ನವದೆಹಲಿ: 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಪ್ಲೇ ಆಫ್ ಹಂತಗಳ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗುತ್ತಿವೆ. ಕೋಲ್ಕತ್ತಾದ ಈಡನ್ ಗಾರ್ಡರ್ನ್ಸ್ ನಲ್ಲಿ ನಡೆಯಬೇಕಿರುವ ಈ ಮಹತ್ವದ ಪಂದ್ಯಕ್ಕೆ ಭಾರೀ ಗಾಳಿ ಮತ್ತು ಮಳೆಯ ಕಾರಣ ಟಾಸ್ ವಿಳಂಬವಾಗಿದೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಸರಿಯಾಗಿ 7.30ಕ್ಕೆ ಪ್ರಾರಂಭವಾಗಬೇಕಿದ್ದ ಪಂದ್ಯಕ್ಕೆ ಭಾರೀ ಗಾಳಿ ಸಹಿತ ಮಳೆ ಅಡ್ಡಿಯಾಯಿತು. ಪರಿಣಾಮ ಟಾಸ್ ನಡೆಸಲು ಕೊಂಚ ವಿಳಂಬವಾಯಿತು. ಮಳೆನೀರು ನಿಲ್ಲದಂತೆ ಮೈದಾನದ ಸಿಬ್ಬಂದಿಗಳು ಕೂಡಲೇ ಪಿಚ್ ಮೇಲೆ ಕವರ್ ಹಾಕಿದರು.


ಇದನ್ನೂ ಓದಿ: IPL 2022: ಇಂದು ಆರ್‌ಸಿಬಿ-ಲಕ್ನೋ ಪ್ಲೇ ಆಫ್‌ ಜಿದ್ದಾಜಿದ್ದಿ: ಮಳೆ ಅಡ್ಡಿಯಾದರೆ ಮುಂದೇನು ಗತಿ!


ಎಲಿಮಿನೇಟರ್ ಪಂದ್ಯದ ವಿಜೇತರು ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದ್ದಾರೆ. ಸೋತವರು ಟೂರ್ನಿಯಿಂದಲೇ ನಿರ್ಗಮಿಸಲಿದ್ದಾರೆ. ಹೀಗಾಗಿ ಉಭಯ ತಂಡಗಳು ಗೆಲುವಿಗಾಗಿ ಭರ್ಜರಿ ಪೈಪೋಟಿ ನಡೆಸಲಿವೆ. ಈಗಾಗಲೇ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಐಪಿಎಲ್ 2022ರ ಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿದೆ.


ಇದನ್ನೂ ಓದಿ: live ಪಂದ್ಯದ ನಡುವೆಯೇ ಅಶ್ವಿನ್ ಮೇಲೆ ಕೆಂಡ ಕಾರಿದ 20 ರ ಹರೆಯದ ಈ ಆಟಗಾರ..!


ಆರ್‌ಸಿಬಿಗೆ ಆರಂಭಿಕ ಆಘಾತ!


ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿರುವ ಆರ್‌ಸಿಬಿಗೆ ಆರಂಭಿಕ ಆಘಾತವಾಗಿದೆ. ನಾಯಕ ಫಾಫ್ ಡುಪ್ಲೇಸಿಸ್(0) ಮೋಹ್ಸಿನ್ ಖಾನ್ ಬೌಲಿಂಗ್‍ನಲ್ಲಿ ಕ್ವಿಂಟನ್ ಡಿಕಾಕ್‍ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದ್ದಾರೆ. ಸದ್ಯ ಆರ್‌ಸಿಬಿ 3 ಓವರ್ ಗೆ 1 ವಿಕೆಟ್ ಕಳೆದುಕೊಂಡು 20 ರನ್ ಗಳಿಸಿದೆ. ವಿರಾಟ್ ಕೊಹ್ಲಿ(ಅಜೇಯ 15) ಮತ್ತು ರಜತ್ ಪಾಟೀದಾರ್(ಅಜೇಯ 4) ಆಡುತ್ತಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.