IPL 2023 : ಡಿಸೆಂಬರ್ 16 ರಂದು ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ಆಯೋಜಿಸಲು ಇಸ್ತಾನ್‌ಬುಲ್ ಸೇರಿದಂತೆ ಐದು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಟರ್ಕಿಯ ರಾಜಧಾನಿ ಮತ್ತು ಬೆಂಗಳೂರಿನ ಹರಾಜು ಪ್ರಕ್ರಿಯೆ ನಡೆಸಲಾಗುವುದು. ನವದೆಹಲಿ, ಮುಂಬೈ ಮತ್ತು ಹೈದರಾಬಾದ್ ನಲ್ಲಿಯೂ ಕೂಡ ಹರಾಜು ಪ್ರತಿಕ್ರಿಯೆ ನಡೆಸುವ ಸಾಧ್ಯತೆ ಇದೆ. ಹೊಸ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ನೇತೃತ್ವದ ಸಭೆ ಬಳಿಕ ಯಾವ ಸ್ಥಳದಲ್ಲಿ ಹರಾಜುನ್ನು ನಡೆಸಬೇಕು ಎಂಬುವುದನ್ನು ತೀರ್ಮಾನಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.


ಇದನ್ನೂ ಓದಿ: ಐಸಿಸಿ ನೂತನ ಟಿ-20 ರ‍್ಯಾಂಕಿಂಗ್‌: ಟಾಪ್ 10ಕ್ಕೆ ಮರಳಿದ ಕಿಂಗ್ ಕೊಹ್ಲಿ..!


ಇನ್ನೂ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇಸ್ತಾಂಬುಲ್ ಅಲ್ಲಿ ಹರಾಜುನ್ನು ಮಾಡಬೇಕು ಎಂದು ಯೋಚಿಸುತ್ತಿದ್ದೇವೆ. ಏಕಂದ್ರೆ ಕೋವಿಡ್ ನಂತರ ನಾವು ತಂಡಗಳು ಮತ್ತು ಅವರ ಅಧಿಕಾರಿಗಳನ್ನು ಭೇಟಿ ಮಾಡಿ ಶಾಂತ ರೀತಿಯಿಂದ ಸಮಾಲೋಚನೆ ಮಾಡಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಒಳ್ಳೆಯ ಜಾಗವನ್ನು ಹುಡುಕುತ್ತಿದ್ದೇವೆ" ಎಂದು ಬಿಸಿಸಿಐ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.


ಕಳೆದ ವರ್ಷಕ್ಕಿಂತ ಭಿನ್ನವಾಗಿ ಈ ವರ್ಷ ಮಿನಿ ಹರಾಜು ನಡೆಯಲಿದೆ. 10 ಐಪಿಎಲ್ ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ನವೆಂಬರ್ 15 ರೊಳಗೆ ಸಲ್ಲಿಸುವಂತೆ ಈಗಾಗಲೇ ಕೇಳಲಾಗಿದೆ. ಅಲ್ಲದೆ, ವೇತನದ ಮಿತಿಯನ್ನು 90 ರಿಂದ 95 ಕೋಟಿಗೆ ಹೆಚ್ಚಿಸುವ ಸಾಧ್ಯತೆಯಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.