ನವದೆಹಲಿ: ಐಪಿಎಲ್‌ನ ಅಭಿಮಾನಿಗಳು ಪ್ರಪಂಚದಾದ್ಯಂತ ಇದ್ದಾರೆ. ವಿಶ್ವದಲ್ಲೇ ಅತಿಹೆಚ್ಚು ಜನರು ವೀಕ್ಷಿಸಲ್ಪಡುವ ಲೀಗ್ ಇದಾಗಿದೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್(Mumbai Indians) ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಮುಂಬೈ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಮುಂಬೈನ ಉಳಿಸಿಕೊಂಡಿರುವ ಆಟಗಾರರಲ್ಲಿ ಬಲಿಷ್ಠ ಬ್ಯಾಟ್ಸ್‌ ಮನ್‌ ಸೇರಿ ಮೂವರು ಹೆಸರಿಲ್ಲ. ಈ ಮೂವರು ಆಟಗಾರರು ಅನೇಕ ಪಂದ್ಯಗಳಲ್ಲಿ ಮುಂಬೈಗೆ ಗೆಲುವು ತಂದುಕೊಟ್ಟಿದ್ದಾರೆ. ಇವರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.   


COMMERCIAL BREAK
SCROLL TO CONTINUE READING

ಈ ಆಟಗಾರರನ್ನು ಉಳಿಸಿಕೊಂಡಿರುವ ಮುಬೈ


ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ ಮನ್ ಮತ್ತು ನಾಯಕ ರೋಹಿತ್ ಶರ್ಮಾ(Rohit Sharma), ಸ್ಫೋಟಕ ಬ್ಯಾಟ್ಸ್‌ ಮನ್ ಸೂರ್ಯಕುಮಾರ್ ಯಾದವ್, ಅತ್ಯುತ್ತಮ ಆಲ್‌ರೌಂಡರ್ ಕೀರಾನ್ ಪೊಲಾರ್ಡ್ ಮತ್ತು ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಅವರನ್ನು ಉಳಿಸಿಕೊಂಡಿದೆ. ರೋಹಿತ್ ನಾಯಕತ್ವದಲ್ಲಿ ಮುಂಬೈ 5 ಬಾರಿ ಐಪಿಎಲ್ ಟ್ರೋಫಿ ಜಯಿಸಿತ್ತು. ಮತ್ತೊಂದೆಡೆ ಬುಮ್ರಾ ತಮ್ಮ ಬೌಲಿಂಗ್‌ನಿಂದ ಮುಂಬೈಗೆ ತುಂಬಾ ಉಪಯುಕ್ತ ಎಂದು ಸಾಬೀತುಪಡಿಸಿದ್ದಾರೆ. ಕೀರಾನ್ ಪೊಲಾರ್ಡ್ ಯಾವಾಗಲೂ ತಂಡದ ಟ್ರಬಲ್‌ಶೂಟರ್ ಆಗಿ ಹೊರಹೊಮ್ಮಿದ್ದರು. ಸೂರ್ಯಕುಮಾರ್ ಯಾದವ್ ಕಾರಣ ಮುಂಬೈ ತಂಡದ ಬ್ಯಾಟಿಂಗ್ ಕ್ರಮಾಂಕವು ಚೆನ್ನಾಗಿತ್ತು. ಈ ನಾಲ್ವರು ಆಟಗಾರರನ್ನು ಹೊರತುಪಡಿಸಿ ತಂಡಕ್ಕಾಗಿ ಹಲವು ಪಂದ್ಯಶ್ರೇಷ್ಠ ಇನ್ನಿಂಗ್ಸ್‌ ಗಳನ್ನು ಆಡಿದ ಒಬ್ಬ ಆಟಗಾರನಿದ್ದರೂ ಅವರನ್ನು ಉಳಿಸಿಕೊಳ್ಳಲಾಗಿಲ್ಲ.


ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ, ಕೇವಲ ಈ ಆಟಗಾರನನ್ನು ಮಾತ್ರ ಉಳಿಸಿಕೊಳ್ಳಲು ಆರ್‌ಸಿಬಿ ನಿರ್ಧಾರ


