GT vs PBKS : ಇಂಡಿಯನ್ ಪ್ರಿಮಿಯರ್ ಲೀಗ್ 2024ರ (Indian Premier League 2024) 17 ನೇ ಹೈ ವೋಲ್ಟೇಜ್ ಪಂದ್ಯದಲ್ಲಿ ಪಂಜಾಬ್ ತಂಡ ಗುಜರಾತ್ ತಂಡದ ವಿರುದ್ಧ 3 ವಿಕೆಟ್ ಗಳ ಗೆಲುವುದು ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಗುಜರಾತ್ ಟೈಟನ್ಸ್ ನಿಗದಿತ 20 ಓವರ್ ಗಳಲ್ಲಿ 199 ರನ್ ಗಳಿಸಿ ಪಂಜಾಬ್ ತಂಡಕ್ಕೆ ಗೆಲುವಿಗಾಗಿ 200 ರನ್ ಗಳ ಟಾರ್ಗೆಟ್ ನೀಡಿತ್ತು, ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತವರು ನೆಲದಲ್ಲಿ ಗುಜರಾತ್ (Gujarat Titans) ಪ್ರಾಬಲ್ಯವನ್ನು ಅಂತ್ಯಗೊಳಿಸಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ನಾಯಕ ಶಿಖರ್ ಧವನ್ ಟಾಸ್ ಗೆದ್ದು ಗುಜರಾತ್ ತಂಡವನ್ನು ಮೊದಲು ಬ್ಯಾಟಿಂಗ್ ಗೆ ಆಮಂತ್ರಿಸಿದ್ದಾರೆ (panjab wins against gujarat team by three wickets in high voltage match ). ಪಂಜಾಬ್ ಬೌಲರ್‌ಗಳು ಉತ್ತಮ ಆರಂಭವನ್ನು ಪಡೆದರು, ಆದರೆ ಮತ್ತೊಂದು ತುದಿಯಿಂದ ಶುಭಮನ್ ಗಿಲ್ ಪಂಜಾಬ್ ಬೌಲರ್ ಗಳ ಧೂಳಿಪಟ ಮುಂದುವರೆಸಿದರೆ. ಇದರಿಂದಾಗಿ ಗುಜರಾತ್ ಪಂಜಾಬ್ ಎದುರು 200 ರನ್ ಗಳ ಗುರಿ ನೀಡಿತು. ಆದರೆ ಪಂಜಾಬ್ ಕಿಂಗ್ಸ್‌ನ ಪ್ರಭಾವಿ ಆಟಗಾರರಾದ ಅಶುತೋಷ್ ಶರ್ಮಾ (Ashutosh Sharma) ಮತ್ತು ಶಶಾಂಕ್ (Shashank) ಗುಜರಾತ್ ಪರ  ಉತ್ತಮ ಬ್ಯಾಟಿಂಗ್ ಪ್ರದಶನದ ಹಿನ್ನೆಲೆ .  ಪಂಜಾಬ್ 3 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-PBKS vs GT: ಹೋಮ್ ಗ್ರೌಂಡ್ ನಲ್ಲಿ Shubhman Gill ಗರ್ಜನೆ, ತಂಡದ ನಾಯಕನಾಗಿ ಮೊದಲ ಫಿಫ್ಟಿ!


ಶುಬ್ಮನ್ ಗಿಲ್ ಒನ್ ಮ್ಯಾನ್ ಆರ್ಮಿ
ಗುಜರಾತ್‌ನ ಬ್ಯಾಟಿಂಗ್ ಬಗ್ಗೆ ಹೇಳುವುದಾದರೆ, ಇಂದಿನ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ (Shubhman Gill) ತಂಡದ ಟ್ರಬಲ್‌ಶೂಟರ್ ಸಾಬೀತಾಗಿದ್ದಾರೆ. ಆರಂಭಿಕ ಆಟಗಾರ  ವೃದ್ಧಿಮಾನ್ ಸಹಾ ಕೇವಲ 11 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದ್ದಾರೆ. ನಂತರ ಬಂದ ಕೇನ್ ವಿಲಿಯಮ್ಸನ್ ಕೂಡ 22 ರನ್ ಗಳಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡರು. ಆದರೆ, ಯುವ ಆಟಗಾರ ಸಾಯಿ ಸುದರ್ಶನ್ 19 ಎಸೆತಗಳಲ್ಲಿ 6 ಬೌಂಡರಿ ಬಾರಿಸುವ ಮೂಲಕ ಗಿಲ್ ಗೆ ಉತ್ತಮ ಸಾಥ್ ನೀಡಿ ಎದುರಾಳಿಗಳ ಮೇಲೆ ಒತ್ತಡ ಹೇರಿದರು. ಇನ್ನೊಂದು ತುದಿಯಿಂದ ಕೊನೆಯವರೆಗೂ ನಿಂತ ಗಿಲ್ ಕೇವಲ 48 ಎಸೆತಗಳಲ್ಲಿ 89 ರನ್‌ಗಳ ಅದ್ಭುತ ಇನ್ನಿಂಗ್ಸ್ ಪೂರ್ಣಗೊಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 6 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಹೊಡೆದರು ಮತ್ತು ಸ್ಕೋರ್‌ಬೋರ್ಡ್‌ನಲ್ಲಿ 199 ರನ್ ಗಳಿಗೆ ತಂದು ನಿಲ್ಲಿಸಿದರು.


