ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಅದ್ಭುತವಾಗಿ ಮುನ್ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯದ ಹಂತ ತಲುಪಲಿದೆ. ಇಂದು ಟೂರ್ನಿಯ 66ನೇ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದ್ದು, ಮಹಾರಾಷ್ಟ್ರದ ಡಿವೈ ಪಾಟೀಲ್ ಕ್ರೀಡಾಂಗಣ ಉಭಯ ತಂಡಗಳ ಕಾದಾಟಕ್ಕೆ ಸಜ್ಜಾಗಿದೆ.
ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಇಲ್ಲಿವರೆಗೆ ಹದಿಮೂರು ಪಂದ್ಯಗಳನ್ನಾಡಿರುವ ಲಕ್ನೋ, ಎಂಟರಲ್ಲಿ ಗೆಲುವು ಸಾಧಿಸಿ, ಐದರಲ್ಲಿ ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಹದಿನಾರು ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದೆ.
ಇದನ್ನು ಓದಿ: Vegetable Price: ಹುಳಿಯಾಗುತ್ತಿದೆ ಟೊಮ್ಯಾಟೋ ಬೆಲೆ: ಇಲ್ಲಿದೆ ಇಂದಿನ ತರಕಾರಿ ದರ
ಇನ್ನೊಂದೆಡೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವೂ ಉತ್ತಮವಾಗಿ ಪಂದ್ಯವನ್ನಾಡುತ್ತಿದ್ದು, ಇಲ್ಲಿವರೆಗೆ ಹದಿಮೂರು ಪಂದ್ಯಗಳನ್ನು ಎದುರಿಸಿದೆ. ಅದರಲ್ಲಿ ಆರು ಪಂದ್ಯ ಗೆದ್ದಿದ್ದು, ಇನ್ನುಳಿದ ಏಳು ಪಂದ್ಯದಲ್ಲಿ ಮಕಾಡೆ ಮಲಗಿದೆ. ಈ ಮೂಲಕ ಹನ್ನೆಡರು ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಗಳಿಸಿದೆ.
ಟೂರ್ನಿಯಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ಫೈನಲ್ ಪ್ರವೇಶ ಮಾಡಲಿದೆ. ಇನ್ನು ಈ ಅವಕಾಶ ಪಡೆಯಲು ಲಕ್ನೋ ಸೂಪರ್ ಜೈಂಟ್ಸ್ ತಂಡವು ಕಾತುರದಿಂದ ಕಾಯುತ್ತಿದೆ. ಇನ್ನು ಕೊಲ್ಕತ್ತಾ ತಂಡವು ಅಂಕಪಟ್ಟಿಯಲ್ಲಿ ಹನ್ನೆರಡು ಅಂಕ ಮಾತ್ರ ಪಡೆದಿರುವ ಕಾರಣ ಪ್ಲೇ ಆಫ್‌ಗೆ ಪ್ರವೇಶ ಪಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಉಭಯ ತಂಡಗಳ ಈ ಹಣಾಹಣಿಯಲ್ಲಿ ಲಕ್ನೋಗೆ ಈ ಪಂದ್ಯ ನಿರ್ಣಾಯಕವಾಗಿದೆ.
ಸಂಭಾವ್ಯ ಆಟಗಾರರ ಪಟ್ಟಿ ಇಂತಿದೆ:
ಕೋಲ್ಕತ್ತಾ ನೈಟ್ ರೈಡರ್ಸ್:
ಬಾಬಾ ಇಂದ್ರಜಿತ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್ (ಕ್ಯಾ), ರಿಂಕು ಸಿಂಗ್, ಸ್ಯಾಮ್ ಬಿಲ್ಲಿಂಗ್ಸ್ (ವಿ.ಕೀ), ಸುನಿಲ್ ನರೈನ್, ಆಂಡ್ರೆ ರಸೆಲ್, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ
ಇದನ್ನು ಓದಿ: CNG Car Tips: ಬೇಸಿಗೆ ಕಾಲದಲ್ಲಿ ನಿಮ್ಮ ಸಿಎನ್‌ಜಿ ವಾಹನಗಳ ಬಗ್ಗೆ ಈ ರೀತಿ ನಿಗಾವಹಿಸಿ
ಲಕ್ನೋ ಸೂಪರ್ ಜೈಂಟ್ಸ್:
ಕೆಎಲ್ ರಾಹುಲ್ (ಕ್ಯಾ), ಕ್ವಿಂಟನ್ ಡಿ ಕಾಕ್ (ವಿ.ಕೀ), ಕೃನಾಲ್ ಪಾಂಡ್ಯ, ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ಆಯುಷ್ ಬಡೋನಿ, ಮೊಹ್ಸಿನ್ ಖಾನ್, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್, ಅವೇಶ್ ಖಾನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.