮುನ್ನ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ಪಾಂಡ್ಯ ಅವರನ್ನು ಉಳಿಸಿಕೊಳ್ಳಲಿಲ್ಲ.


COMMERCIAL BREAK
SCROLL TO CONTINUE READING

ಪಾಂಡ್ಯ ಬಗ್ಗೆ ಬಿಗ್ ನ್ಯೂಸ್ 


ವರದಿಗಳ ಪ್ರಕಾರ, ಗುಜರಾತ್‌ನ ಬರೋಡಾದಿಂದ ಬಂದಿರುವ ಹಾರ್ದಿಕ್ ಪಾಂಡ್ಯ(Hardik Pandya) ಈಗ ಸಿವಿಸಿ ಕ್ಯಾಪಿಟಲ್ಸ್ ಒಡೆತನದ ಅಹಮದಾಬಾದ್ ಫ್ರಾಂಚೈಸಿಗೆ ನಾಯಕರಾಗಲಿದ್ದಾರೆ. ಫ್ರಾಂಚೈಸಿಯಿಂದ ಅಧಿಕೃತ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ. ಮುಂಬೈ ಇಂಡಿಯನ್ಸ್‌ನ ಮಾಜಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಋತುವಿನಲ್ಲಿ ಅಹಮದಾಬಾದ್ ಫ್ರಾಂಚೈಸಿಗೆ ನಾಯಕರಾಗುವ ಸಾಧ್ಯತೆಯಿದೆ.


ಇದನ್ನೂ ಓದಿ : ಧೋನಿ-ಅಫ್ರಿದಿ, ಯುವರಾಜ್ ಅಲ್ಲ; ಕ್ರಿಕೆಟ್ ಇತಿಹಾಸದಲ್ಲಿ ಅತಿ ದೂರದ ಸಿಕ್ಸರ್ ಬಾರಿಸಿದ ಈ ಆಟಗಾರ!


ಈ ತಂಡದ ನಾಯಕನಾಗಬಹುದು


ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಅಹಮದಾಬಾದ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ ಎಂಬ ವರದಿಗಳೂ ಇವೆ. 2017 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಶಿಶ್ ನೆಹ್ರಾ, ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅವರ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ್ದಾರೆ.


ರಶೀದ್ ಖಾನ್ ಮತ್ತು ಇಶಾನ್ ಕಿಶನ್ ಕೂಡ ಇರಲಿದ್ದಾರೆ 


ಅಹಮದಾಬಾದ್ ಫ್ರಾಂಚೈಸಿಯು ಅಫ್ಘಾನಿಸ್ತಾನದ ಆಲ್‌ರೌಂಡರ್ ರಶೀದ್ ಖಾನ್(Rashid Khan) ಮತ್ತು ಮುಂಬೈ ಇಂಡಿಯನ್ಸ್ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರನ್ನು ಸಹಿ ಹಾಕಲು ನೋಡುತ್ತಿದೆ. ಮುಂದಿನ ಋತುವಿನಿಂದ ಐಪಿಎಲ್‌ನಲ್ಲಿ ಆಡಲಿರುವ ಎರಡು ಹೊಸ ಫ್ರಾಂಚೈಸಿಗಳ ಬಿಡ್ ಅನ್ನು ಗೆದ್ದ ಎರಡು ಕಂಪನಿಗಳಲ್ಲಿ CVC ಒಂದಾಗಿದೆ.


ಇದನ್ನೂ ಓದಿ : Video: No Ball, Wide Ball, Sixer ಯಾವುದು ಇಲ್ಲ, ಆದರೂ ಒಂದು ಬಾಲ್ ಗೆ 7 ರನ್ಸ್ ಬಂತು! ಹೇಗೆ ಅಂತೀರಾ?


ಬಿಸಿಸಿಐನಿಂದ ಪತ್ರ ಸ್ವೀಕರಿಸಲು ವಿಳಂಬ


ಕಳೆದ ವರ್ಷ ಅಕ್ಟೋಬರ್‌ನಲ್ಲಿ ದುಬೈನಲ್ಲಿ ನಡೆದ ಹರಾಜಿನಲ್ಲಿ ಅಹಮದಾಬಾದ್ ಫ್ರಾಂಚೈಸಿಯನ್ನು ಗೆದ್ದ ನಂತರ ಕಂಪನಿಯು ಬ್ಯಾಟಿಂಗ್ ಕಂಪನಿಗಳೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಪರಿಶೀಲನೆಗೆ ಒಳಗಾದ ಕಾರಣ ಬಿಸಿಸಿಐ(BCCI)ನಿಂದ ಸಿವಿಸಿಗೆ ಪತ್ರವನ್ನು ಪಡೆಯುವಲ್ಲಿ ವಿಳಂಬವಾಗಿತ್ತು. ಹರಾಜಿಗೂ ಮುನ್ನ ತಮ್ಮ ಆಯ್ಕೆಯ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ ಹೊಸ ತಂಡಗಳಿಗೆ ಈ ತಿಂಗಳ ಅಂತ್ಯದವರೆಗೆ ಕಾಲಾವಕಾಶ ನೀಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.