IPL 2024 : ಗುಜರಾತ್ ತಂಡದ ನಾಯಕ ಶುಭಮನ್ ಗಿಲ್ ಗೆ 12 ಲಕ್ಷ ದಂಡ
IPL : ಮಂಗಳವಾರ ನಡೆದ ಐಪಿಎಲ್ 7 ನೇ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ ಅವರಿಗೆ ದಂಡ ವಿಧಿಸಲಾಗಿದೆ.
IPL 2024 : ಗುಜರಾತ್ ಟೈಟನ್ಸ್ ನಾಯಕ ಶುಭಮನ್ ಗಿಲ್ ಮಂಗಳವಾರ ಚೆನ್ನೈನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ವಿರುದ್ಧದ ಐಪಿಎಲ್ 7ನೇ ಪಂದ್ಯದಲ್ಲಿ ನಿಧಾನಗತಿಯ ಓವರ್ ಮಾಡಿದಕ್ಕಾಗಿ 12 ಲಕ್ಷ ತಂಡ ವಿಧಿಸಲಾಗಿದೆ.
ಇದನ್ನು ಓದಿ : ಬಾಲ್ಟಿಮೋರ್ ಬ್ರಿಡ್ಜ್ : ಕುಸಿತಕ್ಕೆ ಕಾರಣವಾದ ಹಡಗಿನಲ್ಲಿ 22 ಮಂದಿ ಭಾರತೀಯರು
ಇದು ಮೊದಲ ಓವರ್ ರೇಟ್ ಅಪರಾಧವಾಗಿರುವುದರಿಂದ ಶುಭಮನ್ ಗಿಲ್ 12 ಲಕ್ಷ ರೂಪಾಯಿ ದಂಡ ಎದುರಿಸಬೇಕಾಗಿದ್ದು, ಎರಡನೇ ಬಾರಿ ನಿಧಾನಗತಿಯ ಓವರ್ ರೇಟ್ ಕಂಡುಬಂದಲ್ಲಿ ನಾಯಕನು ಒಂದು ಪಂದ್ಯದ ನಿಷೇಧವನ್ನು ಎದುರಿಸಬೇಕಾಗುತ್ತದೆ.
ಇದು ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಈ ಟೂರ್ನಿಯ ಮೊದಲ ಅಪರಾಧವಾಗಿದೆ ಮತ್ತು ಕನಿಷ್ಠ ಮಿತಿಮೀರಿದ ಅಪರಾಧಗಳಿಗೆ ಸಂಬಂಧಿಸಿದಂತೆ 12 ಲಕ್ಷ ರೂಪಾಯಿ ತಂಡವನ್ನು ವಿಧಿಸಲಾಗಿದೆ ಎಂದು ಐಪಿಎಲ್ ಹೇಳಿಕೆ ನೀಡಿದೆ.
ಇದನ್ನು ಓದಿ : ಮೈದಾನದಲ್ಲಿ ಬ್ಯಾಟ್ ಬೀಸಿ ಎಲ್ಲರ ಗಮನ ಸೆಳೆಯುತ್ತಿರುವ ರಚಿನ್ ಲವ್ ಸ್ಟೋರಿ ಕೂಡಾ ಸಖತ್ ಫೇಮಸ್!ಇವರ ಮನಸ್ಸು ಕದ್ದ ಕನ್ನಡತಿ ಯಾರು ಗೊತ್ತಾ !
ಮೊದಲ ಬಾರಿಗೆ ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ನ ನಾಯಕತ್ವ ವಹಿಸಿಕೊಂಡಿರುವ ಗಿಲ್ ಮುಂಬೈ ವಿರುದ್ಧದ ಪಂದ್ಯದಲ್ಲಿ ಗೆಲುವನ್ನ ಅನುಭವಿಸಿದ್ದರು ಮತ್ತು ಎರಡನೇ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗುಜರಾತ್ 63 ರನ್ ಗಳ ಅಂತರದಿಂದ ಸೋಲನ್ನ ಅನುಭವಿಸಿತ್ತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.