IPL 2022, RCB vs LSG: ಭಾರೀ ಗಾಳಿ-ಮಳೆ ಕಾರಣ ಟಾಸ್ ವಿಳಂಬ!

ಕನ್ನಡಿಗ ಕೆ.ಎಲ್.ರಾಹುಲ್ ನೇತೃತ್ವದ ಲಕ್ನೋ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಫಾಫ್ ಡು ಪ್ಲೇಸಿಸ್ ನೇತೃತ್ವದ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡಿದೆ.

Written by - Puttaraj K Alur | Last Updated : May 25, 2022, 09:18 PM IST
  • ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪಂದ್ಯಕ್ಕೆ ಮಳೆ ಅಡ್ಡಿ
  • ಭಾರೀ ಗಾಳಿ ಸಹಿತ ಮಳೆಯಿಂದಾಗಿ ಟಾಸ್ ವಿಳಂಬ, 8.10ರ ನಂತರ ಪಂದ್ಯ ಆರಂಭ
  • ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿರುವ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ
 IPL 2022, RCB vs LSG: ಭಾರೀ ಗಾಳಿ-ಮಳೆ ಕಾರಣ ಟಾಸ್ ವಿಳಂಬ! title=
ಆರ್‌ಸಿಬಿ VS ಲಕ್ನೋ ಪಂದ್ಯಕ್ಕೆ ಮಳೆ ಅಡ್ಡಿ

ನವದೆಹಲಿ: 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಪ್ಲೇ ಆಫ್ ಹಂತಗಳ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗುತ್ತಿವೆ. ಕೋಲ್ಕತ್ತಾದ ಈಡನ್ ಗಾರ್ಡರ್ನ್ಸ್ ನಲ್ಲಿ ನಡೆಯಬೇಕಿರುವ ಈ ಮಹತ್ವದ ಪಂದ್ಯಕ್ಕೆ ಭಾರೀ ಗಾಳಿ ಮತ್ತು ಮಳೆಯ ಕಾರಣ ಟಾಸ್ ವಿಳಂಬವಾಗಿದೆ ಎಂದು ವರದಿಯಾಗಿದೆ.

ಸರಿಯಾಗಿ 7.30ಕ್ಕೆ ಪ್ರಾರಂಭವಾಗಬೇಕಿದ್ದ ಪಂದ್ಯಕ್ಕೆ ಭಾರೀ ಗಾಳಿ ಸಹಿತ ಮಳೆ ಅಡ್ಡಿಯಾಯಿತು. ಪರಿಣಾಮ ಟಾಸ್ ನಡೆಸಲು ಕೊಂಚ ವಿಳಂಬವಾಯಿತು. ಮಳೆನೀರು ನಿಲ್ಲದಂತೆ ಮೈದಾನದ ಸಿಬ್ಬಂದಿಗಳು ಕೂಡಲೇ ಪಿಚ್ ಮೇಲೆ ಕವರ್ ಹಾಕಿದರು.

ಇದನ್ನೂ ಓದಿ: IPL 2022: ಇಂದು ಆರ್‌ಸಿಬಿ-ಲಕ್ನೋ ಪ್ಲೇ ಆಫ್‌ ಜಿದ್ದಾಜಿದ್ದಿ: ಮಳೆ ಅಡ್ಡಿಯಾದರೆ ಮುಂದೇನು ಗತಿ!

ಸದ್ಯದ ಮಾಹಿತಿ ಪ್ರಕಾರ ಮಳೆ-ಗಾಳಿ ಕಡಿಮೆಯಾಗಿದ್ದು, ಪಿಚ್‍ ಮೇಲೆ ಹಾಕಿದ್ದ ಕವರ್ ಅನ್ನು ತೆರೆಯಲಾಗಿದೆ. 7.54ಕ್ಕೆ ಟಾಸ್ ಆಗಿದ್ದು, 8.10ರ ನಂತರ ಇನ್ಸಿಂಗ್ಸ್ ಆರಂಭವಾಗಲಿದೆ. ಕನ್ನಡಿಗ ಕೆ.ಎಲ್.ರಾಹುಲ್ ನೇತೃತ್ವದ ಲಕ್ನೋ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಫಾಫ್ ಡು ಪ್ಲೇಸಿಸ್ ನೇತೃತ್ವದ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡಿದೆ.

ಬೆಂಗಳೂರು ಮತ್ತು ಲಕ್ನೋ ಮಹತ್ವದ ಪಂದ್ಯವನ್ನು ಆಡಲು ಸಜ್ಜಾಗಿವೆ. ಈ ಎಲಿಮಿನೇಟರ್ ಪಂದ್ಯದ ವಿಜೇತರು ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದ್ದಾರೆ. ಸೋತವರು ಟೂರ್ನಿಯಿಂದಲೇ ನಿರ್ಗಮಿಸಲಿದ್ದಾರೆ. ಹೀಗಾಗಿ ಉಭಯ ತಂಡಗಳು ಗೆಲುವಿಗಾಗಿ ಭರ್ಜರಿ ಪೈಪೋಟಿ ನಡೆಸಲಿವೆ. ಈಗಾಗಲೇ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಐಪಿಎಲ್ 2022ರ ಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿದೆ.

ಇದನ್ನೂ ಓದಿ: live ಪಂದ್ಯದ ನಡುವೆಯೇ ಅಶ್ವಿನ್ ಮೇಲೆ ಕೆಂಡ ಕಾರಿದ 20 ರ ಹರೆಯದ ಈ ಆಟಗಾರ..!

ಆರ್‌ಸಿಬಿಗೆ ಆರಂಭಿಕ ಆಘಾತ!

ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿರುವ ಆರ್‌ಸಿಬಿಗೆ ಆರಂಭಿಕ ಆಘಾತವಾಗಿದೆ. ನಾಯಕ ಫಾಫ್ ಡುಪ್ಲೇಸಿಸ್(0) ಮೋಹ್ಸಿನ್ ಖಾನ್ ಬೌಲಿಂಗ್‍ನಲ್ಲಿ ಕ್ವಿಂಟನ್ ಡಿಕಾಕ್‍ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದ್ದಾರೆ. ಸದ್ಯ ಆರ್‌ಸಿಬಿ 3 ಓವರ್ ಗೆ 1 ವಿಕೆಟ್ ಕಳೆದುಕೊಂಡು 20 ರನ್ ಗಳಿಸಿದೆ. ವಿರಾಟ್ ಕೊಹ್ಲಿ(ಅಜೇಯ 15) ಮತ್ತು ರಜತ್ ಪಾಟೀದಾರ್(ಅಜೇಯ 4) ಆಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News