IPL 2022: ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆ ನಿರ್ಮಿಸಿದ ಉಮ್ರಾನ್ ಮಲಿಕ್
ಸಾಮಾನ್ಯವಾಗಿ ಡೆತ್ ಓವರ್ ಗಲ್ಲಿ ಬೌಲಿಂಗ್ ಮಾಡುವುದೆಂದರೆ ಅದು ಸಾಮಾನ್ಯ ಕೆಲಸವಲ್ಲ,ಅದರಲ್ಲೂ ಟಿ20ಯಂತಹ ಪಂದ್ಯಗಳಲ್ಲಿ ಇದು ಇನ್ನೂ ಕಷ್ಟದ ಕೆಲಸ ಎಂದು ಹೇಳಬಹುದು.ಇಂತಹ ಸಂದರ್ಭದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಉಮ್ರಾನ್ ಮಲಿಕ್ ಪಂಜಾಬ್ ಕಿಂಗ್ಸ್ ವಿರುದ್ಧ ಅಪರೂಪದ ದಾಖಲೆಗೆ ಕಾರಣಕರ್ತರಾಗಿದ್ದಾರೆ.
ಮುಂಬೈ: ಸಾಮಾನ್ಯವಾಗಿ ಡೆತ್ ಓವರ್ ಗಳಲ್ಲಿ ಬೌಲಿಂಗ್ ಮಾಡುವುದೆಂದರೆ ಅದು ಸಾಮಾನ್ಯ ಕೆಲಸವಲ್ಲ, ಅದರಲ್ಲೂ ಟಿ20ಯಂತಹ ಪಂದ್ಯಗಳಲ್ಲಿ ಇದು ಇನ್ನೂ ಕಷ್ಟದ ಕೆಲಸ ಎಂದು ಹೇಳಬಹುದು.ಇಂತಹ ಸಂದರ್ಭದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಉಮ್ರಾನ್ ಮಲಿಕ್ ಪಂಜಾಬ್ ಕಿಂಗ್ಸ್ ವಿರುದ್ಧ ಅಪರೂಪದ ದಾಖಲೆಗೆ ಕಾರಣಕರ್ತರಾಗಿದ್ದಾರೆ.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ರನ್ನು ಅಮಿತಾಬ್ ಬಚ್ಚನ್ ಗೆ ಹೋಲಿಸಿದ ಬಾಲಿವುಡ್ ನಟಿ ಕಂಗನಾ ರನೌತ್
ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ತಂಡವು 151 ರನ್ ಗಳಿಗೆ ಆರು ವಿಕೆಟ್ ಗಳನ್ನು ಕಳೆದುಕೊಂಡಿತ್ತು, ಇಂತಹ ಸಂದರ್ಭದಲ್ಲಿ ಇನಿಂಗ್ಸ್ ನ ಕೊನೆಯ ಓವರ್ ನಲ್ಲಿ ಬೌಲಿಂಗ್ ದಾಳಿಗೆ ಇಳಿದ ಉಮ್ರಾನ್ ಮಲಿಕ್ ಅವರು ಎರಡನೇ ಎಸೆತದಲಿ ಒಡೆನ್ ಸ್ಮಿತ್ ಅವರ ವಿಕೆಟ್ ನ್ನು ಕಬಳಿಸಿದರು. ಇದಾದ ನಂತರ ಮಾರಕವಾಗಿ ಪರಿಣಮಿಸಿದ ಮಲಿಕ್ ಅವರು ನಂತರ ಅದೇ ಓವರ್ ನಲ್ಲಿ ರಾಹುಲ್ ಚಹಾರ್, ವೈಭವ್ ಆರೋರಾ, ಹಾಗೂ ಆರ್ಶದೀಪ್ ಅವರ ವಿಕೆಟ್ ನ್ನು ಪಡೆಯುವ ಮೂಲಕ ಹ್ಯಾಟ್ರಿಕ್ ಮಾಡಿದ ಸಾಧನೆಗೆ ಪಾತ್ರರಾದರು. ಇದರಿಂದಾಗಿ ಪಂಜಾಬ್ ಕಿಂಗ್ಸ್ ತಂಡವು 20 ಓವರ್ ಗಳಲ್ಲಿ 151 ರನ್ ಗಳಿಗೆ ಆಲೌಟ್ ಆಗಬೇಕಾಯಿತು.
. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.