ಗಾಯದಿಂದ ಸೃಷ್ಟಿಯಾದ ಇತಿಹಾಸ: ಅನ್‌ಸೋಲ್ಡ್ ಆಗಿದ್ದ ರಜತ್ ಪಾಟೀದಾರ್..!
ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರಜತ್ 2022ರ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದರು ಎಂದರೆ ನಿಮಗೆ ಅಚ್ಚರಿಯಾಗುತ್ತದೆ.
ನವದೆಹಲಿ: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಬುಧವಾರ ನಡೆದ ಮಹತ್ವದ ಪಂದ್ಯದಲ್ಲಿ ಯುವ ಆಟಗಾರ ರಜತ್ ಪಾಟಿದಾರ್ ಭರ್ಜರಿ ಶತಕ ಭಾರಿಸುವ ಮೂಲಕ ಹೀರೋ ಎನಿಸಿಕೊಂಡರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪ್ಲೇ ಆಫ್ ಹಂತದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಪಾಟಿದಾರ್ ಸ್ಫೋಟಕ ಆಟವಾಡುವ ಮೂಲಕ ಆರ್‌ಸಿಬಿಗೆ ಗೆಲುವು ತಂದುಕೊಟ್ಟರು. ಈ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಬ್ಬ ಪ್ರತಿಭಾವಂತ ಆಟಗಾರನ ಉದಯವಾದಂತಾಗಿದೆ.
ಮೊದಲ ಎಸೆತದಲ್ಲಿಯೇ ನಾಯಕ ಫಾಫ್ ಡುಪ್ಲೇಸಿಸ್ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾದ ಆರ್‌ಸಿಬಿಗೆ ಬಲ ತುಂಬಿದ್ದೇ ನಂತರ ಬಂದ ರಜತ್ ಎಂಬ ಚಿನ್ನದ ಹುಡುಗ. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್ ಅಟ್ಟಿದ ಈ ಯುವ ಆಟಗಾರ ಲಕ್ನೋ ಬೌಲರ್ ಗಳ ಬೆವರಿಳಿಸಿದರು. ರಜತ್ ಅಬ್ಬರದ ಆಟದ ಮುಂದೆ ಲಕ್ನೋ ಬೌಲರ್ ಗಳು ಮಂಕಾಗಿಹೋದರು. ಪ್ರತಿ ಎಸೆತವನ್ನೂ ದಂಡಿಸುವ ಮೂಲಕ ರಜತ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಇದನ್ನೂ ಓದಿ: IPL 2022, LSG vs RCB: ರಜತ್ ಭರ್ಜರಿ ಶತಕ, ಲಕ್ನೋ ಮಣಿಸಿ 2ನೇ ಕ್ವಾಲಿಫೈಯರ್ಗೆ ಆರ್‌ಸಿಬಿ ಎಂಟ್ರಿ
ಅನ್‌ಸೋಲ್ಡ್ ಆಗಿದ್ದ ರಜತ್ ಪಾಟಿದಾರ್
KL Rahul: 4 IPL ಸೀಸನ್‌ಗಳಲ್ಲಿ 600+ ರನ್ ಗಳಿಸಿದ ಮೊದಲ ಆಟಗಾರ ಕೆ.ಎಲ್.ರಾಹುಲ್!
ವೃದ್ಧಿಮಾನ್ ಸಹಾ ದಾಖಲೆ ಸರಿಗಟ್ಟಿದ ರಜತ್
ಕೇವಲ 49 ಎಸೆತಗಳಲ್ಲಿ ಶತಕ ಭಾರಿಸಿದ ಪಾಟಿದಾರ್ ಐಪಿಎಲ್ ಟೂರ್ನಿಯ ಇತಿಹಾಸದ ಪ್ಲೇ ಆಫ್‌ನಲ್ಲಿ ವೇಗದ ಶತಕ ಸಿಡಿಸಿದ ಪಟ್ಟಿಯಲ್ಲಿ ವೃದ್ಧಿಮಾನ್ ಸಹಾರ ದಾಖಲೆ ಸರಿಗಟ್ಟಿದ್ದಾರೆ. 54 ಎಸೆತಗಳಲ್ಲಿ ಅಜೇಯ 112 ರನ್ ಕಲೆಹಾಕಿರುವ ರಜತ್ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಹಿರಿಯ ಆಟಗಾರರ ಮನಗೆದ್ದಿದ್ದಾರೆ. ಶುಕ್ರವಾರ ರಾಜಸ್ತಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ 2ನೇ ಕ್ವಾಲಿಫೈಯರ್ ಪಂದ್ಯವನ್ನು ಆಡಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.