ಈ ಆಟಗಾರನನ್ನು ಉಳಿಸಿಕೊಳ್ಳಲಾಗಿಲ್ಲ


ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಜೊತೆಗೆ ಸೂರ್ಯಕುಮಾರ್ ಯಾದವ್ ಮತ್ತು ಕೀರಾನ್ ಪೊಲಾರ್ಡ್ ಅವರನ್ನು ಉಳಿಸಿಕೊಂಡಿದೆ. ಆದರೆ ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ ಮನ್ ಇಶಾನ್ ಕಿಶನ್ 2018ರಿಂದ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ತಮ್ಮ ಬಲಿಷ್ಠ ಬ್ಯಾಟಿಂಗ್‌ನಿಂದ ಮುಂಬೈಗೆ ಹಲವು ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಐಪಿಎಲ್‌ನಲ್ಲಿ ಇಶಾನ್ ಕಿಶನ್(Ishan Kishan) 61 ಪಂದ್ಯಗಳಲ್ಲಿ 1452 ರನ್ ಗಳಿಸಿದ್ದಾರೆ. ಅವರ ಬಿರುಸಿನ ಬ್ಯಾಟಿಂಗ್‌ಗೆ ಎಲ್ಲ ಬೌಲರ್‌ಗಳು ಬೆಚ್ಚಿ ಬಿದ್ದಿದ್ದಾರೆ. ಇವರು ಪ್ರಮುಖ ಮ್ಯಾಚ್ ವಿನ್ನರ್ ಎಂದು ಹೆಸರಾಗಿದ್ದಾರೆ. ಆದರೆ ಮುಂಬೈ ತಂಡ ಇವರನ್ನು ಕೈಬಿಟ್ಟಿದ್ದು ಅಚ್ಚರಿ ಮೂಡಿಸಿದೆ. ಈ ಮೊದಲು ಇಶಾನ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ವರದಿಯಾಗಿತ್ತು.


 ಮ್ಯಾಚ್ ವಿನ್ನರ್ ಗಳನ್ನು ಕೈಬಿಟ್ಟ ಮುಂಬೈ!


ಮುಂಬೈ ತನ್ನ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya)ರನ್ನು ಈ ಋತುವಿನಲ್ಲಿ ಉಳಿಸಿಕೊಳ್ಳುವುದಿಲ್ಲವೆಂದ ಸುದ್ದಿ ಬಹಳ ಸಮಯದಿಂದ ಕೇಳಿಬರುತ್ತಿದೆ. ಕಳೆದ ಋತುವಿನಲ್ಲಿ ಹಾರ್ದಿಕ್ ಅವರ ಪ್ರದರ್ಶನ ತೀರಾ ಕಳಪೆಯಾಗಿತ್ತು. ಬಹಳ ಸಮಯದ ನಂತರ ಈ ಆಲ್‌ರೌಂಡರ್ ಹರಾಜಿನಲ್ಲಿಕಾಣಿಸಿಕೊಳ್ಳಲಿದ್ದಾರೆ. ಇದೇ ವೇಳೆ ಮುಂಬೈ ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಅವರನ್ನು ಕೈಬಿಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಹೀಗಾಗಿ ಎಲ್ಲಾ ತಂಡಗಳು ಈ ಇಬ್ಬರು ಮ್ಯಾಚ್ ವಿನ್ನರ್‌ಗಳ ಮೇಲೆ ಕಣ್ಣಿಟ್ಟಿವೆ.


ಇದನ್ನೂ ಓದಿ: IPL : ಬೆಸ್ಟ್ ಆಟಗಾರರನ್ನು ಕೈಬಿಟ್ಟ ಧೋನಿ ನೇತೃತ್ವದ CSK ಟೀಂ!


ಐಪಿಎಲ್ 2022ರ ಮೆಗಾ ಹರಾಜು


IPL 2022ರ ಮೆಗಾ ಹರಾಜಿನ(IPL Mega Auction) ದೃಷ್ಟಿಯಿಂದ ಹಳೆಯ IPL ಫ್ರಾಂಚೈಸಿಗಳು ನವೆಂಬರ್ 30ರೊಳಗೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗಿತ್ತು. ಈ ಬಾರಿ 2 ಹೊಸ ತಂಡಗಳು ಸೇರ್ಪಡೆಯಾಗುತ್ತಿರುವುದರಿಂದ ಈಗಾಗಲೇ ಇರುವ ತಂಡಗಳು ಕೈಬಿಟ್ಟಿರುವ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಕೆಲ ಸ್ಟಾರ್ ಆಟಗಾರರು ಕೂಡ ಹೊಸ ತಂಡಗಳನ್ನು ಸೇರುವ ಉತ್ಸಾಹ ಹೊಂದಿದ್ದಾರೆ. ಹೀಗಾಗಿ ಇತರ ತಂಡಗಳು ಕೈಬಿಟ್ಟಿರುವ ಆಟಗಾರರು ಹೊಸ ತಂಡಗಳನ್ನು ಸೇರ ಐಪಿಎಲ್ ಟೂರ್ನಿಗೆ ಮತ್ತಷ್ಟು ರಂಗು ನೀಡಲಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.