ಐಪಿಎಲ್‌ನಲ್ಲಿ ಕಮಾಲ್ ಮಾಡಿದ ಈ ಆಟಗಾರರು ಸೋಲ್ಡ್ಔಟ್ ಆಗಿದ್ದು ಕೇವಲ 20 ಲಕ್ಷ ರೂ.ಗೆ!
ಇನ್ನು ಐಪಿಎಲ್ 2022 ರಲ್ಲಿ ಕೇವಲ 20 ಲಕ್ಷ ರೂಪಾಯಿಗಳಿಗೆ ಮಾರಾಟವಾದ ಕೆಲ ಆಟಗಾರರು ಉತ್ತಮ ಆಟ ಪ್ರದರ್ಶಿಸಿ, ಎದುರಾಳಿಗಳಿಗೆ ದುಸ್ವಪ್ನವಾಗಿ ಪರಿಣಮಿಸಿದ್ದರು. ಅಂತಹ ಆಟಗಾರರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದಿದ್ರೂ ಸಹ ಅದರ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ. ಚೊಚ್ಚಲ ಬಾರಿಗೆ ಟೂರ್ನಿ ಪ್ರವೇಶಿಸಿದ ಗುಜರಾತ್ ಟೈಟಾನ್ಸ್ ತಂಡ 2022ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಐಪಿಎಲ್ 2022 ರಲ್ಲಿ ಕೇವಲ 20 ಲಕ್ಷ ರೂಪಾಯಿಗಳಿಗೆ ಮಾರಾಟವಾದ ಕೆಲ ಆಟಗಾರರು ಉತ್ತಮ ಆಟ ಪ್ರದರ್ಶಿಸಿ, ಎದುರಾಳಿಗಳಿಗೆ ದುಸ್ವಪ್ನವಾಗಿ ಪರಿಣಮಿಸಿದ್ದರು. ಅಂತಹ ಆಟಗಾರರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಇದನ್ನು ಓದಿ: TRS ನಾಯಕನ ಇನ್ನೋವಾ ಕಾರಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ!
1. ಮುಖೇಶ್ ಚೌಧರಿ:
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿರುವ ಮುಖೇಶ್ ಚೌಧರಿ, ಎದುರಾಳಿಗಳಿಗೆ ಬೆಂಕಿ ಚೆಂಡಿನಂತೆ ಪರಿಣಮಿಸಿದ್ದರು. ಆದರೆ ಸಿಎಸ್‌ಕೆ ತಂಡವು ಐಪಿಎಲ್‌ನಲ್ಲಿ ನಿರಾಶದಾಯಕ ಪ್ರದರ್ಶನವನ್ನು ನೀಡಿತ್ತು. ಇನ್ನು ವೇಗದ ಬೌಲರ್ ಮುಖೇಶ್ ಚೌಧರಿ ಸಿಎಸ್‌ಕೆ ತಂಡದ ಪರವಾಗಿ ಭರ್ಜರಿ ಪ್ರದರ್ಶನವನ್ನು ನೀಡಿದ್ದರು. ಐಪಿಎಲ್ 2022 ರ 13 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಚೌಧರಿ ಪಡೆದಿದ್ದಾರೆ. ಇನ್ನು ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಮುಖೇಶ್ ಅವರನ್ನು ಹೊಗಳಿದ್ದರು. ಐಪಿಎಲ್ 2022 ರ ಅನೇಕ ಪಂದ್ಯಗಳಲ್ಲಿ ಮುಖೇಶ್ ಡೆತ್ ಓವರ್‌ಗಳಲ್ಲಿ ಕಿಲ್ಲರ್ ಬೌಲಿಂಗ್ ಮಾಡಿದ್ದಾರೆ. ಇವರನ್ನು ಚೆನ್ನೈ ಸೂಪರ್ ಕಿಂಗ್ಸ್ 20 ಲಕ್ಷಕ್ಕೆ ಖರೀದಿಸಿತ್ತು.
2. ಮೊಹ್ಸಿನ್ ಖಾನ್:
ಲಕ್ನೋ ಸೂಪರ್ ಜೈಂಟ್ಸ್ ಪರವಾಗಿ ಐಪಿಎಲ್‌ನಲ್ಲಿ ಮೊಹ್ಸಿನ್ ಖಾನ್ ಆಟವಾಡಿದ್ದರು. ಮೊಹ್ಸಿನ್ ಅವರನ್ನು ಲಕ್ನೋ ತಂಡ 20 ಲಕ್ಷಕ್ಕೆ ಖರೀದಿಸಿತ್ತು. ಇನ್ನು ಮೊಹ್ಸಿನ್ ಖಾನ್ ಐಪಿಎಲ್ 2022ರ 9 ಪಂದ್ಯಗಳಲ್ಲಿ 14 ವಿಕೆಟ್ ಕಬಳಿಸಿದ್ದಾರೆ. ಇವರು ಯಾವುದೇ ಪಿಚ್‌ನಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ.
ಇದನ್ನು ಓದಿ: Diabetes Mellitus: ಸಕ್ಕರೆ ಕಾಯಿಲೆ ಇರುವವರಿಗೆ ಈ ನೀರು ಒಂದು ವರದಾನವೇ ಇದ್ದಂತೆ
3. ಜಿತೇಶ್ ಶರ್ಮಾ:
ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಪಂಜಾಬ್ ಕಿಂಗ್ಸ್ ಪರ ಆಡಿದ ಜಿತೇಶ್ ಶರ್ಮಾ, ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದು ಐಪಿಎಲ್‌ನಲ್ಲಿ ಜಿತೇಶ್ ಶರ್ಮಾ ಅವರ ಮೊದಲ ಸೀಸನ್ ಆಗಿದೆ. ಜಿತೇಶ್ ಶರ್ಮಾ ಐಪಿಎಲ್ 2022 ರ 12 ಪಂದ್ಯಗಳಲ್ಲಿ 234 ರನ್ ಗಳಿಸಿದ್ದಾರೆ. ಜಿತೇಶ್ ಶರ್ಮಾ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಮನಗೆದ್ದಿದ್ದರು. ಪಂಜಾಬ್ ಕಿಂಗ್ಸ್ ತಂಡ ಶರ್ಮಾ ಅವರನ್ನು 20 ಲಕ್ಷ ರೂಪಾಯಿಗಳಿಗೆ ಖರೀದಿಸಿತ್ತು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.