Viral News: ಸರ್ಕಾರಿ ಅಧಿಕಾರಿಯಾಗುವ ಕನಸು, ಒಂದೇ ಕಾಲಿನಲ್ಲಿ ಶಾಲೆಗೆ ಬರುವ ವಿದ್ಯಾರ್ಥಿ!

ತಾನು ಕಂಡಿರುವ ಕನಸು ನನಸು ಮಾಡುವ ಉದ್ದೇಶದಿಂದ ವಿಶೇಷಚೇತನ ವಿದ್ಯಾರ್ಥಿ ಪರ್ವೇಜ್ ಪ್ರತಿನಿತ್ಯ 2 ಕಿ.ಮೀ ಒಂಟಿ ಕಾಲಿನಲ್ಲೇ ನಡೆದುಕೊಂಡು ಶಾಲೆಗೆ ಬರುತ್ತಾನೆ.

Written by - Puttaraj K Alur | Last Updated : Jun 4, 2022, 11:15 AM IST
  • ಸರ್ಕಾರಿ ಅಧಿಕಾರಿಯಾಗುವ ಕನಸು, ಒಂಟಿ ಕಾಲಿನಲ್ಲೇ 2 ಕಿ.ಮೀ ನಡೆದು ಶಾಲೆಗೆ ಬರುವ ವಿದ್ಯಾರ್ಥಿ
  • ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ನೌಗಾಮ್ ಸರ್ಕಾರಿ ಶಾಲೆ ವಿದ್ಯಾರ್ಥಿಯ ವಿಡಿಯೋ
  • ವಿದ್ಯಾರ್ಥಿಯ ಸಹಾಯಕ್ಕೆ ಮುಂದಾದ ಜೈಪುರ್​​ದ ಫುಟ್​ ಯುಎಸ್​​ಎ ಅಧ್ಯಕ್ಷ ಪ್ರೇಮ್ ಭಂಡಾರಿ
Viral News: ಸರ್ಕಾರಿ ಅಧಿಕಾರಿಯಾಗುವ ಕನಸು, ಒಂದೇ ಕಾಲಿನಲ್ಲಿ ಶಾಲೆಗೆ ಬರುವ ವಿದ್ಯಾರ್ಥಿ! title=
ಒಂಟಿ ಕಾಲಿನಲ್ಲೇ 2 ಕಿ.ಮೀ ನಡೆದು ಶಾಲೆಗೆ ಬರುವ ವಿದ್ಯಾರ್ಥಿ

ನವದೆಹಲಿ: ಜೀವನದಲ್ಲಿ ಏನಾದ್ರೂ ಮಹತ್ವದ ಸಾಧನೆ ಮಾಡಬೇಕೆನ್ನುವ ವಿದ್ಯಾರ್ಥಿಗಳಿಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅನೇಕರು ಕಲ್ಲು-ಮುಳ್ಳಿನ ಹಾದಿಯಲ್ಲಿಯೇ ನಡೆದು ಅತ್ಯುನ್ನತ ಸಾಧನೆ ಮಾಡಿ ಬೇರೆಯವರಿಗೆ ಮಾದರಿಯಾಗುತ್ತಾರೆ. ಎಂತಹದ್ದೇ ಕಷ್ಟವಿರಲಿ ಶ‍್ರಮಪಡುವ ಛಲವಿದ್ದರೆ ಏನೂ ಬೇಕಾದರೂ ಸಾಧಿಸಬಹುದು. ಇದಕ್ಕೆ ನಿದರ್ಶನವೇ ಜಮ್ಮು-ಕಾಶ್ಮೀರದಲ್ಲಿರುವ ಹಂದ್ವಾರದ ವಿದ್ಯಾರ್ಥಿ ಪರ್ವೇಜ್​.

ಹೌದು, ತಾನು ಕಂಡಿರುವ ಕನಸು ನನಸು ಮಾಡುವ ಉದ್ದೇಶದಿಂದ ವಿಶೇಷಚೇತನ ವಿದ್ಯಾರ್ಥಿ ಪರ್ವೇಜ್ ಪ್ರತಿನಿತ್ಯ 2 ಕಿ.ಮೀ ಒಂಟಿ ಕಾಲಿನಲ್ಲೇ ನಡೆದುಕೊಂಡು ಶಾಲೆಗೆ ಬರುತ್ತಾನೆ. ಈ ಬಗ್ಗೆ ಸುದ್ದಿಸಂಸ್ಥೆ ANI ವಿಡಿಯೋ ಹಂಚಿಕೊಂಡು ವರದಿ ಮಾಡಿದೆ. ಉತ್ತಮ ಶಿಕ್ಷಣ ಪಡೆದು ತಾನೊಬ್ಬ ಸರ್ಕಾರಿ ಅಧಿಕಾರಿಯಾಗಬೇಕೆಂಬ ಕನಸು ಪರ್ವೇಜ್‍ಗಿದೆ. ಹೀಗಾಗಿ ಆತ ನಿತ್ಯ 2 ಕಿ.ಮೀ ಒಂದೇ ಕಾಲಿನಲ್ಲಿ ನಡೆದುಕೊಂಡು ಶಾಲೆಗೆ ಹೋಗುತ್ತಾನೆ.

