ನವದೆಹಲಿ: ಮುಂಬೈನ ಬ್ರಾಬೊರ್ನ್‌ ಕ್ರೀಡಾಂಗಣದಲ್ಲಿ ಇಂದು ಮಧ್ಯಾಹ್ನ 3.30ಕ್ಕೆ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್(Mumbai Indians)ಗೆ ಬಲಿಷ್ಠ ದೆಹಲಿ ಕ್ಯಾಪಿಟಲ್ಸ್(Delhi Capitals)  ಸವಾಲು ಹಾಕಲಿದೆ. ಉಭಯ ತಂಡಗಳು ಬಲಿಷ್ಠವಾಗಿದ್ದು, 15ನೇ ಆವೃತ್ತಿಯ ಐಪಿಎಲ್ ಟೂರ್ನಿ(IPL 2022)ಯ 2ನೇ ಪಂದ್ಯದಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿವೆ.


COMMERCIAL BREAK
SCROLL TO CONTINUE READING

ಟೀಂ ಇಂಡಿಯಾ(Team India) ದ ಎಲ್ಲಾ ಮಾದರಿಯ ನಾಯಕತ್ವವನ್ನು ವಹಿಸಿಕೊಂಡಿರುವ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ (Rohit Sharma)ಗೆ ಭವಿಷ್ಯದ ನಾಯಕನೆಂದೇ ಕರೆಸಿಕೊಳ್ಳುವ ರಿಷಭ್ ಪಂತ್(Rishabh Pant)  ಪಡೆ ಹೇಗೆ ಸವಾಲು ಒಡ್ಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಬಲಿಷ್ಠವಾಗಿರುವ ಉಭಯ ತಂಡಗಳ ನಡುವೆ ರೋಚಕ ಕದನ ನಡೆಯುವ ನಿರೀಕ್ಷೆ ಇದೆ. ರೋಹಿತ್ ನಾಯಕತ್ವದಲ್ಲಿ ಮುಂಬೈ 5 ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ಫೈನಲ್ ಪ್ರವೇಶಿಸಿತ್ತು.


ಇದನ್ನೂ ಓದಿ: IPL 2022: ಮೊದಲ ಬಾರಿಗೆ ಐಪಿಎಲ್ ಪ್ರವೇಶಿಸಲಿದೆ ಲಕ್ನೋ ಸೂಪರ್ ಜೈಂಟ್ಸ್


IPL History)ದಲ್ಲಿ ಉಭಯ ತಂಡಗಳು ಒಟ್ಟು 30 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಎರಡೂ ತಂಡಗಳು ಬಹುತೇಕ ಸಮಬಲದ ಪ್ರದರ್ಶನ ತೋರಿವೆ. 30 ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್ ತಂಡವು 16 ಬಾರಿ ಗೆಲುವು ದಾಖಲಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 14 ಬಾರಿ ಗೆಲುವು ಸಾಧಿಸಿದೆ. ಎರಡೂ ತಂಡಗಳಲ್ಲಿ ಸ್ಪೋಟಕ ಬ್ಯಾಟರ್‌ಗಳಿದ್ದು, ರನ್‌ ಮಳೆ ಹರಿಯುವ ಸಾಧ್ಯತೆಯಿದೆ. ಬಲಿಷ್ಠ ತಂಡಗಳ ನಡುವಿನ ಕಾಳಗದಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆಂಬುದನ್ನು ಕಾದು ನೋಡಬೇಕಿದೆ.


ಎರಡೂ ತಂಡಗಳ ಸ್ಕ್ವಾಡ್ ಈ ರೀತಿ ಇದೆ….


ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಪೃಥ್ವಿ ಶಾ, ಟಿಮ್ ಸೀಫರ್ಟ್, ಶ್ರೀಕರ್ ಭರತ್, ರೋವ್ಮನ್ ಪೊವೆಲ್, ಸರ್ಫರಾಜ್ ಖಾನ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಚೇತನ್ ಸಕರಿಯಾ, ಮನ್ದೀಪ್ ಸಿಂಗ್, ಕಮಲೇಶ್ ನಾಗರಕೋಟಿ, ಅಶ್ವಿನ್ ಯಾದವ್, ಲಲಿತ್ ಯಾದವ್ ಹೆಬ್ಬಾರ್, ಪ್ರವೀಣ್ ದುಬೆ, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಓಸ್ಟ್ವಾಲ್


ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಡೆವಾಲ್ಡ್ ಬ್ರೆವಿಸ್, ಕೀರಾನ್ ಪೊಲಾರ್ಡ್, ಟಿಮ್ ಡೇವಿಡ್, ಸಂಜಯ್ ಯಾದವ್, ಟೈಮಲ್ ಮಿಲ್ಸ್, ಮಯಾಂಕ್ ಉನದ್ಕಟ್, ಮಯಾಂಕ್ ಮರ್ಕಂಡೆ, ಜಸ್ಪ್ರೀತ್ ಬುಮ್ರಾ, ಅನ್ಮೋಲ್ಪ್ರೀತ್ ಸಿಂಗ್, ಮುರುಗನ್ ಅಶ್ವಿನ್, ರಿಲೆ ಮೆರೆಡಿತ್, ಫ್ಯಾಬಿಯನ್ ಅಲೆನ್, ಬೇಸಿಲ್ ಥಂಪಿ, ರಮಣದೀಪ್ ಸಿಂಗ್, ಡೇನಿಯಲ್ ಸಾಮ್ಸ್, ಆರ್ಯನ್ ಜುಯಲ್, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ರಾಹುಲ್ ಬುದ್ಧಿ, ಅರ್ಷದ್ ಖಾನ್


ಇದನ್ನೂ ಓದಿ: ಧೋನಿ ಕನಸು ನನಸಾಗಿಸಲಿದ್ದಾರೆ ಈ 3 ಆಟಗಾರರು : 5ನೇ ಭಾರಿಗೆ IPL ಪ್ರಶಸ್ತಿಗೆ ಮುತ್ತಿಕ್ಕಲಿದೆ CSK


ಐಪಿಎಲ್‌ ಪಂದ್ಯ: 02


ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್  


ದಿನಾಂಕ: ಮಾರ್ಚ್ 27, ಭಾನುವಾರ


ಸ್ಥಳ: ಮುಂಬೈನ ಬ್ರಾಬೊರ್ನ್‌ ಕ್ರೀಡಾಂಗಣ


ಸಮಯ: ಮಧ್ಯಾಹ್ನ 3.30ಕ್ಕೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.