ಆರ್ಸಿಬಿ ಆಟಗಾರರಿಗೆ ಕೆಜಿಎಫ್ ಚಾಪ್ಟರ್ 2 ಚಿತ್ರದ ವಿಶೇಷ ಪ್ರೀಮಿಯರ್ ಶೋ..!

ಇತ್ತೀಚಿಗಷ್ಟೇ ಕ್ರೀಡೆ ಮತ್ತು ಚಲನಚಿತ್ರ ಮಾಧ್ಯಮದ ಮೂಲಕ ಮನರಂಜಿಸಲು ಕೈಜೋಡಿಸಿದ್ದ ಹೊಂಬಾಳೆ ಫಿಲಂಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗ ಆರ್ಸಿಬಿ ತಂಡದ ಆಟಗಾರರಿಗೆ ಕೆಜಿಎಫ್ 2 ಚಿತ್ರದ ವಿಶೇಷ ಶೋ ವೊಂದನ್ನು ಆಯೋಜಿಸಿದೆ.ಈ ಕುರಿತಾಗಿ ಟ್ವೀಟ್ ಮಾಡಿರುವ ರಾಯಲ್ ಚಾಲೆಂಜರ್ ಬೆಂಗಳೂರು "ಇಂದು ರಾತ್ರಿ ಆರ್ಸಿಬಿ ಬಯೋ ಬಬಲ್ ನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ವಿಶೇಷ ಪ್ರೀಮಿಯರ್ ಶೋವನ್ನು ಆಯೋಜಿಸಲಾಗುತ್ತದೆ "ಎಂದು ಟ್ವೀಟ್ ಮಾಡಿದೆ.

Written by - Zee Kannada News Desk | Last Updated : Apr 17, 2022, 09:37 PM IST
  • ಈ ಕುರಿತಾಗಿ ಟ್ವೀಟ್ ಮಾಡಿರುವ ರಾಯಲ್ ಚಾಲೆಂಜರ್ ಬೆಂಗಳೂರು "ಇಂದು ರಾತ್ರಿ ಆರ್ಸಿಬಿ ಬಯೋ ಬಬಲ್ ನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ವಿಶೇಷ ಪ್ರೀಮಿಯರ್ ಶೋವನ್ನು ಆಯೋಜಿಸಲಾಗುತ್ತದೆ "ಎಂದು ಟ್ವೀಟ್ ಮಾಡಿದೆ.
ಆರ್ಸಿಬಿ ಆಟಗಾರರಿಗೆ ಕೆಜಿಎಫ್ ಚಾಪ್ಟರ್ 2 ಚಿತ್ರದ ವಿಶೇಷ ಪ್ರೀಮಿಯರ್ ಶೋ..! title=
Photo Courtesy: Twitter

ಮುಂಬೈ: ಇತ್ತೀಚಿಗಷ್ಟೇ ಕ್ರೀಡೆ ಮತ್ತು ಚಲನಚಿತ್ರ ಮಾಧ್ಯಮದ ಮೂಲಕ ಮನರಂಜಿಸಲು ಕೈಜೋಡಿಸಿದ್ದ ಹೊಂಬಾಳೆ ಫಿಲಂಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗ ಆರ್ಸಿಬಿ ತಂಡದ ಆಟಗಾರರಿಗೆ ಕೆಜಿಎಫ್ 2 ಚಿತ್ರದ ವಿಶೇಷ ಶೋ ವೊಂದನ್ನು ಆಯೋಜಿಸಿದೆ.ಈ ಕುರಿತಾಗಿ ಟ್ವೀಟ್ ಮಾಡಿರುವ ರಾಯಲ್ ಚಾಲೆಂಜರ್ ಬೆಂಗಳೂರು "ಇಂದು ರಾತ್ರಿ ಆರ್ಸಿಬಿ ಬಯೋ ಬಬಲ್ ನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ವಿಶೇಷ ಪ್ರೀಮಿಯರ್ ಶೋವನ್ನು ಆಯೋಜಿಸಲಾಗುತ್ತದೆ "ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: Snake Mongoose Fight: ಹಾವು-ಮುಂಗುಸಿಯ ನಡುವೆ ಭೀಕರ ಕಾಳಗ, ನೋಡಿ ನೀವು ಒಂದು ಕ್ಷಣ ದಂಗಾಗುವಿರಿ

ಹೊಂಬಾಳೆ ಫಿಲಂಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರ್ಯಾಂಚೈಸ್ ಈಗ ಸಿನಿಮಾ ಮತ್ತು ಕ್ರೀಡೆಯ ವಿಚಾರದಲ್ಲಿ ಒಪ್ಪಂದ ಮಾಡುಕೊಳ್ಳುವ ಮೂಲಕ ದೇಶಾದ್ಯಂತ ಅಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ನೀಡಲಿದ್ದಾರೆ.ಗ್ಲಿಟ್ಜ್, ಗ್ಲಾಮರ್, ಚಲನಚಿತ್ರಗಳು, ಕ್ರೀಡೆ,ಜೀವನಶೈಲಿಯ ವಿಷಯಗಳಿಗೆ ಈ ಎರಡು ಫ್ರಾಂಚೈಸ್ ಗಳು  ಉತ್ತೇಜನವನ್ನು ನೀಡಲಿವೆ. ಆ ಮೂಲಕ ಚಲನಚಿತ್ರ ಮನರಂಜನೆ ಮತ್ತು ಕ್ರೀಡಾ ಉದ್ಯಮ ಕ್ಷೇತ್ರದಲ್ಲಿ ಹೊಸ ಯುಗವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ರನ್ನು ಅಮಿತಾಬ್ ಬಚ್ಚನ್ ಗೆ ಹೋಲಿಸಿದ ಬಾಲಿವುಡ್ ನಟಿ ಕಂಗನಾ ರನೌತ್ 

ಇನ್ನೊಂದೆಡೆಗೆ ಏಪ್ರಿಲ್ 14 ರಂದು ಯಶ್ ಅಭಿನಯದ ಕೆಜಿಎಫ್ 2 ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್ ನಲ್ಲಿ ಎಲ್ಲಾ ದಾಖಲೆಯನ್ನು ಧೂಳಿಪಟ ಮಾಡುತ್ತಿದೆ.ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ಈಗ ದೇಶದ ಎಲ್ಲಾ ಭಾಗಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ.ಆ ಮೂಲಕ ಈ ವಾರಾಂತ್ಯದ ಹೊತ್ತಿಗೆ ಹೊಸ ದಾಖಲೆಯನ್ನು ನಿರ್ಮಿಸಲು ಸಜ್ಜಾಗಿದೆ.ಸಿನಿ ಮಾರುಕಟ್ಟೆ ವಿಶ್ಲೇಷಕ ಮನೋಬಾಲಾ ಅವರ ಪ್ರಕಾರ ಕೆಜಿಎಫ್ 2  ಚಿತ್ರವೂ ಕೇವಲ ಮೂರು ದಿನಗಳಲ್ಲಿ ವಿಶ್ವಾದಾದ್ಯಂತ 419 ಕೋಟಿ ರೂ ಗಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News