ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ, ಕೇವಲ ಈ ಆಟಗಾರನನ್ನು ಮಾತ್ರ ಉಳಿಸಿಕೊಳ್ಳಲು ಆರ್‌ಸಿಬಿ ನಿರ್ಧಾರ

ಐಪಿಎಲ್ 2022 ಪ್ರಾರಂಭವಾಗುವ ಮೊದಲು ಮೆಗಾ ಹರಾಜು ನಡೆಯಲಿದೆ. ಇಂದು ಅಂದರೆ ನವೆಂಬರ್ 30 ಎಲ್ಲಾ ತಂಡಗಳು ತಮ್ಮ ಆಟಗಾರರನ್ನು ಉಳಿಸಿಕೊಳ್ಳಲು ಕೊನೆಯ ದಿನವಾಗಿದೆ. ಏತನ್ಮಧ್ಯೆ, ಆ ಮೂವರು ಆಟಗಾರರ ಹೆಸರುಗಳು ಮುನ್ನೆಲೆಗೆ ಬಂದಿದ್ದು, ಅವರನ್ನು ಆರ್‌ಸಿಬಿ ತಂಡ ಉಳಿಸಿಕೊಳ್ಳಲಿದೆ ಎನ್ನಲಾಗಿದೆ.    

Written by - Ranjitha R K | Last Updated : Nov 30, 2021, 11:25 AM IST
  • ಆಟಗಾರರನ್ನು ರಿಟೈನ್ ಮಾಡಲು ಇಂದೇ ಕೊನೆಯ ದಿನ
  • ಎಲ್ಲಾ ತಂಡಗಳು ಇಂದು ತಮ್ಮ ಪಟ್ಟಿಯನ್ನು ಅಂತಿಮಗೊಳಿಸುತ್ತವೆ
  • ಈ ಇಬ್ಬರು ಆಟಗಾರರನ್ನು ಉಳಿಸಿಕೊಳ್ಳಲು ಆರ್‌ಸಿಬಿ ನಿರ್ಧಾರ
ವಿರಾಟ್ ಕೊಹ್ಲಿಯನ್ನು  ಹೊರತುಪಡಿಸಿ, ಕೇವಲ ಈ ಆಟಗಾರನನ್ನು ಮಾತ್ರ ಉಳಿಸಿಕೊಳ್ಳಲು ಆರ್‌ಸಿಬಿ  ನಿರ್ಧಾರ  title=
ಆಟಗಾರರನ್ನು ರಿಟೈನ್ ಮಾಡಲು ಇಂದೇ ಕೊನೆಯ ದಿನ (file photo)

ನವದೆಹಲಿ : ಐಪಿಎಲ್ ಮೆಗಾ ಹರಾಜು (IPL Auction) ಪ್ರಾರಂಭವಾಗುವ ಮೊದಲು, ಎಲ್ಲಾ ತಂಡಗಳು ತಮ್ಮ ಆಟಗಾರರನ್ನು ಉಳಿಸಿಕೊಳ್ಳಬೇಕಾಗಿದೆ. ಅಂದರೆ ತಮ್ಮ ಆಟಗಾರರನ್ನು ಉಳಿಸಿಕೊಳ್ಳಲು ನವೆಂಬರ್ 30 ಕೊನೆಯ ದಿನವಾಗಿದೆ.  ತಂಡಗಳು ಉಳಿಸಿಕೊಳ್ಳಲು ಹೊರಟಿರುವ ಬಹುತೇಕ ಎಲ್ಲಾ ತಂಡಗಳ ಆಟಗಾರರ ಹೆಸರನ್ನು ಬಹಿರಂಗಪಡಿಸಿವೆ. ಈ ಮಧ್ಯೆ,  RCB ತಂಡವು ಉಳಿಸಿಕೊಳ್ಳಲಿರುವ ಇಬ್ಬರು ಆಟಗಾರರ ಹೆಸರು ಕೂಡಾ ಕೇಳಿ ಬಂದಿದೆ.  

ವಿರಾಟ್ ಮತ್ತು ಈ ಆಟಗಾರನನ್ನು ಉಳಿಸಿಕೊಳ್ಳಲಿದೆ ತಂಡ : 
ಮೂಲಗಳ ಪ್ರಕಾರ RCB IPL 2022 Mega Auction ಮೊದಲು ಉಳಿಸಿಕೊಳ್ಳಲಿರುವ ಇಬ್ಬರು ಆಟಗಾರರ ಹೆಸರನ್ನು ಹೇಳಿಕೊಂಡಿದೆ. ಇದರಲ್ಲಿ ಮೊದಲ ಹೆಸರು ವಿರಾಟ್ ಕೊಹ್ಲಿ (Virat Kohli). ಎರಡನೇ ಹೆಸರು ಆಸ್ಟ್ರೇಲಿಯಾದ ಮಾರಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಅವರದ್ದು. ಮ್ಯಾಕ್ಸ್‌ವೆಲ್ ಅವರನ್ನು RCB ಕಳೆದ ಸೀಸನ್ ನಲ್ಲಿ 14.25 ಕೋಟಿಗಳ ಬೃಹತ್ ಮೊತ್ತದೊಂದಿಗೆ ತನ್ನ ತಂಡಕ್ಕೆ ಸೇರಿಸಿಕೊಂಡಿಟ್ಟು. ತಂಡ ದ ನಿರೀಕ್ಷೆಯಂತೆ ಮ್ಯಾಕ್ಸ್‌ವೆಲ್ ಪ್ರದರ್ಶನ ಕೂಡಾ ಅದ್ಬುತವಾಗಿತ್ತು. 

