IPL 2022ರಲ್ಲಿಆರ್‌ಸಿಬಿ-ಲಕ್ನೋ ಪ್ರಶಸ್ತಿ ಗೆಲ್ಲುವುದು ಕಷ್ಟ! ಇದಕ್ಕೆ ದೊಡ್ಡ ಕಾರಣ ಏನು ಗೊತ್ತಾ?

15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯವು ಲಕ್ನೋ ಮತ್ತು ಆರ್‌ಸಿಬಿ ನಡುವೆ ಬುಧವಾರ ನಡೆಯಲಿದೆ. ಪ್ರಶಸ್ತಿ ಗೆಲ್ಲುವುದು ಉಭಯ ತಂಡಗಳಿಗೆ ಅತ್ಯಂತ ಕಷ್ಟಕರವಾಗಿದೆ.

Written by - Puttaraj K Alur | Last Updated : May 24, 2022, 07:46 PM IST
  • ನಾಳೆ ಲಕ್ನೋ ಸೂಪರ್ ಜೈಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ
  • ಲಕ್ನೋ ಮತ್ತು ಆರ್‌ಸಿಬಿ ಐಪಿಎಲ್ ಪ್ರಶಸ್ತಿ ಗೆಲ್ಲುವುದು ಕಷ್ಟ ಕಷ್ಟ..!
  • ಇದುವರೆಗೂ ಕೇವಲ 1 ತಂಡ ಮಾತ್ರ ಎಲಿಮಿನೇಟರ್ ಪಂದ್ಯವನ್ನಾಡಿ ಪ್ರಶಸ್ತಿ ಗೆದ್ದಿದೆ
IPL 2022ರಲ್ಲಿಆರ್‌ಸಿಬಿ-ಲಕ್ನೋ ಪ್ರಶಸ್ತಿ ಗೆಲ್ಲುವುದು ಕಷ್ಟ! ಇದಕ್ಕೆ ದೊಡ್ಡ ಕಾರಣ ಏನು ಗೊತ್ತಾ? title=
ನಾಳೆ ಲಕ್ನೋ & ಆರ್ಸಿಬಿ ಸೆಣಸಾಟ!

ನವದೆಹಲಿ: 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಪ್ಲೇಆಫ್ ಪಂದ್ಯಗಳು ಇಂದಿನಿಂದ(ಮೇ 24) ಪ್ರಾರಂಭವಾಗುತ್ತಿವೆ. ಪ್ಲೇಆಫ್‌ನ ಮೊದಲ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯುತ್ತಿದೆ. ಈ ಪಂದ್ಯ ಉಭಯ ತಂಡಗಳ ನಡುವಿನ ಮೊದಲ ಕ್ವಾಲಿಫೈಯರ್ ಆಗಿದೆ. ಅದೇ ರೀತಿ ಎಲಿಮಿನೇಟರ್ ಪಂದ್ಯವು ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮೇ 25 ಅಂದರೆ ನಾಳೆ ನಡೆಯಲಿದೆ.

ಆರ್‌ಸಿಬಿ ಮತ್ತು ಲಕ್ನೋ ಪ್ರಶಸ್ತಿ ಗೆಲ್ಲುವುದು ಕಷ್ಟ?.