ಇದನ್ನೂ ಓದಿ:  Viral Video: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವ್ಯಕ್ತಿಯ ಸ್ಟಂಟ್, ಕೆಳಗಿತ್ತು ಭಯಾನಕ ಮೊಸಳೆಗಳು...

ಅಂದಹಾಗೆ ಪರ್ವೇಜ್ ನೌಗಾಮ್ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಚಿಕ್ಕ ವಯಸ್ಸಿನಲ್ಲಿ ಬೆಂಕಿ ಅನಾಹುತದಿಂದ ಈತ ತನ್ನ ಒಂದು ಕಾಲು ಕಳೆದುಕೊಂಡಿದ್ದಾನೆ. ಆದರೆ, ಈತನ ಬದುಕುವ ಉತ್ಸಾಹ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಇತರ ವಿದ್ಯಾರ್ಥಿಗಳ ರೀತಿ ಒಂದೇ ಕಾಲಿನಲ್ಲಿ ಬ್ಯಾಲೆನ್ಸ್ ಮಾಡುತ್ತಾ 2 ಕಿ.ಮೀ ದೂರ ಕ್ರಮಿಸುತ್ತಾನೆ.

ಈ ಬಗ್ಗೆ ಸ್ವತಃ ಮಾತನಾಡಿರುವ 14 ವರ್ಷದ ಪರ್ವೇಜ್, ‘ನಾನು ಪ್ರತಿದಿನ 2 ಕಿ.ಮೀ ಒಂದೇ ಕಾಲಿನಲ್ಲಿ ನಡೆದುಕೊಂಡು ಶಾಲೆಗೆ ಹೋಗುತ್ತೇನೆ. ಸರಿಯಾದ ರಸ್ತೆ ಇಲ್ಲ, ಕೃತಕ ಕಾಲಿನ ವ್ಯವಸ್ಥೆಯಾದರೆ ನಾನು ನಡೆಯಬಲ್ಲೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಕನಸನ್ನು ಹೊಂದಿದ್ದೇನೆ. ಸಮಾಜ ಕಲ್ಯಾಣ ಇಲಾಖೆ ನನಗೆ ಗಾಲಿಕುರ್ಚಿ ನೀಡಿದೆ. ಆದರೆ, ಸರಿಯಾದ ರಸ್ತೆ ಇಲ್ಲದ ಕಾರಣ ಅದನ್ನು ತೆಗೆದುಕೊಂಡು ಬರಲು ಸಾಧ‍್ಯವಾಗುತ್ತಿಲ್ಲ. ಕೃತಕ ಕಾಲು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:  Viral Video : ತನ್ನ ಪಾಡಿಗೆ ತಾನಿದ್ದ ನಾಯಿಯ ಮುಂದೆ ಮಂಗನ ದಾದಾಗಿರಿ..!

ವಿದ್ಯಾರ್ಥಿಗೆ ನೆರವು

ಪ್ರತಿದಿನ ಒಂದೇ ಕಾಲಿನಲ್ಲಿ ನಡೆದುಕೊಂಡು ಶಾಲೆಗೆ ಬರುವ ವಿದ್ಯಾರ್ಥಿಯ ವಿಡಿಯೋ ವೈರಲ್​ ಆಗುತ್ತಿದ್ದಂತೆ ಜೈಪುರ್​​ದ ಫುಟ್​ ಯುಎಸ್​​ಎ ಅಧ್ಯಕ್ಷ ಪ್ರೇಮ್ ಭಂಡಾರಿ ಸಹಾಯ ಮಾಡಲು ಮುಂದಾಗಿದ್ದಾರೆ. ಜಮ್ಮು-ಕಾಶ್ಮೀರದ ವಿದ್ಯಾರ್ಥಿಗೆ ಉಚಿತವಾಗಿ ಕೃತಕ ಕಾಲು ನೀಡುವ ಭರವಸೆ ನೀಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News