PBKS vs GT: ಹೋಮ್ ಗ್ರೌಂಡ್ ನಲ್ಲಿ Shubhman Gill ಗರ್ಜನೆ, ತಂಡದ ನಾಯಕನಾಗಿ ಮೊದಲ ಫಿಫ್ಟಿ!

IPL 2024: ಐಪಿಎಲ್ 2024 ರ 17 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಶುಭಮನ್ ಗಿಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ, ಅವರು IPL 2024 ರ ತಮ್ಮ ಮೊದಲ ಅರ್ಧಶತಕವನ್ನು ಗಳಿಸಿದ್ದಾರೆ ಮತ್ತು 89 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದಾರೆ. (IPL News In Kannada)  

Written by - Nitin Tabib | Last Updated : Apr 4, 2024, 10:37 PM IST
  • ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪಂಜಾಬ್ ಕಿಂಗ್ಸ್ ಗೆ 200 ರನ್ ಗಳ ಗುರಿ ನೀಡಿದೆ.
  • ಗಿಲ್ ಮತ್ತು ಸುದರ್ಶನ್ ಹೊರತುಪಡಿಸಿ, ವಿಜಯ್ ಶಂಕರ್ 8 ರನ್ ಗಳಿಸಿದ್ದಾರೆ ಮತ್ತು
  • ರಾಹುಲ್ ತೆವಾಟಿಯಾ 8 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 3 ಬೌಂಡರಿಗಳ ಸಹಾಯದಿಂದ ಅಜೇಯ 23 ರನ್ ಗಳಿಸಿದ್ದಾರೆ.
PBKS vs GT: ಹೋಮ್ ಗ್ರೌಂಡ್ ನಲ್ಲಿ Shubhman Gill ಗರ್ಜನೆ, ತಂಡದ ನಾಯಕನಾಗಿ ಮೊದಲ ಫಿಫ್ಟಿ! title=

Indian Premier League 2024: ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾಗೂ ಬ್ಯಾಟ್ಸ್ ಮನ್ ಶುಭಮನ್ ಗಿಲ್ ಪಂಜಾಬ್ ಕಿಂಗ್ಸ್ ವಿರುದ್ಧ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ (shubhman gill roar in home ground hits fist fifty as captain) ಮತ್ತು  ಈ ಋತುವಿನಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಗಳಿಸಿದ್ದಾರೆ. 89 ರನ್ಗಳ ಅಜೇಯ ಇನ್ನಿಂಗ್ಸ್ ಅನ್ನು ಅವರು ಆಡಿದ್ದಾರೆ. ನಾಯಕನಾಗಿ ಐಪಿಎಲ್‌ನಲ್ಲಿ ಇದು ಅವರ ಮೊದಲ ಅರ್ಧಶತಕವಾಗಿದೆ. ಅವರ ಬಲಿಷ್ಠ ಇನ್ನಿಂಗ್ಸ್‌ನ ಆಧಾರದ ಮೇಲೆ ಗುಜರಾತ್ ತಂಡ ಈ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 199 ರನ್ ಗಳಿಸಿ, ಪಂಜಾಬ್ ತಂಡಕ್ಕೆ ಗೆಲ್ಲಲು 200 ರನ್‌ಗಳ ಗುರಿಯನ್ನು ನೀಡಿದೆ (IPL 2024 News In Kannada).

ಇದನ್ನೂ ಓದಿ-IPL 2024: Mumbai Indians ಪಾಲಿಗೊಂದು ಗುಡ್ ನ್ಯೂಸ್, ತಂಡಕ್ಕೆ ಮರಳಿದ್ದಾನೆ ಈ ಸ್ಫೋಟಕ ಬ್ಯಾಟ್ಸ್ ಮನ್!

