Video: No Ball, Wide Ball, Sixer ಯಾವುದು ಇಲ್ಲ, ಆದರೂ ಒಂದು ಬಾಲ್ ಗೆ 7 ರನ್ಸ್ ಬಂತು! ಹೇಗೆ ಅಂತೀರಾ?

NZ Vs BAN: ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿಚಿತ್ರವಾದ ಸಾಧನೆ ಕಂಡುಬಂದಿದೆ. ಅಲ್ಲಿ ಒಂದೇ ಎಸೆತದಲ್ಲಿ 7 ರನ್ ಗಳು (7 Runs On 1 Ball) ಬಂದಿವೆ. 

Written by - Nitin Tabib | Last Updated : Jan 9, 2022, 04:10 PM IST
  • ನ್ಯೂಜಿಲ್ಯಾಂಡ್ ವಿರುದ್ಧ ಬಾಂಗ್ಲಾದೇಶ್ ಸರಣಿ
  • ಒಂದೇ ಎಸೆತದಲ್ಲಿ 7 ರನ್ಸ್ ಬಂತು
  • ಬೌಂಡರಿ ಕೂಡ ಇಲ್ಲ ಸಿಕ್ಸರ್ ಕೂಡ ಇಲ್ಲ
Video: No Ball, Wide Ball, Sixer ಯಾವುದು ಇಲ್ಲ, ಆದರೂ ಒಂದು ಬಾಲ್ ಗೆ 7 ರನ್ಸ್ ಬಂತು! ಹೇಗೆ ಅಂತೀರಾ? title=
New Zealand Vs Bangladesh (Video Grab)

ನವದೆಹಲಿ: New Zealand Vs Bangladesh - ಕ್ರಿಕೆಟ್ ಮೈದಾನದ ಆಗಾಗ ದಾಖಲೆಗಳು ನಿರ್ಮಾಣಗೊಳ್ಳುತ್ತಲೇ ಇರುತ್ತವೆ. ದಿನ ನಿತ್ಯ ಅಥವಾ ಆಗಾಗ ಯಾವುದಾದರೊಂದು ದಾಖಲೆ ನಿರ್ಮಾಣಗೊಳ್ಳುವ ಆಟ ಇದಾಗಿದೆ. ಇತ್ತೀಚೆಗೆ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ (BAN Vs NZ) ನಡುವೆ ನಡೆಯುತ್ತಿರುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇದೇ ರೀತಿಯ ಸಾಧನೆ ಕಂಡುಬಂದಿದೆ. ಅಲ್ಲಿ ಒಂದೇ ಎಸೆತದಲ್ಲಿ 7 ರನ್ ಗಳಿಸಲಾಗಿದೆ. ಆಶ್ಚರ್ಯ ಎಂದರೆ ಈ ಬಾಲ್‌ನಲ್ಲಿ ಯಾವುದೇ ಫೋರ್ ಅಥವಾ ಯಾವುದೇ ಸಿಕ್ಸರ್ ಬಂದಿಲ್ಲ ಮತ್ತು ಬಾಲ್ ನೋ ಬಾಲ್ ಅಥವಾ ವೈಡ್ ಬಾಲ್ ಕೂಡ ಆಗಿಲ್ಲ.

ಒಂದು ಎಸೆತದಲ್ಲಿ 7 ರನ್ ಬಂದಿದ್ದು ಹೇಗೆ?(Cricket News)
ಕ್ರೈಸ್ಟ್‌ಚರ್ಚ್‌ನಲ್ಲಿ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ನಡುವೆ ಸರಣಿಯ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ ತಂಡ, ನ್ಯೂಜಿಲೆಂಡ್‌ನಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿಯನ್ನು ಗೆಲ್ಲುವ ಪ್ರಯತ್ನದಲ್ಲಿದೆ. ಇದೇ ವೇಳೆ ನ್ಯೂಜಿಲೆಂಡ್‌ನ ದೃಷ್ಟಿ ಈ ಸರಣಿಯನ್ನು ಡ್ರಾ ಮಾಡುವತ್ತ ನೆಟ್ಟಿದೆ. ಆದರೆ ಈ ನಡುವೆ ಎರಡನೇ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ಸಂಭವಿಸಿದೆ. ನ್ಯೂಜಿಲೆಂಡ್‌ನ ಇನ್ನಿಂಗ್ಸ್‌ನಲ್ಲಿ, ಬಾಂಗ್ಲಾದೇಶದ ವೇಗದ ಬೌಲರ್ ಇಬಾದತ್ ಹುಸೈನ್ ಮಾಡಿರುವ ಒಂದು ಬಾಲ್ ನಲ್ಲಿ  7 ರನ್ (1 Ball 7 Runs) ಗಳಿಸಲಾಗಿದೆ.

