IPL Auction 2022: ಹರಾಜಿನಿಂದಾಗಿ ರಾತೋ ರಾತ್ರಿ ಕೋಟ್ಯಾಧಿಪತಿಗಳಾದ ಆಟಗಾರರಿವರು

IPL ಹರಾಜು 2022 ರ ಪ್ರಾರಂಭಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. 


ನವದೆಹಲಿ : IPL ಹರಾಜು 2022 ರ ಪ್ರಾರಂಭಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ.   ಶನಿವಾರ ಮತ್ತು ಭಾನುವಾರ ಎಲ್ಲಾ 10 ಫ್ರಾಂಚೈಸಿಗಳ ನಡುವೆ ಎರಡು ದಿನಗಳ ಕಾಲ ಆಟಗಾರರನ್ನು ಖರೀದಿಸಲು ಪೈಪೋಟಿ ನಡೆಯಲಿದೆ. ಈ ಹರಾಜು ಆಟಗಾರರನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿಸುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಈ ಋತುವಿನಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಆರ್‌ಸಿಬಿ ತಂಡ ಉಳಿಸಿಕೊಂಡಿದೆ. ಸಿರಾಜ್ ಈಗ ಐಪಿಎಲ್ ಜೊತೆಗೆ ಭಾರತ ತಂಡದ ಪ್ರಮುಖ ಬೌಲರ್‌ಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಈ ಆಟಗಾರನನ್ನು ಮೊದಲು 2017 ರಲ್ಲಿ 2.6 ಕೋಟಿಗೆ ಖರೀದಿಸಿತ್ತು. ಇದೀಗ ಸಿರಾಜ್ ಅವರನ್ನು ಆರ್‌ಸಿಬಿ ಏಳು ಕೋಟಿಗೆ ಉಳಿಸಿಕೊಂಡಿದೆ. 

2 /5

ಟಿ.ನಟರಾಜನ್ ಅವರ ಕಥೆಯೂ ಹೋರಾಟಗಳಿಂದ ಕೂಡಿದೆ. ಟಿ.ನಟರಾಜನ್ ಅವರು 2017 ರಲ್ಲಿ ಮೊದಲ ಬಾರಿಗೆ ಬಿಡ್ ಮಾಡಿದರು. ಅವರ ಮೂಲ ಬೆಲೆ ಕೇವಲ 10 ಲಕ್ಷ ರೂಪಾಯಿಗಳು.  ಆದರೆ ಪಂಜಾಬ್ ಈ ಬೌಲರ್ ಅನ್ನು ಮೂರು ಕೋಟಿಗೆ ತನ್ನೊಂದಿಗೆ ಸೇರಿಸಿಕೊಂಡಿತ್ತು. ನಟರಾಜನ್ ಅವರ ತಾಯಿ ರಸ್ತೆಬದಿಯಲ್ಲಿ ಅಂಗಡಿಗಳಲ್ಲಿ ವ್ಯಾಪಾರ ನಡೆಸುತ್ತಿದ್ದರು. ತಂದೆ ರೈಲ್ವೆ ನಿಲ್ದಾಣದಲ್ಲಿ ಹಮಾಲಿಯಾಗಿ ಕೆಲಸ ಮಾಡುತ್ತಿದ್ದರು. 

3 /5

ಯುವ ವೇಗದ ಬೌಲರ್ ಚೇತನ್ ಸಕರಿಯಾಗೆ  ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್‌ ನಲ್ಲಿ ಆಟವಾಡುವ ಅವಕಾಶ ಪಡೆದರು. 23 ವರ್ಷದ ಚೇತನ್ ಸಕಾರಿಯಾ ಐಪಿಎಲ್‌ಗೂ ಮುನ್ನ ತನ್ನ ಸಹೋದರನನ್ನು ಕಳೆದುಕೊಂಡಿದ್ದರು. ಆತನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದರು . ನಂತರ ಇತ್ತೀಚೆಗೆ ಅವರ ತಂದೆ ಕೊರೊನಾ ವೈರಸ್‌ನಿಂದ ನಿಧನರಾದರು. ಇದರ ಹೊರತಾಗಿಯೂ, ಐಪಿಎಲ್‌ನಲ್ಲಿ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ಚೇತನ್ ಸಕರಿಯಾ ಅವರನ್ನು ರಾಜಸ್ಥಾನ ಒಂದು ಕೋಟಿ 20 ಲಕ್ಷಕ್ಕೆ ಖರೀದಿಸಿದೆ.   

4 /5

ಯಶಸ್ವಿ ಜೈಸ್ವಾಲ್ ಅವರನ್ನು ರಾಜಸ್ಥಾನ ತಂಡ 4 ಕೋಟಿಗೆ ಉಳಿಸಿಕೊಂಡಿದೆ. ಕಳೆದ ವರ್ಷ ನಡೆದ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ ತಂಡ ಜೈಸ್ವಾಲ್ ಅವರನ್ನು 2.4 ಕೋಟಿಗೆ ಖರೀದಿಸಿತ್ತು. ಯಶಸ್ವಿ ಜೈಸ್ವಾಲ್ ಉತ್ತಮ ಪ್ರದರ್ಶನದಿಂದಾಗಿ ಅವರನ್ನು ಉಳಿಸಿಕೊಳ್ಳಲಾಗಿದೆ. ತನ್ನ ಖರ್ಚುಗಳನ್ನು ಪೂರೈಸಲು, ಈ ಆಟಗಾರ ತನ್ನ ಪ್ರಾಕ್ಟೀಸ್ ನಂತರ ಪಾನಿಪುರಿ ಮಾರುತ್ತಿದ್ದರು.   

5 /5

ಜಮ್ಮು ಮತ್ತು ಕಾಶ್ಮೀರದ ವೇಗಿ ಉಮ್ರಾನ್ ಮಲಿಕ್ ಐಪಿಎಲ್‌ನ ಮೊದಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿದ್ದರು. ಉಮ್ರಾನ್ ಮಲಿಕ್ ಅವರ ವೇಗದ ಗತಿಯನ್ನು ಗಮನದಲ್ಲಿಟ್ಟುಕೊಂಡು ಹೈದರಾಬಾದ್ ತಂಡವು ಈ ಋತುವಿನಲ್ಲಿಯೂ 4 ಕೋಟಿ ನೀಡಿ ಅವರನ್ನು ಉಳಿಸಿಕೊಂಡಿದೆ. ಕಳೆದ ವರ್ಷ ಮಲಿಕ್ ಅವರನ್ನು ಹೈದರಾಬಾದ್ ತಂಡ 20 ಲಕ್ಷಕ್ಕೆ ಖರೀದಿಸಿತ್ತು. ಉಮ್ರಾನ್ ತಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ತರಕಾರಿ ಮಾರುತ್ತಿದ್ದರು.