ಬೆಂಗಳೂರು: ವಿಶ್ವ ಕ್ರಿಕೆಟ್ ನಲ್ಲಿ ದಿಗ್ಗಜ ಕ್ರಿಕೆಟಿಗ ಎನಿಸಿಕೊಂಡವರೂ ಐಪಿಎಲ್ (IPL 2022 Mega Auction) ಹರಾಜಿನಲ್ಲಿ ಕನಿಷ್ಠ ಬಿಡ್ ಪಡೆಯಲು ಸಾಧ್ಯವಾಗದೆ ಹೋಗಿದ್ದಾರೆ. 2019ರ ಏಕದಿನ ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ (Eoin Morgan) ಹಾಗೂ 2021ರಲ್ಲಿ ಆಸ್ಟ್ರೇಲಿಯಾ ತಂಡವನ್ನು ವಿಶ್ವ ಚಾಂಪಿಯನ್ ಮಾಡಿದ್ದ ಆರನ್ ಫಿಂಚ್ (Aaron Finch) ಐಪಿಎಲ್ ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯಗಳಿಂದ ಕೆ.ಎಲ್.ರಾಹುಲ್, ಅಕ್ಷರ್ ಪಟೇಲ್ ಹೊರಕ್ಕೆ


2020 ರಲ್ಲಿ ದಿನೇಶ್ ಕಾರ್ತಿಕ್‌ ಬಳಿಕ ಕೆಕೆಆರ್ (KKR) ನಾಯಕರಾಗಿ ಅಧಿಕಾರ ವಹಿಸಿಕೊಂಡ  ಇಯಾನ್ ಮಾರ್ಗನ್, 24 ಪಂದ್ಯಗಳಲ್ಲಿ 11 ವಿಜಯಗಳೊಂದಿಗೆ 47.91 ರ ಗೆಲುವಿನ ಶೇಕಡಾವಾರು ಪ್ರಮಾಣವನ್ನು ಹೊಂದಿದ್ದರು.


ಇಂಗ್ಲೆಂಡ್ ಬ್ಯಾಟರ್ ಮಾರ್ಗನ್ ಫಾರ್ಮ್‌ನಲ್ಲಿರುವಾಗ ಸಾಕಷ್ಟು ಅಪಾಯಕಾರಿ ಆಟಗಾರನಾಗಿದ್ದರು. ಕಳೆದ ವರ್ಷ ಮಾರ್ಗನ್‌ಗೆ ಸಮಸ್ಯೆಯಾಗಿದ್ದು ಐಪಿಎಲ್‌ನಲ್ಲಿ (IPL) ಆಡಿದ 17 ಪಂದ್ಯಗಳಿಂದ ಕೇವಲ 11 ರ ಸರಾಸರಿಯಲ್ಲಿ 133 ರನ್ ಗಳನ್ನು ಗಳಿಸಿದ ಅವರ ಕಳಪೆ ಫಾರ್ಮ್. ನಾಯಕನಾಗಿ ಮಾರ್ಗನ್ ಸಫಲರಾಗಿದ್ದರೂ, ಅವರ ವೈಯಕ್ತಿಕ ಫಾರ್ಮ ಕಳಪೆ ಆಗಿದ್ದ ಕಾರಣ ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ದಾರೆ. 


ಈ ಬಾರಿ 1.5 ಕೋಟಿ ರೂಪಾಯಿ ಮೂಲಬೆಲೆ ಹೊಂದಿದ್ದ ಇಯಾನ್ ಮಾರ್ಗನ್ ಹೆಸರು ಘೋಷಣೆ ಆಗುತ್ತಿದ್ದಂತೆ ಫ್ರಾಂಚೈಸಿಗಳ ನಡುವೆ ಮೌನ ಆವರಿಸಿಕೊಂಡಿತು. 


ಇದನ್ನೂ ಓದಿ: IPL Auction 2022: ಹರಾಜಿನಿಂದಾಗಿ ರಾತೋ ರಾತ್ರಿ ಕೋಟ್ಯಾಧಿಪತಿಗಳಾದ ಆಟಗಾರರಿವರು


ಐಪಿಎಲ್ ನಲ್ಲಿ ಬಹುತೇಕ ಎಲ್ಲಾ ಫ್ರಾಂಚೈಸಿಗಳ ಪರವಾಗಿ ಆಡಿರುವ ದಾಖಲೆ ಹೊಂದಿರುವ ಆರನ್ ಫಿಂಚ್ 2ನೇ ಬಾರಿ ಅನ್ ಸೋಲ್ಡ್ ಆಗಿದ್ದಾರೆ. 1.5 ಕೋಟಿ ರೂಪಾಯಿ ಮೂಲಬೆಲೆ ಹೊಂದಿದ್ದ ಇವರನ್ನು ಖರೀದಿಸಲು ಯಾವುದೇ ತಂಡ ಆಸಕ್ತಿ ತೋರಲಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.