IPL 2023 Chennai Super Kings: ಎಂಎಸ್ ಧೋನಿ ನಾಯಕತ್ವದ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂದಿನ ಸೀಸನ್‌ಗೆ ಮುನ್ನ ದೊಡ್ಡ ಹಿನ್ನಡೆ ಅನುಭವಿಸಿದೆ. ಸಿಎಸ್‌ಕೆಯ ದೊಡ್ಡ ಮ್ಯಾಚ್ ವಿನ್ನರ್ ಆಟಗಾರ ಗಾಯಗೊಂಡಿದ್ದಾರೆ. ಈ ಆಟಗಾರನ ಗಾಯದಿಂದಾಗಿ ಮುಂಬರುವ ಋತುವಿನಿಂದ ಹೊರಗುಳಿಯುವ ಅಪಾಯವೂ ಇದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs AUS: ರಹಸ್ಯವಾಗಿ ವಿವಾಹವಾದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್? ಜೋಡಿಯ ಖಾಸಗಿ ಫೋಟೋ ವೈರಲ್


ನ್ಯೂಜಿಲೆಂಡ್ ತಂಡ ಫೆಬ್ರವರಿ 16 ರಿಂದ ಇಂಗ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಿದೆ. ವೇಗದ ಬೌಲರ್ ಕೈಲ್ ಜಮ್ಮಿಸನ್ ಈ ಸರಣಿಯಿಂದ ಹೊರಗುಳಿದಿದ್ದಾರೆ. ಮತ್ತೊಮ್ಮೆ ಅವರಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು.


ಕೈಲ್ ಜಮ್ಮಿಸನ್ ಬಗ್ಗೆ ಮಾತನಾಡಿದ ನ್ಯೂಜಿಲೆಂಡ್ ಮುಖ್ಯ ಕೋಚ್ ಗ್ಯಾರಿ ಸ್ಟೆಡ್, 'ಕೈಲ್ ಜಮ್ಮಿಸನ್‌ಗೆ ಇದು ತುಂಬಾ ಕಷ್ಟಕರವಾಗಿರುತ್ತದೆ. ಏಕೆಂದರೆ ಅವರು ಮತ್ತೆ ಕ್ಷೇತ್ರಕ್ಕೆ ಬರಲು ಶ್ರಮಿಸುತ್ತಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್ ಎದುರು ಕೈಲ್ ಗಾಯಗೊಂಡಿದ್ದು, ಇದೀಗ ಮತ್ತೊಮ್ಮೆ ಅದೇ ತಂಡದ ಮುಂದೆ ಈ ಸಮಸ್ಯೆಯನ್ನು ಎದುರಿಸಬೇಕಾಗಿದೆ” ಎಂದು ಹೇಳಿದರು.


ಗ್ಯಾರಿ ಸ್ಟೆಡ್ ಮಾತು ಮುಂದುವರೆಸಿ, 'ಕೈಲ್ ಜಾಮಿಸನ್ ಅವರು ಬ್ಯಾಕ್ ಸ್ಟ್ರೆಸ್ ಫ್ರಾಕ್ಚರ್ ಸಮಸ್ಯೆಗೆ ತುತ್ತಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಇಂದು ಕ್ರೈಸ್ಟ್‌ ಚರ್ಚ್‌ಗೆ ಹಿಂತಿರುಗಿ, ಅಲ್ಲಿ CT ಸ್ಕ್ಯಾನ್ ಮಾಡಿಸಿಕೊಳ್ಳುತ್ತಾರೆ” ಎಂದು ಹೇಳಿದರು.


ಇದನ್ನೂ ಓದಿ: IND vs AUS: ದೆಹಲಿಯ ಎರಡನೇ ಟೆಸ್ಟ್ ಗೂ ಮುನ್ನ ಹೊರಬಿತ್ತು ಅಭಿಮಾನಿಗಳ ಮನ ನೋಯಿಸುವ ಸುದ್ದಿ!


28 ವರ್ಷದ ಕೈಲ್ ಜಮ್ಮಿಸನ್ ನ್ಯೂಜಿಲೆಂಡ್ ಪರ ಇದುವರೆಗೆ 16 ಟೆಸ್ಟ್ ಪಂದ್ಯಗಳು, 8 ODIಗಳು ಮತ್ತು 8 T20 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ 9 ಪಂದ್ಯಗಳನ್ನೂ ಆಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.