ಇದನ್ನೂ ಓದಿ-PBKS Vs GT : ಟಾಸ್ ಗೆದ್ದ ಪಂಜಾಬ್, ಬೌಲಿಂಗ್ ಆಯ್ಕೆ


ನೂರ್ ಅಹ್ಮದ್ ಅವರ ಅದ್ಭುತ ಬೌಲಿಂಗ್
ಗುಜರಾತ್‌ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ಕೂಡ ಕಂಡುಬಂದಿದೆ. ಈ ಪಂದ್ಯದಲ್ಲಿ ಯುವ ಆಟಗಾರ ನೂರ್ ಅಹ್ಮದ್ ತಮ್ಮ ಅದ್ಭುತ ಸ್ಪಿನ್ ಪ್ರದರ್ಶಿಸಿ ಪಂಜಾಬ್ ನ ಬೆನ್ನು ಮುರಿದರು. ನೂರ್ ಅವರು ಪ್ರಭಾಸಿಮ್ರಾನ್ ಸಿಂಗ್ ಮತ್ತು ಜಾನಿ ಬೈರ್‌ಸ್ಟೋವ್ ಅವರಂತಹ ಸ್ಟಾರ್ ಬ್ಯಾಟ್ಸ್‌ಮನ್‌ಗಳ ಬಲಿ ಪಡೆದರು. ಗುಜರಾತ್ ನ ಎಲ್ಲ ಬೌಲರ್ ಗಳು ವಿಕೆಟ್ ಪಡೆದರು. ಆದರೆ ಪಂಜಾಬ್‌ನ ಬ್ಯಾಟ್ಸ್‌ಮನ್‌ಯೊಬ್ಬರು ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಗುಜರಾತ್ ಅನ್ನು ಉಸಿರುಗಟ್ಟಿಸಿದ್ದಾರೆ. 


ಪಂದ್ಯದ ದಿಕ್ಕು ಬದಲಾಯಿಸಿದ ಶಶಾಂಕ್-ಅಶುತೋಷ್
ಪಂಜಾಬ್ ಪರ ಪ್ರಭಾಸಿಮ್ರಾನ್ ಸಿಂಗ್ 35 ರನ್ ಗಳಿಸಿದ್ದಾರೆ. ಶಿಖರ್ ಧವನ್, ಜಾನಿ ಬೈರ್‌ಸ್ಟೋವ್, ಸ್ಯಾಮ್ ಕುರ್ರಾನ್ ಮತ್ತು ಸಿಕಂದರ್ ರಝಾ ಅವರಂತಹ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದಾರೆ. ಆದರೆ ಶಶಾಂಕ್ ಸಿಂಗ್ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಪಂದ್ಯಕ್ಕೆ ಜೀವ ತುಂಬಿದ್ದಾರೆ. ಈ ಆಟಗಾರ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಇನ್ನೊಂದು ತುದಿಯಲ್ಲಿ ವಿಕೆಟ್‌ಗಳು ಬೀಳುತ್ತಲೇ ಇದ್ದರೂ, ಆದರೆ ಶಶಾಂಕ್ ಸುಲಭವಾಗಿ ತಮ್ಮ ವಿಕೆಟ್ ಬಿಟ್ಟು ಕೊಟ್ಟಿಲ್ಲ. ಅಂತಿಮವಾಗಿ ಅಶುತೋಷ್ ಸಿಂಗ್ ಕೇವಲ 16 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 31 ರನ್ ಗಳಿಸಿ ಬಿರುಸಿನ ಆಟವಾಡಿದರು.
 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