ನವದೆಹಲಿ : ಲಕ್ನೋ ಸೂಪರ್ ಜೈಂಟ್ಸ್ ನ ಫಾಸ್ಟ್ ಬೌಲರ್ ಇತ್ತೀಚಿನ ದಿನಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಎಂಥ ಬ್ಯಾಟ್ಸ್‌ಮನ್ ಕೂಡಾ ಈ ಬೌಲರ್‌ ಮುಂದೆ ತತ್ತರಿಸಿ ಹೋಗುತ್ತಾರೆ. ಅಭಿಮಾನಿಗಳು ಕೂಡಾ ಇದೀಗ ಈ ಬೌಲರ್ ಮೋಡಿಗೆ ಬೆರಗಾಗಿದ್ದಾರೆ. ಭಾರತದ ಶ್ರೇಷ್ಠ ಫಾಸ್ಟ್ ಬೌಲರ್ ಜಹೀರ್ ಖಾನ್ ಅವರೊಂದಿಗೆ ಈ ಬೌಲರ್ ಅವರನ್ನು ಹೋಲಿಕೆ ಮಾಡಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಐಪಿಎಲ್‌ನ ಈ ಸೀಸನ್ ನಲ್ಲಿ ಅನೇಕ ಫಾಸ್ಟ್ ಬೌಲರ್‌ಗಳಿದ್ದಾರೆ. ಅವರು ಶೀಘ್ರದಲ್ಲೇ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡರೂ ಆಶ್ಚರ್ಯವಿಲ್ಲ. ಈ ಪೈಕಿ ಮೊಹ್ಸಿನ್ ಖಾನ್ ಹೆಸರು ಸಾಕಷ್ಟು ಚರ್ಚೆಯಲ್ಲಿದೆ. ಈ ಬಾರಿಯ ಐಪಿಎಲ್‌ನಲ್ಲಿ ಮೊಹ್ಸಿನ್ ಖಾನ್ ಬೌಲಿಂಗ್ ಮಾಡುತ್ತಿರುವ ರೀತಿ ನೋಡಿದರೆ ಅವರು ಟೀಂ ಇಂಡಿಯಾ ಪರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ  ಮೈದಾನಕ್ಕಿಳಿಯುವ ದಿನಗಳು ದೂರವಿಲ್ಲ ಎನ್ನಲಾಗಿದೆ. 


ಇದನ್ನೂ ಓದಿ : LSG vs KKR: ಲಕ್ನೋ-ಕೊಲ್ಕತ್ತಾ‌ ಫೈಟ್‌: ಪ್ಲೇ ಆಫ್‌ ಪ್ರವೇಶಿಸುತ್ತಾ ʼಕನ್ನಡಿಗʼನ ತಂಡ!


ಲಕ್ನೋ ಸೂಪರ್ ಜೈಂಟ್ಸ್ ಗೆಲುವಿನಲ್ಲಿ ಬಹು ದೊಡ್ಡ ಪಾತ್ರ :
23 ವರ್ಷದ ವೇಗದ ಬೌಲರ್ ಮೊಹ್ಸಿನ್ ಖಾನ್ ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 2 ರನ್‌ಗಳ ರೋಚಕ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೊಹ್ಸಿನ್ ಖಾನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ಓವರ್‌ಗಳಲ್ಲಿ 20ಕ ರನ್  ನೀಡಿ  3 ವಿಕೆಟ್ ಕಬಳಿಸಿದ್ದಾರೆ. 


'ಜಹೀರ್ ಖಾನ್' ಗೆ ಹೋಲಿಸಿದ ಫ್ಯಾನ್ಸ್ : 
ಮೊಹ್ಸಿನ್ ಖಾನ್ ಅವರು ತಮ್ಮ ಅತ್ಯುತ್ತಮ ಬೌಲಿಂಗ್ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ನ ಅಪಾಯಕಾರಿ ಬ್ಯಾಟ್ಸ್‌ಮನ್ ಆಂಡ್ರೆ ರಸೆಲ್ ಅವರನ್ನು ಔಟ್ ಮಾಡಿ, ಪಂದ್ಯದ ಫಲಿತಾಂಶವನ್ನೇ ಬದಲಿಸಿದ್ದಾರೆ. ಆಂಡ್ರೆ ರಸೆಲ್  ಅವರನ್ನು ಕೇವಲ 5 ರನ್‌ಗಳಲ್ಲೇ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಮೊಹ್ಸಿನ್ ಖಾನ್. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮೊಹ್ಸಿನ್ ಖಾನ್ ಅವರನ್ನು  ಎರಡನೇ ಜಹೀರ್ ಖಾನ್ ಎಂದು  ಕರೆದು ಸಂಭ್ರಮಿಸುತ್ತಿದ್ದಾರೆ. 


ಇದನ್ನೂ ಓದಿ :  MI vs SRH, IPL 2022: ಮುಂಬೈಗೆ ನಿರಾಸೆ, ಹೈದರಾಬಾದ್‌ಗೆ ರೋಚಕ ಗೆಲುವು


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.