ಲೀಗ್ ಹಂತದ ಅಂಕಪಟ್ಟಿಯಲ್ಲಿ 3 ಮತ್ತು 4ನೇ ಸ್ಥಾನದಲ್ಲಿರುವ ತಂಡಗಳ ನಡುವೆ ಎಲಿಮಿನೇಟರ್ ಪಂದ್ಯವು ಬುಧವಾರ ನಡೆಯಲಿದೆ. ಕನ್ನಡಿಗ ಕೆ.ಎಲ್.ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಫಾಫ್ ಡು ಪ್ಲೇಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಗೆಲುವು ನಿರ್ಣಾಯಕವಾಗಿರುತ್ತದೆ. ಈ 2 ತಂಡಗಳಿಗೆ ಐಪಿಎಲ್ ಪ್ರಶಸ್ತಿ ಗೆಲ್ಲುವುದು ಅತ್ಯಂತ ಕಷ್ಟಕರವಾಗಿರುತ್ತದೆ. ಏಕೆಂದರೆ ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಎಲಿಮಿನೇಟರ್ ಪಂದ್ಯವನ್ನಾಡಿದ ಕೇವಲ 1 ತಂಡ ಮಾತ್ರ ಐಪಿಎಲ್ ಪ್ರಶಸ್ತಿ ಜಯಿಸಿದೆ. ಹೀಗಾಗಿ ಈ ಎರಡು ತಂಡಗಳಿಗೆ ಪ್ರಶಸ್ತಿ ಗೆಲ್ಲುವ ಪಯಣ ತುಂಬಾ ಕಷ್ಟಕರವಾಗಲಿದೆ.

ಇದನ್ನೂ ಓದಿ: IPL 2022: ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ ಹೇಗಿರುತ್ತದೆ..?

ಈ ತಂಡ ಮಾತ್ರ ಸಾಧನೆ ಮಾಡಿದೆ

ಎಲಿಮಿನೇಟರ್ ಪಂದ್ಯವನ್ನು ಆಡುವ ತಂಡವು ಪ್ರಶಸ್ತಿ ಗೆಲ್ಲಲು ಸತತ 3 ಪಂದ್ಯಗಳನ್ನು ಗೆಲ್ಲಬೇಕು. ಹೀಗಾಗಿ ಇದು ಎಲ್ಲಾ ತಂಡಗಳಿಗೂ ತುಂಬಾ ಕಷ್ಟದಾಯಕ ಪರಿಸ್ಥಿತಿ. ಸನ್‌ರೈಸರ್ಸ್ ಹೈದರಾಬಾದ್ (SRH) ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಏಕೈಕ ತಂಡವಾಗಿದೆ. ಹೈದರಾಬಾದ್ ತಂಡವು 2016ರಲ್ಲಿ ಎಲಿಮಿನೇಟರ್ ಪಂದ್ಯವನ್ನು ಆಡಿದ ನಂತರ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆ ಸಮಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಈ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿತ್ತು.

ಅಹಮದಾಬಾದ್‌ನಲ್ಲಿ ಫೈನಲ್ ಫೈಟ್!

ಐಪಿಎಲ್ 2022ರ ಫೈನಲ್ ಪಂದ್ಯವು ಮೇ 29ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಕ್ವಾಲಿಫೈಯರ್ 1 ಮತ್ತು ಕ್ವಾಲಿಫೈಯರ್ 2ರ ವಿಜೇತ ತಂಡಗಳ ನಡುವೆ ಈ ಫೈನಲ್ ಪಂದ್ಯ ನಡೆಯಲಿದೆ. IPL 2022ರಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆದ 4 ತಂಡಗಳೆಂದರೆ ಗುಜರಾತ್ ಟೈಟಾನ್ಸ್ (GT), ರಾಜಸ್ಥಾನ ರಾಯಲ್ಸ್ (RR), ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB). ಈ 4 ತಂಡಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮಾತ್ರ ಇದುವರೆಗೆ ಐಪಿಎಲ್ ಪ್ರಶಸ್ತಿ ಗೆದ್ದಿದ್ದು, ಹೊಸ ತಂಡಗಳಾಗಿರುವ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮೊದಲ ಬಾರಿಗೆ ಪ್ಲೇಆಫ್ ಪಂದ್ಯದಲ್ಲಿ ಆಡುತ್ತಿವೆ.

ಇದನ್ನೂ ಓದಿ: IPL 2022: ಇಲ್ಲಿದೆ ಐಪಿಎಲ್‌ನ Orange Cap-Purple Cap ಬಗ್ಗೆ ನಿಮಗರಿದ ಸತ್ಯಾಂಶ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News