IND vs AUS: ರಹಸ್ಯವಾಗಿ ವಿವಾಹವಾದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್? ಜೋಡಿಯ ಖಾಸಗಿ ಫೋಟೋ ವೈರಲ್

Prithvi shaw Viral Post: ಪೃಥ್ವಿ ಶಾ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದರಲ್ಲಿ ಅವರ ಗೆಳತಿ ನಿಧಿ ತಪಾಡಿಯಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ, ಇಬ್ಬರೂ ಚುಂಬಿಸುತ್ತಿರುವುದನ್ನು ಕಾಣಬಹುದು ಮತ್ತು 'ಹ್ಯಾಪಿ ವ್ಯಾಲೆಂಟೈನ್ಸ್ ಮೈ ವೈಫ್ರಿ!' ಎಂದು ಬರೆದುಕೊಂಡಿದ್ದಾರೆ

Written by - Bhavishya Shetty | Last Updated : Feb 14, 2023, 08:30 PM IST
    • ಅನೇಕ ಆಟಗಾರರು ತಮ್ಮ ಸಂಗಾತಿಗೆ ಸಾಮಾಜಿಕ ಮಾಧ್ಯಮ ಮೂಲಕ ಶುಭ ಹಾರೈಸಿದ್ದಾರೆ.
    • ಇದೆಲ್ಲದರ ನಡುವೆ ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಕೂಡ ಸುದ್ದಿಯಾಗಿದ್ದಾರೆ.
    • ಪೃಥ್ವಿ ಶಾ ಅವರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ
IND vs AUS: ರಹಸ್ಯವಾಗಿ ವಿವಾಹವಾದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್? ಜೋಡಿಯ ಖಾಸಗಿ ಫೋಟೋ ವೈರಲ್  title=
prithvi shaw

Indian Cricket Team: ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಸ್ಟಾರ್ ವ್ಯಕ್ತಿಗಳ ವೈಯಕ್ತಿಕ ಜೀವನವನ್ನು ಯಾರಿಂದಲೂ ಮರೆಮಾಡಲು ಸಾಧ್ಯವಿಲ್ಲ. ಇನ್ನು ಪ್ರೇಮಿಗಳ ದಿನದಂದು ಅನೇಕ ಆಟಗಾರರು ತಮ್ಮ ಸಂಗಾತಿಗೆ ಸಾಮಾಜಿಕ ಮಾಧ್ಯಮ ಮೂಲಕ ಶುಭ ಹಾರೈಸಿದ್ದಾರೆ. ಇದೆಲ್ಲದರ ನಡುವೆ ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಕೂಡ ಸುದ್ದಿಯಾಗಿದ್ದಾರೆ. ಪೃಥ್ವಿ ಶಾ ಅವರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಶಾ ತನ್ನ ಪತ್ನಿ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ:  IND vs AUS: ದೆಹಲಿಯ ಎರಡನೇ ಟೆಸ್ಟ್ ಗೂ ಮುನ್ನ ಹೊರಬಿತ್ತು ಅಭಿಮಾನಿಗಳ ಮನ ನೋಯಿಸುವ ಸುದ್ದಿ!

ರಹಸ್ಯವಾಗಿ ಮದುವೆಯಾದ್ರಾ ಪೃಥ್ವಿ ಶಾ?

ಪೃಥ್ವಿ ಶಾ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದರಲ್ಲಿ ಅವರ ಗೆಳತಿ ನಿಧಿ ತಪಾಡಿಯಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ, ಇಬ್ಬರೂ ಚುಂಬಿಸುತ್ತಿರುವುದನ್ನು ಕಾಣಬಹುದು ಮತ್ತು 'ಹ್ಯಾಪಿ ವ್ಯಾಲೆಂಟೈನ್ಸ್ ಮೈ ವೈಫ್ರಿ!' ಎಂದು ಬರೆದುಕೊಂಡಿದ್ದಾರೆ.

ಇನ್ನು ಮಾಧ್ಯಮ ವರದಿಗಳನ್ನು ನಂಬುವುದಾದರೆ, ಈ ಫೋಟೋವನ್ನು ಪೃಥ್ವಿ ಶಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ತಕ್ಷಣವೇ ಅದನ್ನು ತೆಗೆದುಹಾಕಿದ್ದಾರೆ. ಬಳಿಕ ಈ ಬಗ್ಗೆ ಪೃಥ್ವಿ ಶಾ ಸ್ಪಷ್ಟನೆ ನೀಡಿದ್ದಾರೆ.

ನಿಧಿ ತಪಾಡಿಯಾ ಅವರೊಂದಿಗಿನ ಫೋಟೋ ವೈರಲ್ ಆದ ಬಳಿಕ ಪೃಥ್ವಿ ಶಾ ಮತ್ತೊಂದು ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. “ಯಾರೋ ನನ್ನ ಸ್ಟೋರಿಯಲ್ಲಿ ಈ ಫೋಟೋಗಳನ್ನು ಹಾಕಿದ್ದಾರೆ. ನನ್ನ ಪೇಜ್ ನಲ್ಲಿ ನಾನು ಎಂದಿಗೂ ಹಂಚಿಕೊಳ್ಳದ ವಿಷಯವನ್ನು ಹಾಕಲಾಗಿದೆ. ಆದ್ದರಿಂದ ಇದನ್ನೂ ನಿರ್ಲಕ್ಷಿಸಿ” ಎಂದು ಹೇಳಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಪೃಥ್ವಿ ಶಾ ಮತ್ತು ನಿಧಿ ತಪಾಡಿಯಾ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗಷ್ಟೇ ಇವರಿಬ್ಬರ ಬ್ರೇಕಪ್ ಸುದ್ದಿ ಹರಿದಾಡುತ್ತಿತ್ತು.

ಇದನ್ನೂ ಓದಿ: ಪ್ರೀತಿಸುತ್ತಿದ್ದ ಯುವತಿಯನ್ನೇ ಕೊಲೆಗೈದು ಢಾಬಾದ ಫ್ರಿಡ್ಜ್ ನಲ್ಲಿಟ್ಟ ಪ್ರಿಯಕರ!

ನಿಧಿ ತಪಾಡಿಯಾ ಯಾರು?

ನಿಧಿ ತಪಾಡಿಯಾ ರೂಪದರ್ಶಿ ಮತ್ತು ನಟಿ. ಇವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತವೆ. ನಿಧಿ ತಪಾಡಿಯಾ ಅವರು Instagram ನಲ್ಲಿ 108K ಫಾಲೋವರ್ಸ್ ನ್ನು ಹೊಂದಿದ್ದಾರೆ. ಆಕೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿವಾಸಿ. ಹೊಸ ವರ್ಷ ಪಾರ್ಟಿಯೊಂದರಲ್ಲಿ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News