ಇದನ್ನೂ ಓದಿ : IND vs NZ: ಕಾನ್ಪುರ ಟೆಸ್ಟ್ ಮ್ಯಾಚ್ ಡ್ರಾ, ಗೆಲುವಿನ ನಿರಾಸೆಯಲ್ಲಿ ಟೀಂ ಇಂಡಿಯಾ! 

ಹರ್ಷಲ್ ಮತ್ತು ಚಹಾಲ್ ಬಗ್ಗೆಯೂ ಚರ್ಚೆ :
ಈ ಮಧ್ಯೆ, ಇನ್ನಿಬ್ಬರು ಆಟಗಾರರ ಹೆಸರಿನ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಅವರೆಂದರೆ ಫಾಸ್ಟ್ ಬೌಲರ್ ಹರ್ಷಲ್ ಪಟೇಲ್ (Harshal Patel) ಮತ್ತು ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (Yuzvendra Chahal). ಹರ್ಷಲ್ ಐಪಿಎಲ್ 2021 ರಲ್ಲಿ 32 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ಗೆದ್ದಿದ್ದಾರೆ.  ಚಹಾಲ್ ಕೂಡಾ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಹೊರಹೊಮ್ಮಿದ್ದಾರೆ. RCB 4 ಆಟಗಾರರನ್ನು ಉಳಿಸಿಕೊಳ್ಳುವುದಾದರೆ  ಆ ನಾಲ್ಕು ಆಟಗಾರರು ಇವರೇ ಆಗಲಿದ್ದಾರೆ. 

ಆರ್‌ಸಿಬಿ ನಾಯಕ ಯಾರು ? 
ದೀರ್ಘಕಾಲದವರೆಗೆ ಆರ್‌ಸಿಬಿ ನಾಯಕರಾಗಿದ್ದ ವಿರಾಟ್ ಕೊಹ್ಲಿ IPL 2021 ರಲ್ಲಿಯೇ ಆರ್‌ಸಿಬಿ ನಾಯಕತ್ವವನ್ನು (RCB Captain) ತೊರೆಯುವುದಾಗಿ ಘೋಷಿಸಿದ್ದರು. ಕೊಹ್ಲಿ ನಾಯಕತ್ವದಲ್ಲಿ ತಂಡ  ಕಪ್ ಗೆಲ್ಲುವುದು ಸಾಧ್ಯವಾಗಿಲ್ಲ. ಇದೀಗ ಆರ್‌ಸಿಬಿ ಹರಾಜಿನಲ್ಲಿ ಹೊಸ ನಾಯಕನ ಹುಡುಕಾಟ ನಡೆಸಲಿದೆ. ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ (KL Rahul)  ಈ ಪಟ್ಟಿಯಲ್ಲಿದ್ದಾರೆ.   ಮತ್ತೊಂದೆಡೆ, ವಿದೇಶಿ ಬ್ಯಾಟ್ಸ್‌ಮನ್‌ಗಳಾದ ಆರೋನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಹೆಸರುಗಳು ಕೂಡಾ ಕೇಳಿ ಬರುತ್ತಿದೆ. 

ಇದನ್ನೂ ಓದಿ : Kanpur Test: ಟೆಸ್ಟ್ ಕ್ರಿಕೆಟ್ ನಲ್ಲಿ Harbhajan Singh ದಾಖಲೆ ಹಿಂದಿಕ್ಕಿದ Ravichandran Ashwin

ಆಟಗಾರರನ್ನು ಉಳಿಸಿಕೊಳ್ಳಲು ಇಂದೇ ಕೊನೆಯ ದಿನ :
ಐಪಿಎಲ್ 2022 ರ ಮೆಗಾ ಹರಾಜಿನ ದೃಷ್ಟಿಯಿಂದ, ಹಳೆಯ ಐಪಿಎಲ್ ಫ್ರಾಂಚೈಸಿಗಳು ಇಂದು ಅಂದರೆ ನವೆಂಬರ್ 30 ರೊಳಗೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು. 2 ಹೊಸ ತಂಡಗಳು ಹರಾಜಿನ ಮೊದಲು ಕೆಲವು ಆಟಗಾರರನ್ನು ಖರೀದಿಸುವ ವಿನಾಯಿತಿ ಪಡೆಯುವ ನಿರೀಕ್ಷೆ ಇದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News