ಪಂಜಾಬ್ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದ ಗಿಲ್ (shubhman gill roar in home ground hits fist fifty as captain)
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಸ್ಕೋರ್  29 ರನ್ ಇರುವಾಗ  ವೃದ್ಧಿಮಾನ್ ಸಹಾ ರೂಪದಲ್ಲಿ ತಂಡಕ್ಕೆ ಮೊದಲ ಆಘಾತ ಎದುರಾಗಿದೆ. ಇದಾದ ಬಳಿಕ, ಕೇನ್ ವಿಲಿಯಮ್ಸನ್ ಅವರೊಂದಿಗೆ ಗಿಲ್ ಇನ್ನಿಂಗ್ಸ್ ಅನ್ನು ಮುಂದಕ್ಕೆ ತೆಗೆದುಕೊಂಡು ಹೋದರು, ವಿಲಿಯಮ್ಸನ್ 26 ರನ್ ಗಳಿಸಿ ಔಟಾದರು. ಮೂರನೇ ವಿಕೆಟ್‌ಗೆ ಗಿಲ್ ಮತ್ತು ಸುದರ್ಶನ್ ನಡುವೆ ಅರ್ಧಶತಕದ ನಡೆಯಿತು. ಇದೇ ವೇಳೆ ಗಿಲ್ ಕೂಡ ಅರ್ಧಶತಕ ಪೂರೈಸಿದರು. ಸುದರ್ಶನ್ 19 ಎಸೆತಗಳಲ್ಲಿ 33 ರನ್ ಗಳಿಸಿ ಔಟಾದರು. ಇದರ ನಂತರ, ಗಿಲ್ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ 89 ರನ್‌ಗಳಿಗೆ ತಮ್ಮ ಇನ್ನಿಂಗ್ಸ್‌ಗೆ ಕೊಂಡೊಯ್ದರು. ಕೊನೆಯವರೆಗೂ ಆಡಿದ ಗಿಲ್ ಅವರ ಅಜೇಯ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳು ಶಾಮೀಲಾಗಿವೆ (shubman gill ipl highest score). ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 185ಕ್ಕಿಂತ ಹೆಚ್ಚಿತ್ತು.

ಇದನ್ನೂ ಓದಿ-IPL 2024: ತಂಡದ ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿ ಪತ್ನಿ ಜೊತೆಗಿನ ಪೋಸ್ಟ್ ಹಂಚಿಕೊಂಡ RR ಕ್ಯಾಪ್ಟನ್

ಎದುರಾಳಿ ತಂಡಕ್ಕೆ 200 ರನ್ ಟಾರ್ಗೆಟ್ ನೀಡಿದ ಗುಜರಾತ್ (shubman gill ipl runs)
ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪಂಜಾಬ್ ಕಿಂಗ್ಸ್ ಗೆ 200 ರನ್ ಗಳ ಗುರಿ ನೀಡಿದೆ. ಗಿಲ್ ಮತ್ತು ಸುದರ್ಶನ್ ಹೊರತುಪಡಿಸಿ, ವಿಜಯ್ ಶಂಕರ್ 8 ರನ್ ಗಳಿಸಿದ್ದಾರೆ ಮತ್ತು ರಾಹುಲ್ ತೆವಾಟಿಯಾ 8 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 3 ಬೌಂಡರಿಗಳ ಸಹಾಯದಿಂದ ಅಜೇಯ 23 ರನ್ ಗಳಿಸಿದ್ದಾರೆ. ಪಂಜಾಬ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಕಗಿಸೊ ರಬಾಡ ಹೊರಹೊಮ್ಮಿದ್ದಾರೆ. ಅವರು 4 ಓವರ್‌ಗಳಲ್ಲಿ 44 ರನ್ ನೀಡುವ ಮೂಲಕ 2 ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆದಿದ್ದಾರೆ. ಆದರೆ, ಹರ್ಷಲ್ ಪಟೇಲ್ ಮತ್ತು ಹರ್‌ಪ್ರೀತ್ ಬ್ರಾರ್ 1-1 ವಿಕೆಟ್ ಪಡೆಯುವಲ್ಲಿ ಮಾತ್ರ ಶಕ್ತರಾಗಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News