ಇದನ್ನೂ ಓದಿ-Sachin Tendulkar : ವೃತ್ತಿಜೀವನದಲ್ಲಿ ಈ ಬೌಲರ್‌ಗಳಿಗಿಂತ ಹೆಚ್ಚು ವಿಕೆಟ್‌ ಪಡೆದ ಸಚಿನ್ ತೆಂಡೂಲ್ಕರ್! 

ಹುಸೇನ್ ಈ ಬೌಲ್ ಎಸೆದಾಗ  ನ್ಯೂಜಿಲೆಂಡ್ ಆರಂಭಿಕ ವಿಲ್ ಯಂಗ್ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ಓವರ್ ನ ಕೊನೆಯ ಎಸೆತದಲ್ಲಿ ವಿಲ್ ಯಂಗ್ ಅವರ ಬ್ಯಾಟ್ ನ ಏಜ್ ಪಡೆದು ಚೆಂಡು ಸ್ಲಿಪ್ ಗೆ ತಲುಪಿದೆ. ಇದಾದ ಬಳಿಕ ಸ್ಲಿಪ್ ನಲ್ಲಿದ್ದ ಫೀಲ್ಡರ್ ಡೈವ್ ಮಾಉವ ಮೂಲಕ ಕ್ಯಾಚ್ ಹಿಡಿಯಲು ಯತ್ನಿಸಿದ್ದಾರೆ ಆದರೆ ಚೆಂಡು ಫೀಲ್ಡರ್ ಕೈ ಬಿಟ್ಟು ಥರ್ಡ್ ಮ್ಯಾನ್ ದಿಕ್ಕಿಗೆ ಹೋಗಿದೆ. ನಂತರ ವಿಲ್ ಯಂಗ್ ಮತ್ತು ಟಾಮ್ ಲ್ಯಾಥಮ್ ಮೂರು ರನ್ ಪೂರ್ಣಗೊಳಿಸಿದ್ದಾರೆ. ಈ ವೇಳೆ ಬೌಲ್ ಚೆಸ್ ಮಾಡಿದ ಥರ್ಡ್ ಮ್ಯಾನ್ ಫಿಲ್ದರ್ ಚೆಂಡನ್ನು ಬೌಂಡರಿ ಪ್ರವೇಶಿಸಲು ಬಿಟ್ಟಿಲ್ಲ. ಇದಾದ ಬಳಿಕ ಅವರು ಎಸೆದ ಚೆಂಡು ಬೌಲರ್ ಕೈ ಜಾರಿ ಬೌಂಡರಿ ಸೇರಿದೆ. ಅದೇ ರೀತಿ 4 ರನ್ ಓವರ್ ಥ್ರೋ ಮತ್ತು 3 ರನ್ ಎಸ್ಕೇಪ್ ಒಟ್ಟು 7 ರನ್ ಬಂದಿವೆ. 

ಇದನ್ನೂ ಓದಿ-ರೋಹಿತ್ ಕನಸು ಭಗ್ನಗೊಳಿಸಲಿರುವ 29ರ ಹರೆಯದ ಆಟಗಾರ: ಶೀಘ್ರವೇ ಹೊಸ ಟೆಸ್ಟ್ ನಾಯಕನಾಗಿ ಆಯ್ಕೆ?

ಬಾಂಗ್ಲಾದೇಶ ಮೊದಲ ಜಯ ಸಾಧಿಸಿದೆ
ಬಾಂಗ್ಲಾದೇಶ ಈ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಇತಿಹಾಸ ನಿರ್ಮಿಸಿದೆ. ಬೇ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಬಾಂಗ್ಲಾದೇಶಕ್ಕೆ ಗೆಲ್ಲಲು ಕೇವಲ 40 ರನ್ ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬಾಂಗ್ಲಾದೇಶ ತಂಡ 2 ವಿಕೆಟ್ ಕಳೆದುಕೊಂಡು ನಿರಾಯಾಸವಾಗಿ ತಲುಪಿದೆ. ಈ ಪಂದ್ಯದಲ್ಲಿ, ಇಬಾದತ್ ಹುಸೇನ್ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಬೌಲಿಂಗ್‌ ಮಾಡುವ ಮೂಲಕ 6 ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ-Ind Vs SA : ತನ್ನ ನೆಚ್ಚಿನ ಆಟಗಾರನಿಗೆ ಮೋಸ ಮಾಡಿದ ಕೆಎಲ್ ರಾಹುಲ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News